ಮೋದಿ ಸರ್ಕಾರಕ್ಕೆ ಇಂದಿಗೆ 8 ವರ್ಷ; 2014ರ ಮೇ 26ರಂದು ಪ್ರಧಾನಿಯಾಗಿ ಪದಗ್ರಹಣ
ಮೇ 30ಕ್ಕೆ ದೇಶಾದ್ಯಂತ ಬಿಜೆಪಿ ಸಂಭ್ರಮಾಚರಣೆ
Team Udayavani, May 26, 2022, 11:00 AM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರಚನೆಯಾಗಿ ಗುರುವಾರಕ್ಕೆ 8 ವರ್ಷ ಪೂರೈಸಲಿದ್ದು, ಮೇ 30ರಂದು ಬಿಜೆಪಿ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಿದೆ.
2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭೂತಪೂರ್ವ ಗೆಲುವಿನೊಂದಿಗೆ ಸರ್ಕಾರ ರಚಿಸಿತ್ತು. ಪ್ರಧಾನಿ ಮೋದಿ ಅವರು, ಸಾರ್ಕ್ ದೇಶಗಳ ಮುಖಂಡರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. 2019ರಲ್ಲಿಯೂ ಬಿಜೆಪಿ ನೇತೃತ್ವದ ಎನ್‌ಡಿಐ ಮತ್ತೆ ಗೆದ್ದಿತ್ತು. ಎರಡನೇ ಅವಧಿ ವೇಳೆ ಮೇ 30ರಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಹೀಗಾಗಿಯೇ ಮೇ 30ರಿಂದ ಜೂ.15ರ ವರೆಗೆ ದೇಶಾದ್ಯಂತ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೂ ದೇಶದ 73 ಸಾವಿರ ಬೂತ್‌ಗಳನ್ನು ಗಟ್ಟಿಗೊಳಿಸುವ ಸಂಬಂಧ ಪ್ರಚಾರ ನಡೆಸಲಿದ್ದಾರೆ ಎಂದೂ ಹೇಳಲಾಗಿದೆ. ಜತೆಗೆ, ಮೋದಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಕಾರ್ಯಕ್ರಮಗಳ ಕುರಿತಂತೆಯೂ ಬಿಜೆಪಿ ಮೇ 30ರಿಂದ ಜನರಿಗೆ ಪರಿಚಯ ಮಾಡಿಕೊಡಲಿದೆ.
ಅಲ್ಲದೆ, ಕೇಂದ್ರದ ಎಲ್ಲ ಸಚಿವರು ಹಳ್ಳಿಗಳಿಗೂ ಭೇಟಿ ಮಾಡಲಿದ್ದಾರೆ. ಈ ಅವಧಿಯಲ್ಲಿ ಸಚಿವರು ವಿಕಾಸ್ ತೀರ್ಥ ಯಾತ್ರೆ ಕೈಗೊಳ್ಳಲಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು, ತಮ್ಮ ಅವಧಿಯಲ್ಲಿ ಜಾರಿಗೆ ತಂದಿರುವ ಕಾರ್ಯಕ್ರಮಗಳ ಬಗ್ಗೆ ಕೈಪಿಡಿ ಬಿಡುಗಡೆ ಮಾಡುವಂತೆಯೂ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇರಳ: ಸಂವಿಧಾನ ವಿರೋಧಿ ಹೇಳಿಕೆ:ಭಾರೀ ಆಕ್ರೋಶದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಸಾಜಿ ರಾಜೀನಾಮೆ
ಮುಂಬಯಿಯಲ್ಲಿ ಮುಂದುವರಿದ ವರ್ಷಧಾರೆ; ಭೂಕುಸಿತ-ತಗ್ಗುಪ್ರದೇಶ ಜಲಾವೃತ, ಟ್ರಾಫಿಕ್ ಜಾಮ್
ಗೋವಾ ರಾಜ್ಯಾದ್ಯಂತ ಭಾರಿ ಮಳೆ ; ಜನಜೀವನ ಅಸ್ತವ್ಯಸ್ಥ
ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ; ಉಪರಾಷ್ಟ್ರಪತಿಯಾಗಿ ಆಯ್ಕೆ?
ಕಾಳಿ ಮಾತೆ ವಿರುದ್ಧ ಹೇಳಿಕೆ:ಟಿಎಂಸಿಯಿಂದ ಮೊಯಿತ್ರಾ ಉಚ್ಛಾಟಿಸಿ: ಮಮತಾಗೆ ಬಿಜೆಪಿ ಗಡುವು