ನಾಯ್ಡು ಪರಿಶೀಲನೆ ವಿವಾದ
Team Udayavani, Jun 16, 2019, 7:44 AM IST
ವಿಜಯವಾಡ: ದಿಲ್ಲಿಗೆ ಪ್ರಯಾಣ ಬೆಳೆಸಲು ಶುಕ್ರವಾರ ರಾತ್ರಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಜನಸಾಮಾನ್ಯರಂತೆ ಪರಿಶೀಲನೆ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಮಾವೋವಾದಿಗಳ ಟಾರ್ಗೆಟ್ ಆಗಿರುವ ಅವರಿಗೆ ಕೇಂದ್ರ ಸರಕಾರ ಝೆಡ್ ಪ್ಲಸ್ ಭದ್ರತೆ ನೀಡಿದೆ. ಅಂಥ ಭದ್ರತೆ ಇರುವವರಿಗೆ ವಿಮಾನ ನಿಲ್ದಾಣದಲ್ಲಿ ವಿಮಾನ ಇರುವ ಕಡೆಗೆ ನೇರವಾಗಿ ತಮ್ಮ ವಾಹನಗಳಲ್ಲಿ ತೆರಳಿ ವಿಮಾನ ಹತ್ತಬಹುದು.
ಆದರೆ, ಶುಕ್ರವಾರ ರಾತ್ರಿ ವಿಮಾನ ನಿಲ್ದಾಣದ ಮುಖ್ಯ ದ್ವಾರದಲ್ಲೇ ನಾಯ್ಡು ಅವರ ಭದ್ರತಾ ವಾಹನಗಳನ್ನು ತಡೆಯಲಾಗಿದ್ದು, ಅವರನ್ನು ಸಾಮಾನ್ಯರಂತೆ ಪರಿಶೀಲನೆಗೊಳಪಡಿಸಲಾಯಿತು. ಆಅನಂತರ, ಟರ್ಮಿನಲ್ ಮೂಲಕ ಸಾಗುವ ಬಸ್‌ನಲ್ಲಿ ಜನಸಾಮಾನ್ಯರ ಜತೆ ವಿಮಾನದ ಕಡೆ ಕರೆದೊಯ್ಯಲಾಯಿತು ಎನ್ನಲಾಗಿದೆ. ಇದನ್ನು ತೀವ್ರವಾಗಿ ಟೀಕಿಸಿರುವ ಟಿಡಿಪಿ, ನಾಯ್ಡು ಅವರನ್ನು ನಡೆಸಿಕೊಂಡಿರುವ ರೀತಿ ‘ಅಧಿಕಾರ ದರ್ಪದ ಪ್ರತೀಕ’ ಎಂದು ಕರೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಾಜ್ ಮಹಲ್ ಅಡಿಯಲ್ಲಿ ಪ್ರಧಾನಿಯ ಡಿಗ್ರಿ ಹುಡುಕುತ್ತಿದ್ದಾರೆ: ಓವೈಸಿ ವ್ಯಂಗ್ಯ
ಕೇದಾರನಾಥದ ಕಸದ ರಾಶಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ವಿಜ್ಞಾನ ವಿಸ್ಮಯ: 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ !!
ಪಾಕ್ ಗಡಿಯಲ್ಲಿ ಬಾಂಬ್, ಗ್ರೆನೇಡ್ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ
ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್ ರೈಲುಗಳಿಗೆ ಕಲ್ಲು ತೂರಾಟ!