10 ವರ್ಷದ ಬಾಲಕಿಗೆ ಚಿತ್ರಹಿಂಸೆ: ಪೈಲಟ್ ದಂಪತಿಗೆ ಜನರಿಂದ ಥಳಿತ
Team Udayavani, Jul 20, 2023, 6:55 AM IST
ಹೊಸದಿಲ್ಲಿ: 10 ವರ್ಷದ ಬಾಲಕಿಯೊಬ್ಬಳನ್ನು ಮನೆಗೆಲಸಕ್ಕೆ ನೇಮಿಸಿ ಕೊಂಡಿದ್ದಲ್ಲದೇ, ಆಕೆಗೆ ಚಿತ್ರ ಹಿಂಸೆ ನೀಡಿರುವ ಆರೋಪದ ಮೇರೆಗೆ ಇಂಡಿಗೋ ವಿಮಾನಯಾನ ಸಂಸ್ಥೆಯ ಪೈಲಟ್ ಹಾಗೂ ಅದೇ ಸಂಸ್ಥೆಯ ಸಿಬಂದಿಯಾಗಿರುವ ಆಕೆಯ ಪತಿಯನ್ನು ಜನರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ದಿಲ್ಲಿಯ ದ್ವಾರಕಾದಲ್ಲಿ ವರದಿಯಾಗಿದೆ.
ದಂಪತಿಯನ್ನು ಜನರು ಥಳಿಸುತ್ತಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ, ಇಂಡಿಗೋ ಈ ಇಬ್ಬರನ್ನು ಕರ್ತವ್ಯದಿಂದ ವಜಾಗೊಳಿಸಿ, ತನಿಖೆಗೆ ಆದೇಶಿಸಿದೆ. ಭಾರತದಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧವಾಗಿದ್ದರೂ, 2 ತಿಂಗಳ ಹಿಂದಷ್ಟೇ ದಂಪತಿ 10ರ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಜತೆಗೆ ಮಗು ಕಳ್ಳತನ ಮಾಡಿದೆ ಎಂದು ಆರೋಪಿಸಿ ಆಕೆಯನ್ನು ಥಳಿಸಿ, ಚಿತ್ರಹಿಂಸೆ ನೀಡಿದ್ದಾರೆ. ಮಗುವಿನ ಸಂಬಂಧಿಕರೊಬ್ಬರು ಆಕೆಯ ಕಣ್ಣಿನ ಭಾಗ ಹಾಗೂ ತೋಳಿನಲ್ಲಿ ಆಗಿರುವ ಸುಟ್ಟ ಗಾಯ ಗಮನಿಸಿದಾಗ ವಿಷಯ ತಿಳಿದಿದೆ.
ಇದರಿಂದ ಉದ್ರಿಕ್ತರಾದ ಸ್ಥಳೀಯರು ದಂಪತಿಯನ್ನು ಮನಬಂದಂತೆ ಥಳಿಸಿದ್ದಾರೆ. ಬಳಿಕ ಪೊಲೀಸರು ಬಂದು ದಂಪತಿಯನ್ನು ವಶಕ್ಕೆ ಪಡೆದು, ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಆಕೆ ಹೇಳಿಕೆ ಆಧರಿಸಿ ದೂರು ದಾಖಲಿಸುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ