ನಟಿ ಸನುಶಾಗೆ ರೈಲಲ್ಲಿ ಲೈಂಗಿಕ ಕಿರುಕುಳ
Team Udayavani, Feb 3, 2018, 10:20 AM IST
ತಿರುವನಂತಪುರಂ: ಕಣ್ಣೂರಿನಿಂದ ತಿರುವನಂತಪುರಂಗೆ ಸಂಚರಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾಗಿ ಮಲಯಾಳಂ ನಟಿ ಸನುಶಾ ಸಂತೋಷ್(23) ಆರೋಪಿಸಿದ್ದಾರೆ. ದೂರಿನನ್ವಯ ಆ್ಯಂಟೋ ಬೋಸ್ ಎಂಬವರನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾವೇಲಿ ಎಕ್ಸ್ಪ್ರಸ್ನಲ್ಲಿ ಸಂಚರಿಸುತ್ತಿದ್ದಾಗ, ನಿದ್ದಿಗೆ ಜಾರಿದ್ದ ನಟಿಗೆ ಬೋಸ್ ಕಿರುಕುಳ ನೀಡುತ್ತಿದ್ದ. ಎಚ್ಚೆತ್ತ ಆಕೆ, ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕೂಗಾಡಿದರೂ, ರೈಲಲ್ಲಿದ್ದ ಯಾರೂ ನೆರವಿಗೆ ಬರಲಿಲ್ಲ ಎಂದು ಆರೋಪಿಸಿದ್ದಾರೆ.