ಸತಿ ಸಹಗಮನ ಪರ, ವಿರೋಧ ಚರ್ಚೆ
Team Udayavani, May 28, 2019, 6:00 AM IST
ಹೊಸದಿಲ್ಲಿ: ಶತಮಾನಗಳ ಹಿಂದೆ ಭಾರತೀಯ ಸಮಾಜದ ಪಿಡು ಗಾಗಿದ್ದ “ಸತಿ ಸಹಗಮನ’ ಪದ್ಧತಿಯ ಬಗ್ಗೆ ಮೆಚ್ಚುಗೆ ಪಡಿಸಿರುವ ಬಾಲಿವುಡ್ ನಟಿ ಪಾಯಲ್ ರೋಹಟಗಿ, ಈ ಪೈಶಾಚಿಕ ಪದ್ಧತಿ ಭಾರತದಿಂದ ನಿರ್ಮೂಲನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ, ಪಶ್ಚಿಮ ಬಂಗಾಳದ ಸಮಾಜ ಸುಧಾರಕ ರಾಜಾರಾಮ್ ಮೋಹನ್ ರಾಯ್ ಅವರನ್ನು ದೇಶದ್ರೋಹಿ ಎಂದು ಕರೆದಿರುವುದು ಟ್ವಿಟರ್ನಲ್ಲಿ ಜಗಳಕ್ಕೆ ಕಾರಣವಾಗಿದೆ.
ಪತಿವ್ರತೆಯರ ಪಾವಿತ್ರ್ಯತೆ ಕಾಪಾಡುವ ಸತಿ ಸಹಗಮನ ಪದ್ಧತಿ ವಿರುದ್ಧ ರಾಜಾರಾಮ್ ಮೋಹನ್ ರಾಯ್ ಹೋರಾಟ ನಡೆಸಿದರು. ರಾಯ್ ಒಬ್ಬ ದೇಶ ದ್ರೋಹಿ, ಬ್ರಿಟಿಷರ ಚಮಚಾ ಎಂದು ಪಾಯಲ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ಪರ- ವಿರೋಧ ಚರ್ಚೆ ಶುರುವಾಗಿದೆ. ಕೆಲವರು, ಪಾಯಲ್ ಅವರೇ ನೀವು ಜೌಹಾರ್ (ಸ್ವ ಇಚ್ಛೆಯ ಸಹಗಮನ) ಹಾಗೂ ಸತಿ ಸಹಗಮನಗಳ ವ್ಯತ್ಯಾಸ ಕಂಡುಕೊಂಡಿಲ್ಲ ಎಂದಿದ್ದರೆ, ಕೆಲವರು ಪಾಯಲ್ ಪರ ಮಾತನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ