ವೈದ್ಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಶೀಘ್ರ ಕೇಂದ್ರ ನಿರ್ಧಾರ
Team Udayavani, Mar 5, 2022, 8:00 AM IST
ನವದೆಹಲಿ: ಉಕ್ರೇನ್ನಲ್ಲಿ ಎಂಬಿಬಿಎಸ್ ಅರ್ಧಕ್ಕೇ ಸ್ಥಗಿತಗೊಳಿಸಿ, ದೇಶಕ್ಕೆ ವಾಪಸ್ ಬಂದ ವಿದ್ಯಾರ್ಥಿಗಳ ಭವಿಷ್ಯ ಏನು? ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ), ವಿದೇಶಾಂಗ ಸಚಿವಾಲಯ, ನೀತಿ ಆಯೋಗ ಶೀಘ್ರವೇ ಸಭೆ ನಡೆಸಿ ಮಾರ್ಗೊಪಾಯಗಳನ್ನು ಕಂಡುಹಿಡಿಯುವ ಸಾಧ್ಯತೆಗಳಿವೆ.
ಇದರ ಜತೆಗೆ ವಿದೇಶಗಳಲ್ಲಿ ಎಂಬಿಬಿಎಸ್ ಪೂರ್ತಿಗೊಳಿಸಿದವರಿಗೆ ದೇಶದಲ್ಲಿ ಪ್ರ್ಯಾಕ್ಟೀಸ್ ಮಾಡಲು ಅನುಮತಿಗೆ ಬೇಕಾಗಿರುವ ಪರೀಕ್ಷೆ ಫಾರಿನ್ ಮೆಡಿಕಲ್ ಗ್ರ್ಯಾಜ್ಯುವೇಟ್ ಲೈಸನ್ಸ್- ಎಫ್ಎಂಜಿಎಲ್ನ ನಿಯಮಾವಳಿಗಳನ್ನು ಸರಳಗೊಳಿಸುವ ಬಗ್ಗೆಯೂ ಆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಗಳಿವೆ.
ಎನ್ಎಂಸಿಯ ಎಫ್ಎಂಜಿಎಲ್ ನಿಯಮಗಳ ಪ್ರಕಾರ ಎಂಬಿಬಿಎಸ್, ತರಬೇತಿ ಮತ್ತು ಇಂಟರ್ನ್ಶಿಪ್ ಅನ್ನು ವಿದೇಶದಲ್ಲಿ ಪೂರ್ತಿಗೊಳಿಸಿದ್ದರೆ ಈ ಪರೀಕ್ಷೆ ಬರೆಯಬೇಕಾಗುತ್ತದೆ. ಸದ್ಯ ಇರುವ ನಿಯಮಗಳ ಪ್ರಕಾರ ವಿದೇಶಗಳಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದು, ಕಾರಣಾಂತರಗಳಿಂದ ಅದನ್ನು ದೇಶದಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸಲು ಅವಕಾಶ ಇಲ್ಲ ಎಂದು ಹಿರಿಯ ಅಧಿಕಾರಿ ನವದೆಹಲಿಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!