ನೋಕಿಯಾ 3310ಕ್ಕೆ ಮೇ 5ರಿಂದ ಬುಕಿಂಗ್
Team Udayavani, Apr 28, 2017, 1:48 AM IST
ಹೊಸದಿಲ್ಲಿ: ನೋಕಿಯಾದ 3310 ಮಾದರಿಯ ಮೊಬೈಲ್ ಭಾರತೀಯ ಗ್ರಾಹಕರ ಕೈ ಸೇರಲು ತಯಾರಾಗಿದೆ. ಆನ್ಲೈನ್ ವ್ಯಾಪಾರ ತಾಣ ಓನ್ಲಿಮೊಬೈಲ್ನಲ್ಲಿ ಗ್ರಾಹಕರು ಮೇ 5ರಿಂದ ಆನ್ಲೈನ್ ಬುಕಿಂಗ್ ಮಾಡಬಹುದು. ಫೆಬ್ರವರಿಯಲ್ಲೇ ನೋಕಿಯಾ 3310 ಬಾರ್ಸಿಲೋ ನಾದಲ್ಲಿ ಬಿಡುಗಡೆಯಾಗಿದೆ. ಫೋನುಗಳು ಮೇ17ರಿಂದ ಭಾರತಕ್ಕೆ ರವಾನೆಯಾಗಲಿವೆ.