ರಾಜಕೀಯ ಪಕ್ಷಗಳಲ್ಲಿ ಹೆಚ್ಚಿನ ಪ್ರಜಾಸತ್ತೆ ಅಗತ್ಯ: ಮೋದಿ
Team Udayavani, Oct 28, 2017, 3:18 PM IST
ಹೊಸದಿಲ್ಲಿ: ರಾಜಕೀಯ ಪಕ್ಷಗಳಲ್ಲಿ ಇನ್ನೂ ಹೆಚ್ಚಿನ ಆಂತರಿಕ ಪ್ರಜಾಸತ್ತೆ ಇರಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ ಮೂರು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ದಿಲ್ಲಿಯಲ್ಲಿನ ಪ್ರಧಾನ ಕಾರ್ಯಾಲಯದಲ್ಲಿ, ಏರ್ಪಡುವ ದೀಪಾವಳಿ ಸಮಾರಂಭದಲ್ಲಿ ಮಾಧ್ಯಮದೊಂದಿಗಿನ ಸ್ನೇಹ-ಸೌಹಾರ್ದ-ಸಂವಾದದಲ್ಲಿ ಮಾತನಾಡುತ್ತಿದ್ದ ಅವರು, ಮಾಧ್ಯಮಗಳು ಅತ್ಯಂತ ಪ್ರಭಾವಶಾಲಿಯಾಗಿದ್ದು ಜನರ ಮೇಲೆ, ಸರಕಾರದ ಮೇಲೆ ಭಾರೀ ಪ್ರಭಾವವನ್ನು ಬೀರುವ ಸಾಮರ್ಥ್ಯ ಹೊಂದಿವೆ ಎಂದರು.
ಸರಕಾರದ ಸ್ವಚ್ಚ ಭಾರತ ಆಂದೋಲನಕ್ಕೆ ಮಾಧ್ಯಮಗಳು ನೀಡಿರುವ ಅಭೂತಮಪೂರ್ವ ಬೆಂಬಲ, ಪ್ರೋತ್ಸಾಹವನ್ನು ಪ್ರಶಂಸಿಸಿದ ಮೋದಿ, ಈಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಸರಕಾರದ ವಿರುದ್ಧ ಪುಂಖಾನುಪುಂಖವಾಗಿ ಟೀಕೆಗಳೇ ಕಾಣುತ್ತಿವೆ; ಹಾಗಿದ್ದರೂ ಸರಕಾದ ಉತ್ತಮ ಕೆಲಸಗಳನ್ನು ಮಾಧ್ಯಮಗಳು ಬೆಂಬಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮೋದಿ ಹೇಳಿದರು.
ಮಾಧ್ಯಮ ಮತ್ತು ರಾಜಕಾರಣಿಗಳ ನಡುವಿನ ಸಂಬಂಧದ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಈಚಿನ ದಿನಗಳಲ್ಲಿ ನಾವು – ನೀವು ಜತೆಗೂಡಿ ಹರಟುತ್ತಿಲ್ಲ, ನಿಮಗೆ ಪುರಸೊತ್ತೇ ಸಿಗುತ್ತಿಲ್ಲ ಎಂದು ನೀವು ದೂರುತ್ತೀರಿ; ಅದೊಂದು ಕಾಲವಿತ್ತು, ನಾನು ಮಾತನಾಡಲು ಬಯಸಿದಾಗ ನೀವು ಕಾಣ ಸಿಗುತ್ತಿರಲಿಲ್ಲ; ಈಗ ಕಾಲ ಬದಲಾಗಿದೆ. ನಮ್ಮ – ನಿಮ್ಮ ನಡುವಿನ ಮಾತುಕತೆಗೆ ಸಮಯವೇ ಇಲ್ಲವಾಗಿದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !