ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಇನ್ನೂ ವಿಳಂಬ

ಸುಪ್ರೀಂಕೋರ್ಟ್‌ನಲ್ಲಿ ಆರೋಪಿ ಅಕ್ಷಯ್‌ ಕುಮಾರ್‌ ಸಲ್ಲಿಸಿದ ಅರ್ಜಿ 17ಕ್ಕೆ ವಿಚಾರಣೆ; ಮರು ಪರಿಶೀಲನೆ ಬೇಡವೇ ಬೇಡ ಎಂದು ನಿರ್ಭಯಾ ತಾಯಿ ಮೇಲ್ಮನವಿ

Team Udayavani, Dec 13, 2019, 8:12 PM IST

ನವದೆಹಲಿ: ನಿರ್ಭಯಾ ಗ್ಯಾಂಗ್‌ ರೇಪ್‌ ಆರೋಪಿಗಳ ವಿರುದ್ಧ ಗಲ್ಲು ಶಿಕ್ಷೆ ಜಾರಿ ಬಗ್ಗೆ ವಾರಂಟ್‌ ಹೊರಡಿಸಿರುವ ಬಗ್ಗೆ ನವದೆಹಲಿಯ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಅದನ್ನು ಡಿ.18ರಂದು ವಿಚಾರಣೆ ನಡೆಸುವುದಾಗಿ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ನ ನ್ಯಾಯಾಧೀಶ ಸತೀಶ್‌ ಕುಮಾರ್‌ ಅರೋರಾ ಶುಕ್ರವಾರ ತಿಳಿಸಿದ್ದಾರೆ. ಹೀಗಾಗಿ, ಅತ್ಯಾಚಾರಿಗಳಿಗೆ ನೇಣು ಶಿಕ್ಷೆ ಜಾರಿಯಾಗುವ ದಿನಗಳು ಮುಂದೂಡಿಕೆಯಾಗುವುದು ಖಚಿತವಾಗಿದೆ. ವಿಚಾರಣೆ ವೇಳೆ ಮಾತನಾಡಿದ ನ್ಯಾಯಾಧೀಶ ಸತೀಶ್‌ ಕುಮಾರ್‌ “ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆ ಮಾಡಲಾಗಿರುವ ಮರು ಪರಿಶೀಲನಾ ಅರ್ಜಿ ಇತ್ಯರ್ಥವಾಗುವ ವರೆಗೆ ಕಾಯಬೇಕು ನಾನು’ ಎಂದರು.

ನಿರ್ಭಯಾ ತಾಯಿ ವಿರೋಧ: ಆರೋಪಿ ಅಕ್ಷಯ ಕುಮಾರ್‌ ಗಲ್ಲು ಶಿಕ್ಷೆ ಮರು ಪರಿಶೀಲಿಸಿ ಸಲ್ಲಿಕೆ ಮಾಡಿರುವ ಅರ್ಜಿಯನ್ನು ವಿರೋಧಿಸಿ ನಿರ್ಭಯಾ ತಾಯಿ ಶುಕ್ರವಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಡಿ.17ರಂದು ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬೆx ನೇತೃತ್ವದ ನ್ಯಾಯಪೀಠ ಹೇಳಿತು.

ನಾನು ರೆಡಿ: ಹಂತಕರಿಗೆ ಶೀಘ್ರ ಗಲ್ಲು ಶಿಕ್ಷೆ ಜಾರಿ ಮಾಡಬೇಕು ಎಂಬ ಒತ್ತಾಯ ನಡುವೆಯೇ ಮೀರತ್‌ನ ವ್ಯಕ್ತಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡುವ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾನೆ. ಆತ ಮೀರತ್‌ ಜೈಲಲ್ಲಿ ನೇಣಿಗೇರಿಸುವ ಕೆಲಸ ಮಾಡುತ್ತಿದ್ದಾನೆ. ಪವನ್‌ ಜಲ್ಲಾದ್‌ (55) ಎಂಬ ಈ ವ್ಯಕ್ತಿ ತನ್ನ ಅಜ್ಜ ಇಂದಿರಾ ಗಾಂಧಿ ಹಂತಕರಿಗೆ ಗಲ್ಲು ಶಿಕ್ಷೆ ಜಾರಿ ಕೆಲಸ ಮಾಡಿದ್ದರು ಎಂದು ಹೇಳಿಕೊಂಡಿದ್ದಾನೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ