ಮೇಘಾಲಯ ಸಿಎಂ ಎರಡು ಕ್ಷೇತ್ರದಿಂದ ವಿಧಾನ ಸಭೆಗೆ ಸ್ಪರ್ಧೆ
Team Udayavani, Feb 9, 2018, 3:54 PM IST
ಶಿಲಾಂಗ್ : ಐದನೇ ಬಾರಿಗೆ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸುವ ಸಿದ್ಧತೆಯಲ್ಲಿರುವ ಸಿಂಎಂ ಮುಕುಲ್ ಸಂಗ್ಮಾ ಅವರು ಇದೇ ಮೊದಲ ಬಾರಿಗೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.
ತಮ್ಮ ಸಾಂಪ್ರದಾಯಿಕ ಅಂಪಾಟಿ ಕ್ಷೇತ್ರವಲ್ಲದೆ ಮುಕುಲ್ ಸಂಗ್ಮಾ ಎರಡನೇ ಕ್ಷೇತ್ರದಲ್ಲಿ ಸ್ಪರ್ಧಿಸಲು ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಎಂದರೆ ಸಂಗ್ಮಾ ಅವರು ದಕ್ಷಿಣ ಗ್ಯಾರೋ ಹಿಲ್ಸ್ ಜಿಲ್ಲೆಯ ಅಂಪಾಟಿ ಕ್ಷೇತ್ರದಿಂದ ಮತ್ತು ಪೂರ್ವ ಗ್ಯಾರೋ ಹಿಲ್ಸ್ ಜಿಲ್ಲೆಯ ಸೋಂಗ್ಸಾಕ್ ಕ್ಷೇತ್ರದಿಂದ ಇದೇ ಫೆ.27ರಂದುನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವರು.
ಮುಕುಲ್ ಸಂಗ್ಮಾ ಅವರು ಕಳೆದ ಹತ್ತು ವರ್ಷಗಳಿಂದ ಮೇಘಾಲಯದ ಮುಖ್ಯಮಂತ್ರಿಯಾಗಿದ್ದಾರೆ.