ಅತ್ತೆಯ ಸಾವನ್ನು ಸಂಭ್ರಮಿಸಿದ ಶಂಕೆಯಲ್ಲಿ ಪತ್ನಿಯನ್ನು ಕೊಂದ ಪತಿ
Team Udayavani, Mar 13, 2019, 1:55 PM IST
ಕೊಲ್ಹಾಪುರ : ತನ್ನ ತಾಯಿಯ ಸಾವಿಗೆ ಸಂಭ್ರಮಿಸಿದಳೆಂದು ಭಾವಿಸಿದ ಪತಿಯೋರ್ವ ಪತ್ನಿಯನ್ನು ಕೊಂದ ಘಟನೆ ಪಶ್ಚಿಮ ಮಹಾರಾಷ್ಟ್ರದಲ್ಲಿ ನಡೆದಿದೆ.
ಆರೋಪಿ ಸಂದೀಪ ಲೋಖಂಡೆಯ ಪತ್ನಿ ಶುಭಾಂಗಿ ಲೋಖಂಡೆ (35), ತನ್ನ ಅತ್ತೆ 70ರ ಹರೆಯದ ಮಾಲತಿ ಲೋಖಂಡೆ ಮರಣ ಹೊಂದಿದ ದುಃಖವನ್ನು ತಾಳಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಳೆಂದು ಮೊದಲಾಗಿ ಭಾವಿಸಲಾಗಿತ್ತು.
ಆದರೆ ಪೊಲೀಸರು ತನಿಖೆ ನಡೆಸಿದಾಗ ಶುಭಾಂಗಿ ಲೋಖಂಡೆಯನ್ನು ಆಕೆಯ ಪತಿ ಸಂದೀಪ್ ಲೋಖಂಡೆ ಕೊಲೆ ಮಾಡಿದ್ದೆಂದು ಗೊತ್ತಾಯಿತು.
ತನ್ನ ತಾಯಿಯ ಸಾವನ್ನು ಪತ್ನಿ ಸಂಭ್ರಮಿಸಿದಳೆಂಬ ಗುಮಾನಿಯಲ್ಲಿ ಸಂದೀಪ್ ತನ್ನ ಪತ್ನಿಯನ್ನು ಕೊಂದಿರುವುದು ಸಾಬೀತಾಯಿತು.