J&K; ಭೂಕುಸಿತ ಸಂಭವಿಸಿ 2 ತಿಂಗಳ ಮಗು ಸೇರಿ ನಾಲ್ವರು ಬಲಿ
Team Udayavani, Mar 3, 2024, 10:47 AM IST
ರಿಯಾಸಿ: ಜಮ್ಮು ಮತ್ತು ಕಾಶ್ಮೀರದ ಮಹೋರ್ ಉಪ ವಿಭಾಗದ ಚಸ್ಸಾನಾ ಗ್ರಾಮದ ಮನೆಯ ಸಮೀಪ ಭಾನುವಾರ ಬೆಳಗ್ಗೆ ಭೂಕುಸಿತ ಸಂಭವಿಸಿ ನಾಲ್ವರು ಸಾವನ್ನಪ್ಪಿದ ಭೀಕರ ಅವಘಡ ಸಂಭವಿಸಿದೆ.
ಮೃತರೆಲ್ಲರೂ ಒಂದೇ ಮನೆಯವರಾಗಿದ್ದು, ರಾತ್ರಿ ಮಲಗಿದ್ದ ವೇಳೆ ಹಿಮಪಾತ ವಾಗಿದ್ದು ಮನೆ ಕುಸಿತಕ್ಕೊಳಗಾಗಿದೆ. ಎರಡು ತಿಂಗಳ ಮಗು, ಆಕೆಯ ತಾಯಿ ಮತ್ತು ಇತರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಈ ಪ್ರದೇಶವು ಭಾರೀ ಮಳೆಯಿಂದ ಸಾಧಾರಣ ಮಳೆಯಾದ ಕಾರಣ ಮನೆ ಕುಸಿದು ಅವಘಡ ಸಂಭವಿಸಿದೆ ಎಂದು ವಿಶೇಷ್ ರಿಯಾಸಿ ಜಿಲ್ಲಾಧಿಕಾರಿ ಪಾಲ್ ಮಹಾಜನ್ ತಿಳಿಸಿದ್ದಾರೆ.