ಮ್ಯಾಟ್ರೋಮೋನಿಯಲ್ನಿಂದ ಪರಿಚಯ… ನರ್ಸ್ಗೆ ಬರೋಬ್ಬರಿ 40 ಲಕ್ಷ ರೂ.ಪಂಗನಾಮ
ಮದುವೆ ಆಗೋದಾಗಿ ನಂಬಿಸಿ 40 ಲಕ್ಷ.ರೂ ವಂಚನೆ
Team Udayavani, Mar 7, 2021, 1:33 PM IST
ಮುಂಬೈ : ಮ್ಯಾಟ್ರೋಮೋನಿಯಲ್ ಮೂಲಕ ಪರಿಚಯವಾದ ಆಗಂತುಕನೋರ್ವ ನರ್ಸ್ವೊರ್ವಳಿಗೆ ಬರೋಬ್ಬರಿ 40 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ನಡೆದಿದೆ. ನಾಗ್ಪುರ್ ನಿವಾಸಿ ರಾಹುನಾಲ್ ದಿಲೀಪ್ ಜಂಬುಲ್ಕರ್ ವಂಚನೆ ಎಸಗಿರುವ ಖದೀಮ.
ಕಳೆದ ಎರಡು ವರ್ಷಗಳ ಹಿಂದೆ ಮ್ಯಾಟ್ರೋಮೋನಿಯಲ್ ಮೂಲಕ 28 ವರ್ಷ ವಯಸ್ಸಿನ ನರ್ಸ್ ಪರಿಚಯ ಮಾಡಿಕೊಂಡಿದ್ದ. ನಂತರ ಪರಸ್ಪರ ಇಬ್ಬರ ನಡುವೆ ಸ್ನೇಹವಾಗಿತ್ತು. ಮದುವೆ ಯಾಗುತ್ತೇನೆಂದು ಸುಳ್ಳು ಭರವಸೆ ನೀಡದ್ದರಿಂದ ನರ್ಸ್ ಆತನನ್ನು ಸಂಪೂರ್ಣವಾಗಿ ನಂಬಿದ್ದಳು.
ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದೇನೆ, ಆದರೆ, ಸರಿಯಾಗಿ ಸಂಬಳ ನೀಡುತ್ತಿಲ್ಲ. ಆರೋಗ್ಯ ಸಮಸ್ಯೆ ಕಾಡುತ್ತಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ನಂಬಿಸಿದ್ದ ವಂಚಕ, ನರ್ಸ್ ಕಡೆಯಿಂದ ಬೇರೆ ಬೇರೆ ದಿನಗಳಲ್ಲಿ 40 ಲಕ್ಷ ರೂ. ಹಣ ಪೀಕಿದ್ದ.
ಮದುವೆ ಮಾತು ತೆಗೆದಾಗೆಲ್ಲ, ಜಾಗರೂಕತೆಯಿಂದ ಜಾರಿಕೊಳ್ಳುತ್ತಿದ್ದರಿಂದ ಅನುಮಾನಗೊಂಡ ನರ್ಸ್, ಆತನ ಫೇಸ್ಬುಕ್ ಜಾಲಾಡಿದ್ದಾಳೆ. ಈ ವೇಳೆ ಆತನು ಬೇರೆ ಹುಡುಗಿಯರಿಗೆ ಮೋಸ ಮಾಡಿದ್ದು ಹಾಗೂ ಅವನಿಗೆ ಈಗಾಗಲೇ ಮದುವೆಯಾಗಿದ್ದು ಕಂಡು ತಾನು ಮೋಸಹೋಗಿರುವುದು ಗೊತ್ತಾಗಿದೆ. ಇನ್ನು ಮೋಸದಾಟಕ್ಕೆ ಬಲಿಯಾಗಿರುವುದು ತಿಳಿಯುತ್ತಿದ್ದಂತೆ ಮುಂಬೈ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾಳೆ. ಐಪಿಸಿ ಸೆಕ್ಷನ್ 420ರಡಿ ಜಂಬುಲ್ಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ