ಸಿಬಿಐ ಬದಲು ಇ.ಡಿ. ದಾಳಿ
Team Udayavani, Nov 25, 2018, 6:00 AM IST
ಹೈದರಾಬಾದ್: ಕೇಂದ್ರದ ಮಾಜಿ ಸಚಿವ, ತೆಲುಗುದೇಶಂ ಪಕ್ಷದ (ಟಿಡಿಪಿ) ಸಂಸದ ವೈ.ಎಸ್.ಚೌಧರಿ ಅವರ ನಿವಾಸ ಹಾಗೂ ಅವರ ಮಾಲೀಕತ್ವದ ಸುಜನಾ ಗ್ರೂಪ್ ಆಫ್ ಇಂಡಸ್ಟ್ರೀಸ್‌ಗೆ ಸೇರಿದ ಕಚೇರಿಗಳ ಮೇಲೆ ಶುಕ್ರವಾರ ಹಾಗೂ ಶನಿವಾರ ಆದಾಯ ತೆರಿಗೆ ಇಲಾಖೆ (ಐಟಿ) ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ.) ಜಂಟಿ ದಾಳಿ ನಡೆಸಿವೆ. ಜತೆಗೆ, ಅವರ ಬಳಿಯಿದ್ದ 6 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ನ.27ರಂದು ಹಾಜರಾ ಗುವಂತೆ ನೋಟಿಸ್ ಕೂಡ ನೀಡಲಾಗಿದೆ.
ಚೌಧರಿ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಪ್ತರಾಗಿ ರುವುದರಿಂದ ಹಾಗೂ ಸಿಬಿಐಯನ್ನು ಆಂಧ್ರದೊಳಕ್ಕೆ ಕಾಲಿಡದಂತೆ ಇತ್ತೀಚೆಗೆ ನಾಯ್ಡು ನಿರ್ಬಂಧ ವಿಧಿಸಿದ್ದರಿಂದ, ಈಗ ಚೌಧರಿ ನಿವಾಸ, ಕಚೇರಿಗಳ ಮೇಲೆ ನಡೆದಿರುವ ದಾಳಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಸುಜನಾ ಚೌಧರಿ ಎಂದೇ ಖ್ಯಾತಿಯಾಗಿರುವ ವೈ.ಎಸ್. ಚೌಧರಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಹಾಯಕ ಸಚಿವರಾಗಿದ್ದರು. ಮಾರ್ಚ್‌ನಲ್ಲಿ ಟಿಡಿಪಿ, ಎನ್‌ಡಿಎ ಒಕ್ಕೂಟದಿಂದ ಹೊರಬಂದಿದ್ದರಿಂದ ಚೌಧರಿ ತಮ್ಮ ಸಚಿವ ಸ್ಥಾನ ತ್ಯಜಿಸಿದ್ದರು. ಅವರ ಮಾಲೀಕತ್ವದ ಸುಜನಾ ಗ್ರೂಪ್ ಆಫ್ ಇಂಡಸ್ಟ್ರೀಸ್ ಕಂಪನಿಯ ಕೆಲ ವ್ಯವಹಾರಗಳ ಬಗ್ಗೆ ಸಿಬಿಐ ಈ ಮೊದಲೇ ತನಿಖೆ ನಡೆಸುತ್ತಿದ್ದು ನ. 8 ರಂದು ನಾಯ್ಡು ಅವರು ಸಿಬಿಐಗೆ ಆಂಧ್ರ ಪ್ರದೇಶಕ್ಕೆ ಕಾಲಿಡದಿರುವಂತೆ ನಿರ್ಬಂಧ ಹೊರಡಿಸಿದ್ದರಿಂದ ಸುಜನಾ ಸಂಸ್ಥೆಯ ತನಿಖೆ ಇ.ಡಿ. ಹೆಗಲಿಗೆ ಬಂದಿವೆ. ಹಾಗಾಗಿ, ಈ ದಾಳಿಗಳು ನಡೆದಿವೆ ಎಂದೂ ವಿಶ್ಲೇಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್