ತಾಜ್ಮಹಲ್ ಪ್ರವೇಶ ಶುಲ್ಕ ಹೆಚ್ಚಿಸಲು ಪ್ರಸ್ತಾವ
Team Udayavani, Jan 14, 2018, 11:31 AM IST
ಆಗ್ರಾ: ಉತ್ತರ ಭಾರತ ಪ್ರವಾಸ ಕೈಗೊಂಡಾಗ ಆಗ್ರಾದಲ್ಲಿರುವ ತಾಜ್ಮಹಲ್ಗೆ ಭೇಟಿ ನೀಡುವ ಇರಾದೆ ಇದ್ದರೆ ಈ ಅಂಶ ಗಮನಿಸಿ. ಪ್ರೇಮ ಸೌಧಕ್ಕೆ ಇರುವ ಪ್ರವೇಶ ಶುಲ್ಕ 10 ರೂ.ಗಳಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಹಾಲಿ 30 ರೂ.ಗಳಿಂದ 40 ರೂ.ಗಳಿಗೆ ಪರಿಷ್ಕರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಎರಡು ವರ್ಷದಲ್ಲಿ ಎರಡನೇ ಬಾರಿಗೆ ಶುಲ್ಕ ಪರಿಷ್ಕರಣೆ ಮಾಡುವ ಪ್ರಸ್ತಾವ ಇದು ಎಂದು ಆಕ್ಷೇಪ ವ್ಯಕ್ತವಾಗಿದೆ.