ಮಾಲ್ನಲ್ಲಿ ಚಿರತೆ!
Team Udayavani, Feb 21, 2019, 12:30 AM IST
ಥಾಣೆ: ಇಲ್ಲಿನ ಶಾಪಿಂಗ್ ಮಾಲ್ ಹಾಗೂ ಹೊಟೇಲ್ ಕಾಂಪ್ಲೆಕ್ಸ್ವೊಂದರಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಜನರನ್ನು ಆತಂಕಕ್ಕೀಡು ಮಾಡಿದ ಘಟನೆ ಬುಧವಾರ ನಡೆದಿದೆ. ಬಳಿಕ ಆರು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಅರಣ್ಯ ಸಿಬಂದಿ ಸೆರೆಹಿಡಿದಿದ್ದಾರೆ. ಬೆಳಗಿನ ಜಾವ 5.30ರ ವೇಳೆಗೆ ಶಾಪಿಂಗ್ ಮಾಲ್ನಲ್ಲಿ ಕಾಣಿಸಿಕೊಂಡಿದ್ದ ಚಿರತೆ, ಬಳಿಕ ಹೊಟೇಲ್ ಕಾಂಪ್ಲೆಕ್ಸ್ ನ ನೆಲಮಾಳಿಗೆಯಲ್ಲಿ ಅವಿತು ಕುಳಿತಿತ್ತು. ವಿಚಾರ ತಿಳಿಯುತ್ತಿದ್ದಂತೆ, ಶಾಪಿಂಗ್ ಮಾಲ್ ಶೋಧ ನಡೆಸಲಾಯಿತು. ಕೊನೆಗೆ ನೆಲಮಾಳಿಗೆ ಯಲ್ಲಿ ಅವಿತು ಕುಳಿತಿದ್ದ ಚಿರತೆಗೆ ಕಣ್ಣಿಗೆ ಬೀಳುತ್ತಿದಂತೆ. ಅದಕ್ಕೆ ಬಲೆ ಬೀಸಿ ಸೆರೆಹಿಡಿಯಲಾಯಿತು. ಇದರಿಂದಾಗಿ ಆತಂಕಕ್ಕೆ ಒಳಗಾಗಿದ್ದ ಜನರು ನಿಟ್ಟುಸಿರು ಬಿಟ್ಟರು.