ಪಿಒಕೆ ಭಾರತದ ಭಾಗ, ಒಂದಲ್ಲ ಒಂದು ದಿನ ಅದು ನಮ್ಮದಾಗುತ್ತೆ: ಸಚಿವ ಜೈಶಂಕರ್
Team Udayavani, Sep 17, 2019, 6:45 PM IST
ಹೊಸದಿಲ್ಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಭಾರತದ ಭಾಗ. ಅದೀಗ ಪಾಕ್ ವಶದಲ್ಲಿರಬಹುದು. ಆದರೆ ಒಂದು ದಿನ ಅದು ನಮ್ಮ ತೆಕ್ಕೆಗೆ ಬಂದೇ ಬರುತ್ತದೆ ಎಂದು ವಿದೇಶಾಂಗ ಸಚಿವ ಡಾ| ಸುಬ್ರಹ್ಮಣ್ಯಂ ಜೈಶಂಕರ್ ಅವರು ಹೇಳಿದ್ದಾರೆ.
ಪಿಒಕೆ ಬಗ್ಗೆ ನಮ್ಮ ಧೋರಣೆಗಳು ಸ್ಪಷ್ಟವಾಗಿದ್ದು, ಅದು ನಮ್ಮ ಭಾಗ ಎಂಬುದನ್ನು ಯಾವತ್ತಿಗೂ ಹೇಳುತ್ತೇವೆ ಎಂ ಹೇಳಿದರು.
100 ದಿನಗಳ ಸಾಧನೆ ಕುರಿತು ಕರೆಯಲಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅತ್ಯುತ್ತಮ, ಬಲಶಾಲಿ, ಸ್ನೇಹಸಸಂಬಂಧ ಹೊಂದಿದ ನೆರೆಹೊರೆಯವರನ್ನು ನಿರೀಕ್ಷಿಸುತ್ತೇವೆ. ಆದರೆ ನಮಗೆ ನಿರ್ದಿಷ್ಟ ನರೆಹೊರೆಯ ದೇಶದಿಂದ ತೀವ್ರ ಸವಾಲುಗಳು ಎದುರಾಗುತ್ತಿವೆ.
ಭಯೋತ್ಪಾದನೆ ನಿಗ್ರಹಿಸಿದ ಹೊರತು, ಆ ನೆರೆಹೊರೆಯವರಿಗೆ ಹೆಚ್ಚೇನೂ ಮಹತ್ವ ನೀಡುವಂತಿಲ್ಲ ಮತ್ತು ಅವರು ಸವಾಲಾಗಿಯೇ ಮುಂದುವರಿಯುತ್ತಾರೆ ಎಂದು ಹೇಳಿದರು.
ಪಾಕ್‌ಗೆ ಚಿಂತೆ ಇರುವುದು 370ನೇ ವಿಧಿಯ ಬಗ್ಗೆ ಅಲ್ಲ, ಕಾಶ್ಮೀರದಲ್ಲಿ ಭಯೋತ್ಪಾದನೆಯ ಬಗ್ಗೆ ಆಗಿದೆ. ಜಗತ್ತು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು. ಇದೇ ವೇಳೆ ಅವರು ಪಾಕ್‌ನಲ್ಲಿ ಅಲ್ಪಸಂಖ್ಯಾಕ ಸಮುದಾಯ ಎದುರಿಸುತ್ತಿರುವ ಪರಿಸ್ಥಿತಿಗಳನ್ನೂ ಪ್ರಸ್ತಾವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
4 ದಿನಗಳಲ್ಲಿ 12 ಉಗ್ರರ ಸಂಹಾರ; ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ
ಬಿಹಾರದಲ್ಲಿ ಅತಿದೊಡ್ಡ ಚಿನ್ನದ ನಿಕ್ಷೇಪ : ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲು ತಯಾರಿ
ತಿರುಪತಿಯಲ್ಲಿ ಭಕ್ತ ಜನ ಸಾಗರ : “ಕೆಲ ದಿನಗಳ ಕಾಲ ತಿರುಪತಿಗೆ ಬರಬೇಡಿ’
ಗೋವಾದಲ್ಲಿ ಕ್ರೈಸ್ತ ಪಾದ್ರಿ ಬಂಧನ : ಮತಾಂತರ ಸಹಿಸುವುದಿಲ್ಲ ಎಂದ ಸಿಎಂ ಸಾವಂತ್
ರಾಜ್ಯಗಳ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ: ಉಪರಾಷ್ಟ್ರಪತಿ ನಾಯ್ಡು