25ಕ್ಕೆ ಅಮೆರಿಕಕ್ಕೆ ಮೋದಿ
Team Udayavani, Jun 13, 2017, 2:34 AM IST
ಹೊಸದಿಲ್ಲಿ: ಜಾಗತಿಕ ಹವಾಮಾನ ಬದಲಾವಣೆ ಕುರಿತಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಹೀಗಳೆದ ಬೆನ್ನಲ್ಲೇ, ಈ ಮಾಸಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಜೂ. 25 ಮತ್ತು 26ರಂದು ಮೋದಿ ಅವರು ಶ್ವೇತಭವನದಲ್ಲಿ ದ್ವಿಪಕ್ಷೀಯ ಸಂಬಂಧ ಕುರಿತಂತೆ ಟ್ರಂಪ್ ಜತೆ ಮಾತು ಕತೆ ನಡೆಸಲಿದ್ದಾರೆ.
ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಜತೆಗೆ ಮುನಿಸಿಕೊಂಡಿರುವ ಟ್ರಂಪ್, ಜಾಗತಿಕ ತಾಪಮಾನ ವಿಚಾರದಲ್ಲಿ ಚೀನ ಮತ್ತು ಭಾರತದ ವಿರುದ್ಧ ಮಾತನಾಡಿ ಕೆಲವು ಅಸಮಾಧಾನಗಳಿಗೂ ಕಾರಣವಾಗಿದ್ದಾರೆ. ಜತೆಗೆ ಅಮೆರಿಕ ಫಸ್ಟ್ ಎನ್ನುವ ಅವರ ನೀತಿಯಿಂದಾಗಿ, ಅಂತಾರಾಷ್ಟ್ರೀಯ ಕಂಪೆನಿಗಳು ಭಾರತದ ಉದ್ಯೋಗಿಗಳ ಕೊರತೆ ಅನುಭವಿಸುತ್ತಿವೆ. ಭಾರತದ ಐಟಿ ಮಂದಿಗೆ ಎಂದಿಗೂ ಬಾಗಿಲು ತೆರೆದಿದ್ದ ಅಮೆರಿಕದ ಸಿಲಿಕಾನ್ ವ್ಯಾಲಿ ಪ್ರವೇಶಕ್ಕೆ ಟ್ರಂಪ್ ನಿರ್ಬಂಧ ಹೇರಿದ್ದಾರೆ. ಈ ಎಲ್ಲ ಅಂಶಗಳ ಬಗ್ಗೆ ಮೋದಿ ಅವರು, ಟ್ರಂಪ್ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೆಲ್ಲದಕ್ಕಿಂತ ಹೆಚ್ಚಾಗಿ, ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆ ಬಗ್ಗೆಯೂ ಮೋದಿ ಅವರು ಟ್ರಂಪ್ ಜತೆ ಪ್ರಸ್ತಾವ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ಟ್ರಂಪ್ ಭೇಟಿ ಮಾಡಲು ಅಮೆರಿಕಕ್ಕೆ ಹೋದ ಜಗತ್ತಿನ ಹಲವಾರು ನಾಯಕರಿಗೆ ಇರಿಸು ಮುರಿಸು ಆಗಿದ್ದೇ ಹೆಚ್ಚು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!