JEE ಪರೀಕ್ಷೆಯಲ್ಲಿ ಕಡಿಮೆ ಅಂಕ: 11 ದಿನ ಬಳಿಕ ವಿದ್ಯಾರ್ಥಿ ಪತ್ತೆ
Team Udayavani, Feb 25, 2024, 6:05 AM IST
ಜೈಪುರ: ಕಳೆದ ಫೆ. 13ರಂದು ರಾಜಸ್ಥಾನದ ಕೋಟಾದಲ್ಲಿನ ಹಾಸ್ಟೆಲ್ವೊಂದರಿಂದ ನಾಪತ್ತೆಯಾಗಿದ್ದ ಜೆಇಇ ಆಕಾಂಕ್ಷಿ 17 ವರ್ಷದ ಪಿಯೂಷ್ 11 ದಿನಗಳ ಬಳಿಕ ಹಿಮಾಚಲ ಪ್ರದೇಶದ ಧರ್ಮ ಶಾಲಾದಲ್ಲಿ ಪತ್ತೆಯಾಗಿ ರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. 2 ವರ್ಷಗಳಿಂದ ಕೋಟಾದ ತರಬೇತಿ ಸಂಸ್ಥೆಯೊಂದರಲ್ಲಿ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಉ.ಪ್ರ.ದ ಬುಲಂದ್ಶಹರ್ನ ವಿದ್ಯಾರ್ಥಿ ನಾಪತ್ತೆಯಾಗಿದ್ದ. ಫೆ. 13ರಂದು ಕೊನೆಯ ಬಾರಿಗೆ ಆತ ತನ್ನ ಪೋಷಕರೊಂದಿಗೆ ಮಾತನಾಡಿದ್ದ. ಅನಂತರ ಪೋಷಕರ ಕರೆ ಸ್ವೀಕರಿಸದೆ, ಫೋನ್ ಸ್ವಿಚ್ ಆಫ್ ಮಾಡಿದ್ದ.