Seema Haider: ಸಿನಿಮಾದಲ್ಲಿ ರಾ ಅಧಿಕಾರಿಯಾಗಿ ನಟಿಸಲಿದ್ದಾರೆ ಪಾಕ್ ಮಹಿಳೆ ಸೀಮಾ ಹೈದರ್
Team Udayavani, Aug 3, 2023, 12:02 PM IST
ಮುಂಬಯಿ: ಪಬ್ ಜಿ ಆಡಿ ಅಕ್ರಮವಾಗಿ ಭಾರತಕ್ಕೆ ಬಂದ ಪಾಕ್ ಮೂಲದ ಸೀಮಾ ಹೈದರ್ ಅವರ ಕುರಿತು ಕಳೆದ ಕೆಲ ದಿನಗಳಿಂದ ಹಲವಾರು ಸುದ್ದಿಗಳು ಹರಿದಾಡುತ್ತಿದೆ. ಸದ್ಯ ತನಿಖಾ ಸಂಸ್ಥೆಗಳನ್ನು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಜಿ ಗೇಮ್ ಆಡಿ ಸೋಶಿಯಲ್ ಮೀಡಿಯಾ ಮೂಲಕ ಪ್ರೀತಿಗೆ ಬಿದ್ದು ಗ್ರೇಟರ್ ನೋಯ್ಡಾದ ಸಚಿನ್ ಅವರಿಗಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಸೀಮಾ ಹೈದರ್ ಅವರ ಕಥೆ ಎಲ್ಲೆಡೆ ವೈರಲ್ ಆಗಿರುವುದು ಗೊತ್ತೇ ಇದೆ. ಈಗ ಸೀಮಾ ಹೈದರ್ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬಂದಿದೆ.
ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ಜಾನಿ ಫೈರ್ಫಾಕ್ಸ್ ಪ್ರೊಡಕ್ಷನ್ ಹೌಸ್ ಮಂಗಳವಾರ ( ಆ.1 ರಂದು) ಗ್ರೇಟರ್ ನೋಯ್ಡಾದ ಸಚಿನ್ – ಸೀಮಾ ಅವರ ನಿವಾಸಕ್ಕೆ ಭೇಟಿ ಕೊಟ್ಟಿದೆ. ಅವರ ಪಾತ್ರದ ಅಡಿಷನ್ ತೆಗೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಇಸ್ಲಾಮಿಕ್ ಮೂಲಭೂತವಾದಿಗಳಿಂದ ಹತ್ಯೆಯಾದ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಕುರಿತಾದ ಸಿನಿಮಾದಲ್ಲಿ ಸೀಮಾ ಹೈದರ್ ಅವರು ರಾ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೀಮಾ ಹಾಗೂ ಸಚಿನ್ ಅವರು ಚಿತ್ರದ ನಿರ್ದೇಶಕರಾದ ಜಯಂತ್ ಸಿನ್ಹಾ ಮತ್ತು ಭರತ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಸಚಿನ್ ಹಾಗೂ – ಸೀಮಾ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ದಿನಕಳೆದಂತೆ ಅವರ ದಿನನಿತ್ಯದ ಖರ್ಚಿಗೆ ಕಷ್ಟವಾಗುತ್ತಿದ್ದು, ಈ ಕುರಿತು ಇತ್ತೀಚೆಗೆ ಸಚಿನ್ – ಸೀಮಾ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?