ಪ್ಲೀಸ್‌ ನನ್ನನ್ನು ನಂಬಿ, ಆ 44ನೇ ಮತ ನನ್ನದೇ!


Team Udayavani, Aug 10, 2017, 8:00 AM IST

please.jpg

ಹೊಸದಿಲ್ಲಿ/ಗಾಂಧಿನಗರ: ರಾಜ್ಯಸಭೆ ಚುನಾವಣೆಯ “ಅಡ್ಡಮತದಾನ’ದ ಮೇಲೆ ಸುಳ್ಳೇ ಸುಳ್ಳು!ಮಂಗಳವಾರವಷ್ಟೇ ಮುಗಿದ ಗುಜರಾತ್‌ನಿಂದ ನಡೆದ ರಾಜ್ಯಸಭೆ ಚುನಾವಣೆ ಇಡೀ ದೇಶವನ್ನೇ ಟೆನ್ಶನ್‌ಗೆ ತಳ್ಳಿದ್ದು ಸುಳ್ಳಲ್ಲ. ಗೆಲುವಿನ ಮ್ಯಾಜಿಕ್‌ ಸಂಖ್ಯೆಯಾದ 44 ಮುಟ್ಟಿದ ಅಹ್ಮದ್‌ ಪಟೇಲ್‌ ಅವರು ಗೆದ್ದರೂ ಬಗೆಹರಿಸಲಾಗದ ಸಮಸ್ಯೆಯೊಂದು ಅವರ ಮುಂದೆ ನಿಂತಿದೆ. ಸದ್ಯ ಅಹ್ಮದ್‌ ಪಟೇಲ್‌ ತಲೆಯಲ್ಲಿ ಇರುವ ಒಂದೇ ಒಂದು ಪ್ರಶ್ನೆ; ನನಗೆ ಮತ ಹಾಕಿದ ಆ 44ನೇ ಮತದಾರ ಯಾರು?

ಸದ್ಯಕ್ಕೆ ಅಹ್ಮದ್‌ ಪಟೇಲ್‌ ಅವರನ್ನು ಗೆಲ್ಲಿಸಿಕೊಟ್ಟದ್ದು ತಾವೇ ಎಂದು ಜೆಡಿಯು, ಎನ್‌ಸಿಪಿ ಹಾಗೂ ಬಿಜೆಪಿ ಬಂಡಾಯ ಶಾಸಕ ನೊಬ್ಬ ಪೋಸು ಕೊಡುತ್ತಿದ್ದಾರೆ. ಇವರ ಲೆಕ್ಕದಲ್ಲಿ ತಮ್ಮ ಮತ ದಿಂದಲೇ ಅಹ್ಮದ್‌ ಪಟೇಲ್‌ ಗೆದ್ದದ್ದು, ಇಲ್ಲ ದಿದ್ದರೆ ಸೋತೇ ಬಿಡುತ್ತಿದ್ದರು ಎಂಬುದು ಇವ ರಲ್ಲಿನ ಭಾವನೆ. ಪಟೇಲ್‌ರನ್ನು ಗೆಲ್ಲಿಸಿಕೊಡುವ ಸಲುವಾಗಿಯೇ ಪಕ್ಷದ ವಿಪ್‌ ಉಲ್ಲಂ ಸಿದ್ದೇವೆ ಎಂದೂ ಎದೆ ತಟ್ಟಿಕೊಂಡೇ ಹೇಳುತ್ತಿದ್ದಾರೆ. 

ಆದರೆ, ಲೆಕ್ಕಾಚಾರದ ಪ್ರಕಾರ ಅಹ್ಮದ್‌ ಪಟೇಲ್‌ಗೆ ಬಿದ್ದ ಓಟು ಕೇವಲ 44. ಇದರಲ್ಲಿ 43 ಕಾಂಗ್ರೆಸ್‌ ಶಾಸಕರು ಪಟೇಲ್‌ ಅವರಿಗೇ ಓಟು ನೀಡಿರುವುದು ಸಾಬೀತಾಗಿದೆ. ಏಕೆಂದರೆ, ಇದ್ದ 45 ಮಂದಿಯಲ್ಲಿ ಇಬ್ಬರು ಕಾಂಗ್ರೆಸ್‌ ಶಾಸಕರು ಅಡ್ಡಮತದಾನ ಮಾಡಿ ಅಸಿಂಧು ಶಿಕ್ಷೆಗೆ ಒಳಗಾಗಿದ್ದರಿಂದ ಉಳಿದ 43 ಮಂದಿ ಮತ ಹಾಕಿರಲೇಬೇಕು. 

ಹೀಗಾಗಿ ಲೆಕ್ಕಾಚಾರ  43+1 ಅಷ್ಟೇ ಆಗುತ್ತದೆ. ಇದನ್ನೇ ಗಮನದಲ್ಲಿಟ್ಟುಕೊಂಡರೆ ಅಹ್ಮದ್‌ ಪಟೇಲ್‌ರಿಗೆ ಮತ ಹಾಕಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಮೂವರಲ್ಲಿ ಒಬ್ಬರು ಮಾತ್ರ ಸತ್ಯ ಹೇಳುತ್ತಿದ್ದಾರೆ. ಉಳಿದಿಬ್ಬರು ಸುಳ್ಳೇ ಸುಳ್ಳು ಹೇಳುತ್ತಿದ್ದಾರೆ ಎಂಬುದು ಸ್ಪಷ್ಟ. 

ಆದರೆ ಈಗ ಬಗೆಹರಿಸಲಾಗದ ಪ್ರಶ್ನೆ ಎಂದರೆ ಈ ಅಡ್ಡ ಮತ ಮಾಡಿರುವುದು ಯಾರು? ಜೆಡಿಯು ಶಾಸಕನೋ ಎನ್‌ಸಿಪಿ ಶಾಸಕನೋ ಅಥವಾ ಬಿಜೆಪಿ ಬಂಡಾಯ ಶಾಸಕನೋ? ಒಂದು ವೇಳೆ ಈ ಮೂವರ ಮತ ಬಿದ್ದಿದ್ದರೆ ಅಹ್ಮದ್‌ ಪಟೇಲ್‌ಗೆ ಸಿಕ್ಕ ಮತ 46 ಆಗುತ್ತಿತ್ತು. ಬಿಜೆಪಿ ಶಾಸಕ ಸುಳ್ಳು ಹೇಳಿದ್ದಾರೆ ಅಂದುಕೊಂಡರೂ 45 ಆದರೂ ಆಗಬೇಕಿತ್ತು. ಆದರೆ, 44 ಸಿಕ್ಕಿರುವುದರಿಂದ ಒಬ್ಬರಷ್ಟೇ ಮತ ಹಾಕಿರುವುದು. ವಿಶೇಷವೆಂದರೆ, ಅಹ್ಮದ್‌ ಪಟೇಲ್‌ ಶರದ್‌ ಯಾದವ್‌ಗೆ ಥ್ಯಾಂಕ್ಸ್‌ ಹೇಳುವ ವೇಳೆ, ನಿಮ್ಮ ಪಕ್ಷದ ಶಾಸಕನ ಬೆಂಬಲದಿಂದಲೇ ಗೆದ್ದಿದ್ದು ಎಂದಿದ್ದಾರೆ. ಹಾಗಾದರೆ, ಎನ್‌ಸಿಪಿ ಮತ್ತು ಬಿಜೆಪಿ ಬಂಡಾಯ ಶಾಸಕ ಸುಳ್ಳು ಹೇಳಿರಬಹುದೇ ಎಂಬ ಜಿಜ್ಞಾಸೆಯೂ ಕಾಡುತ್ತಿದೆ.

ಜೆಡಿಯು ಶಾಸಕ ಚೋಟು ವಾಸವ : ನಾನು ನಿತೀಶ್‌ ಕುಮಾರ್‌ ಹೇಳಿದ ಮಾತು ಕೇಳಿಲ್ಲ. ಪಕ್ಷದ ನಿರ್ದೇಶನ ಉಲ್ಲಂ ಸಿ ಅಹ್ಮದ್‌ ಪಟೇಲ್‌ ಅವರಿಗೇ ಮತ ಹಾಕಿದ್ದೇನೆ. ನನ್ನನ್ನು ನಂಬದೇ ಇರುವುದಕ್ಕೆ ಸಾಧ್ಯವೇ ಇಲ್ಲ. ಆ 44ನೇ ಮತ ನನ್ನದೇ. ಅಹ್ಮದ್‌ ಪಟೇಲ್‌ ನನಗೆ 30 ವರ್ಷಗಳ ಪರಿಚಯ. ನಿತೀಶ್‌ಕುಮಾರ್‌, ಬಿಜೆಪಿ ಜತೆ ಸಖ್ಯ ಮಾಡಿಕೊಂಡಿದ್ದು ಇಷ್ಟವಿಲ್ಲದ ಕಾರಣದಿಂದಲೂ ಅಡ್ಡಮತ ಹಾಕಿದ್ದೇನೆ. 

ಎನ್‌ಸಿಪಿ ಶಾಸಕ ಜಯಂತ್‌ ಪಟೇಲ್‌: ಎನ್‌ಸಿಪಿ ವಿಷಯದಲ್ಲಿ ಪಕ್ಷದ ವಿಪ್‌ ಉಲ್ಲಂ ಸಿದ್ದು ಇನ್ನೊಬ್ಬ ಶಾಸಕ. ಶರದ್‌ ಪವಾರ್‌ ಅವರು ಕಾಂಗ್ರೆಸ್‌ಗೆà ಮತಹಾಕುವಂತೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್‌ ಹೇಳಿತ್ತು. ಆದರೆ ಪ್ರಫ‌ುಲ್‌ ಪಟೇಲ್‌ ಮಾತ್ರ ಈಗ ಕಾಂಗ್ರೆಸ್‌ಗೆ ನಮ್ಮ ನೆನಪಾಯಿತೋ ಎಂದು ಕೇಳಿದ್ದರು. ಹೀಗಾಗಿಯೇ ಮತ್ತೂಬ್ಬ ಶಾಸಕ ಕಾಂಧಲ್‌ ಜಡೇಜಾ ಬಿಜೆಪಿಗೇ ಮತಹಾಕುವುದಾಗಿ ಹೇಳಿದ್ದರು. ಆದರೆ ಮತದಾನದ ನಂತರ ಜಯಂತ್‌ ಪಟೇಲ್‌ ಕಾಂಗ್ರೆಸ್‌ನ ಅಹ್ಮದ್‌ ಪಟೇಲ್‌ಗೇ ವೋಟು ಹಾಕಿರುವುದಾಗಿ ಹೇಳಿದ್ದರು. 

ಬಿಜೆಪಿ ಶಾಸಕ ನಳೀನ್‌ ಕೋಟಾಡಿಯಾ: ಮಂಗಳವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ವಿಡಿಯೋ ಹರಿಬಿಟ್ಟ ಪಟೇಲ್‌ ಸಮುದಾಯದ ಬಿಜೆಪಿ ಶಾಸಕ ನಳೀನ್‌ ಕೋಟಾಡಿಯಾ ಅಹ್ಮದ್‌ ಪಟೇಲ್‌ಗೆ ಮತ ಹಾಕಿರುವುದಾಗಿ ಹೇಳಿದರು. ಬಿಜೆಪಿ ಪಟೇಲ್‌ ಸಮುದಾಯವನ್ನು ಸರಿ ಯಾಗಿ ನೋಡಿಕೊಳ್ಳದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದರು. ಆದರೆ ಇದನ್ನು ಬಿಜೆಪಿ ಅಲ್ಲಗೆಳೆದಿದ್ದು, ನಮ್ಮಿಂದ ಯಾರೂ ಅಡ್ಡಮತದಾನ ಮಾಡಿಲ್ಲ ಎಂದಿದೆ. ನಳೀನ್‌ ಪಟೇಲ್‌ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಭಯದಿಂದ ಈ ಮಾತು ಹೇಳಿರಬಹುದು ಎಂದೂ ಹೇಳಲಾಗಿದೆ. 

ಜಿಪಿಪಿ ಶಾಸಕ: ಗುಜರಾತ್‌ನ ಸ್ಥಳೀಯ ಪಕ್ಷದ ಶಾಸಕರಾಗಿರುವ ಇವರೂ ಕಾಂಗ್ರೆಸ್‌ಗೆ ಮತಹಾಕುವುದಾಗಿ ಹೇಳಿಕೊಂಡಿದ್ದರು. ಆದರೆ ಇವರು ಯಾರಿಗೆ ಮತ ಹಾಕಿದ್ದಾರೆ ಎಂಬುದು ಯಾರಿಗೂ ಗೊತ್ತಾಗಿಲ್ಲ. ಕಡೆಗೆ ಇವರು ಮತ ಹಾಕಿದ್ದಾರೋ ಅಥವಾ ಗೈರಾಗಿದ್ದಾರೋ ಎಂಬುದೂ ಬಹಿರಂಗವಾಗಿಲ್ಲ. 

ಪಟೇಲ್‌ ಗೆದ್ದರೂ ಕಾಂಗ್ರೆಸ್‌ಗೆ ಸಂಕಷ್ಟ
ಗುಜರಾತ್‌ನಿಂದ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್‌ ಪಟೇಲ್‌ ಗೆದ್ದರೂ ಕಾಂಗ್ರೆಸ್‌ ಪಾಲಿಗೆ ಇದು ಒಳ್ಳೇ ಫ‌ಲಿತಾಂಶವೇನಲ್ಲ. ಏಕೆಂದರೆ, ಈಗಾಗಲೇ ಬಿಹಾರದಲ್ಲಿ ಕಾಂಗ್ರೆಸ್‌ ಕೈಬಿಟ್ಟಿರುವ ಜೆಡಿಯು ಒಂದಷ್ಟು ಆಘಾತ ನೀಡಿದೆ. ಆದರೆ, ಗುಜರಾತ್‌ನಲ್ಲಿ ಎನ್‌ಸಿಪಿ ಕೂಡ ಕೈಬಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಲ್ಲದೆ ಎನ್‌ಸಿಪಿ ನಾಯಕ ಪ್ರಫ‌ುಲ್‌ ಪಟೇಲ್‌ ಕೂಡ ಕಾಂಗ್ರೆಸ್‌ ವಿರುದ್ಧ ಖಾರವಾಗಿಯೇ ಮಾತನಾಡಿದ್ದಾರೆ. ಚುನಾವಣೆ ವೇಳೆಯಷ್ಟೇ ಕಾಂಗ್ರೆಸ್‌ಗೆ ನಮ್ಮ ಪಕ್ಷದ ನೆನಪಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎಲ್ಲ ವಿಪಕ್ಷಗಳನ್ನು ಒಟ್ಟಿಗೆ ಸೇರಿಸಿ 2019ಕ್ಕೆ ಲೋಕಸಭೆ ಚುನಾವಣೆ ಎದುರಿಸುವ ಕನಸಿಗೆ ಪೆಟ್ಟು ಬೀಳಬಹುದು ಎಂದೇ ಹೇಳಲಾಗುತ್ತಿದೆ. 

ಪಟೇಲ್‌ ಗೆದ್ದಿದ್ದು  ಆ 2 ಮತಗಳಿಂದ
ಭಾರೀ ಉತ್ಸಾಹದಲ್ಲಿ ಬ್ಯಾಲೆಟ್‌ ತೋರಿಸಿ ಅಡ್ಡಮತ ಮಾಡಿದ ಆ ಇಬ್ಬರು ಕಾಂಗ್ರೆಸ್‌ ಶಾಸಕರು, ಈ ಉತ್ಸಾಹ ತೋರದೇ ಇದ್ದಿದ್ದರೆ ಅಹ್ಮದ್‌ ಪಟೇಲ್‌ ಸೋತೇ ಬಿಡುತ್ತಿದ್ದರು! ಈಗಾಗಲೇ ಮತ ಹಾಕಿದ್ದೇವೆ ಎಂದು ಹೇಳುತ್ತಿರುವ ಮೂವರಲ್ಲಿ ಇಬ್ಬರು ಸುಳ್ಳು ಹೇಳುತ್ತಿರುವುದು ಸಾಬೀತಾಗಿದೆ. ಆದರೆ, ಇಬ್ಬರು ಕಾಂಗ್ರೆಸ್‌ ಶಾಸಕರ ಮತ ಅಸಿಂಧು ಮಾಡದೇ ಹೋಗಿದ್ದರೆ ಮ್ಯಾಜಿಕ್‌ ನಂಬರ್‌ 45ಕ್ಕೆ ನಿಲ್ಲುತ್ತಿತ್ತು. ಆಗ ಅಹ್ಮದ್‌ ಪಟೇಲ್‌ ಒಂದು ಮತದ ಅಂತರದಿಂದ ಸೋಲುತ್ತಿದ್ದರು. ಏಕೆಂದರೆ, ಆಗ ಎರಡನೇ ಪ್ರಾಶಸ್ತ್ಯದ ಮತದ ಎಣಿಕೆಯಾಗಿ ಬಿಜೆಪಿಯ ಮೂರನೇ ಅಭ್ಯರ್ಥಿ ಗೆದ್ದುಬಿಡುತ್ತಿದ್ದರು!

ಟಾಪ್ ನ್ಯೂಸ್

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.