ಹಜ್ಯಾತ್ರೆ: ಪ್ರಯಾಣ ದರ ಅಗ್ಗ
Team Udayavani, Feb 28, 2018, 7:30 AM IST
ಹೊಸದಿಲ್ಲಿ: ಹಜ್ ಯಾತ್ರಿಕರಿಗೆ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದೆ. ಕಳೆದ ತಿಂಗಳಷ್ಟೇ ಹಜ್ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಿದ್ದ ಕೇಂದ್ರ ಸರಕಾರ, ಈಗ, ಯಾತ್ರೆ ಕೈಗೊಳ್ಳುವವರಿಗೆ ವಿಮಾನ ಟಿಕೆಟ್ ದರದಲ್ಲಿ ವಿನಾಯಿತಿ ನೀಡಿದೆ. ಏರ್ ಇಂಡಿಯಾ, ಸೌದಿ ಏರ್ಲೈನ್ಸ್ ಹಾಗೂ ಫ್ಲೈನಾಸ್ ವಿಮಾನಗಳಲ್ಲಿ ಪ್ರಯಾಣಿಸುವ ಯಾತ್ರಿಕರಿಗೆ ಈ ಸೌಲಭ್ಯ ಸಿಗಲಿದೆ.
ಮಂಗಳವಾರ, ಈ ವಿಚಾರ ಪ್ರಕ ಟಿಸಿದ ಕೇಂದ್ರ ಸಚಿವ ಮುಖಾ¤ರ್ ಅಬ್ಟಾಸ್ ನಖೀÌ, 2013-14ರಲ್ಲಿ ಅಹ್ಮದಾಬಾದ್ನಿಂದ ಸೌದಿಗೆ ಹೋಗುವ ಯಾತ್ರಿಕನೊಬ್ಬ ಟಿಕೆಟ್ ರಿಯಾಯಿತಿ ಇದ್ದರೂ ಒಂದು ಪ್ರಯಾಣಕ್ಕೆ 98,750 ರೂ. ನೀಡಬೇಕಿತ್ತು. ಈಗ, ಇದು 65,015 ರೂ. ಆಗಲಿದೆ. ಅಂತೆಯೇ, ಮುಂಬಯಿಯಿಂದ ಸೌದಿಗೆ ಹೋಗುವ ಏರ್ಟಿಕೆಟ್ ಬೆಲೆ 98,750 ರೂ.ಗಳಿಂದ 57,857 ರೂ.ಗಳಿಗೆ ಇಳಿದಿದೆ. ಈ ಮೂಲಕ, ಯುಪಿಎ ಅವಧಿಯಲ್ಲಿನ ಲೂಟಿಯನ್ನು ತಪ್ಪಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು