ಜೈಶ್ ರಿಲೀಸ್ ಮಾಡಲಿದೆ ಪುಲ್ವಾಮ ದಾಳಿಯ ಫ್ರೆಶ್ ವಿಡಿಯೋಗಳು!

Team Udayavani, Feb 21, 2019, 9:51 AM IST

ಜಮ್ಮು: ಕಳೆದ ವಾರ ಪುಲ್ವಾಮದ ಆವಂತಿಪೊರಾದಲ್ಲಿ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ಕೇಂದ್ರೀಯ ಮೀಸಲು ಪಡೆ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯನ್ನು ತನ್ನ ಶೌರ್ಯದ ಸಂಕೇತ ಎಂದೇ ಭಾವಿಸಿರುವ ಪಾಕಿಸ್ಥಾನ ಮೂಲದ ಉಗ್ರಸಂಘಟನೆ ಜೈಶ್-ಎ-ಮಹಮ್ಮದ್ ಈ ದಾಳಿಗೆ ಸಂಬಂಧಿಸಿದ ವಿಡಿಯೋವನ್ನು ಬಿಡುಗಡೆಗೊಳಿಸಿದೆ. ಆತ್ಮಾಹುತಿ ಬಾಂಬರ್ ಅದಿಲ್ ಅಹಮ್ಮದ್ ದಾರ್ ನಡೆಸಿದ ದಾಳಿಯ ತುಣುಕಗಳು ಸೇರಿವೆ. ಮಾತ್ರವಲ್ಲದೇ ಮುಂಬರುವ ದಿನಗಳಲ್ಲಿ ಪುಲ್ವಾಮ ದಾಳಿಗೆ ಸಂಬಂಧಿಸಿದ ಇನ್ನಷ್ಟು ವಿಡಿಯೋಗಳನ್ನು ಈ ಉಗ್ರಸಂಘಟನೆಯು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ ಎಂದು ಭಾರತೀಯ ಗುಪ್ತಚರ ಇಲಾಖೆ ಹೇಳಿದೆ.

ಪುಲ್ವಾಮ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿಲ್ಲ ಎಂದು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಹೆಳಿಕೆ ನೀಡಿರುವ ಒಂದು ದಿನದ ಬಳಿಕ ಜೈಶ್ ಉಗ್ರ ಸಂಘಟನೆ ಆತ್ಮಾಹುತಿ ದಾಳಿಯ ವಿಡಿಯೋ ಬಿಡುಗಡೆ ಮಾಡುವ ಕುರಿತಾದ ವರದಿಗಳು ಲಭ್ಯವಾಗಿರುವುದು ಗಮನಾರ್ಹವಾಗಿದೆ.

ಆದಿಲ್ ಆಗಲಿದ್ದಾನೆ ಉಗ್ರರ ಹೊಸ ಹೀರೋ
ಭಾರತೀಯ ಸೇನಾ ವಾಹನಕ್ಕೆ ಸ್ಪೋಟಕ ತುಂಬಿದ ತನ್ನ ವಾಹನವನ್ನು ನುಗ್ಗಿಸಿ ಆತ್ಮಾಹುತಿ ದಾಳಿ ಮಾದರಿಯಲ್ಲಿ 40 ಯೋಧರ ಸಾವಿಗೆ ಕಾರಣವಾದ ಆದಿಲ್ ನ ಈ ದುಷ್ಕೃತ್ಯವನ್ನು ಉಗ್ರಸಂಘಟನೆಯು ವೈಭವೀಕರಿಸುವ ಸಾಧ್ಯತರಗಳು ನಿಚ್ಛಳವಾಗಿದೆ. ಈ ಮೂಲಕ ಕಾಶ್ಮೀರ ಭಾಗದಲ್ಲಿ ಉಗ್ರಗಾಮಿ ಸಂಘಟನೆಗಳ ಕಡೆಗೆ ಒಲವಿರುವ ತೀವ್ರಗಾಮಿ ಮನಸ್ಥಿತಿಯ ಯುವಕರನ್ನು ತಮ್ಮತ್ತ ಸೆಳೆದುಕೊಳ್ಳಲು ಆದಿಲ್ ನಡೆಸಿದ ಆತ್ಮಾಹುತಿ ದಾಳಿಯ ವಿಡಿಯೋಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳ ಕುರಿತಾಗಿಯೂ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದೆ. ಕಳೆದ ಕೆಲವು ತಿಂಗಳುಗಳಿಂದೀಚೆಗೆ 50 ರಿಂದ 60 ಕಾಶ್ಮೀರಿ ಯುವಕರು ಜೈಶ್ ಸಂಘಟನೆಗೆ ಸೇರ್ಪಡೆಯಾಗಿದ್ದಾರೆಂದು ತಿಳಿದುಬಂದಿದೆ. ಪುಲ್ವಾಮ ದಾಳಿಯ ಬಳಿಕ ಗಡಿ ನಿಯಂತ್ರಣಾ ರೇಖೆಯಲ್ಲಿ ಒಳನುಸುಳಿವಿಕೆಯನ್ನು ಚುರುಕುಗೊಳಿಸುವಂತೆ ಹಿಜ್ಬುಲ್ ಮುಜಾಹುದ್ದೀನ್ ಉಗ್ರ ಸಂಘಟನೆ ಉಗ್ರರಿಗೆ ಸೂಚನೆ ನೀಡಿದೆ ಎಂಬುದು ತಾಜಾ ಗುಪ್ತಚರ ಮಾಹಿತಿಯಾಗಿದೆ. ಈಗಾಗಲೇ 5 ರಿಂದ 6 ಆತ್ಮಾಹುತಿ ಉಗ್ರರು ದೇಶದೊಳಗೆ ಇನ್ನಷ್ಟು ಆತ್ಮಾಹುತಿ ದಾಳಿಗಳನ್ನು ನಡೆಸಲು ಸಜ್ಜಾಗಿದ್ದು ಸೂಕ್ತ ಕಾಲಾವಕಾಶವನ್ನು ಎದುರು ನೋಡುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ಇದೀಗ ಹಂಚಿಕೊಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ