ರಾಹುಲ್‌ ಟ್ವೀಟ್‌ ಜನಪ್ರಿಯತೆ ಸಾಚಾತನದ ಬಗ್ಗೆ ಅನುಮಾನ

Team Udayavani, Oct 22, 2017, 7:40 AM IST

rahul.jpg

ಹೊಸದಿಲ್ಲಿ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇನ್ನೇನು ಕೆಲವೇ ದಿನಗಳಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರಲಿದ್ದಾರೆ. ಅದಕ್ಕೆ ಪೂರಕವಾಗಿ ಮೈಕ್ರೋಬ್ಲಾಗಿಂಗ್‌ ಜಾಲತಾಣ ಟ್ವಿಟರ್‌ನಲ್ಲಿರುವ ಅವರ  ಖಾತೆ ಃ@OfficeOfRG ದೇಶದ ಮತ್ತು ಜಗತ್ತಿನ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಪರಿಯ ಬಗ್ಗೆ ಅನುಮಾನಗಳು ಎದ್ದಿವೆ. ಈ ಬಗ್ಗೆ “ಎಎನ್‌ಐ’ ಸುದ್ದಿಸಂಸ್ಥೆ ಮಾಡಿರುವ ವರದಿ ರಾಜಕೀಯ ಕ್ಷೇತ್ರದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ. ಕನ್ನಡ ಚಿತ್ರನಟಿ ರಮ್ಯಾ ದಿವ್ಯಸ್ಪಂದನ ಪಕ್ಷದ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆಯಾದ ಬಳಿಕ ರಾಹುಲ್‌ರ ಟ್ವಿಟರ್‌ ಖಾತೆಯಲ್ಲಿ ಕೇಂದ್ರ ಸರಕಾರ ಮತ್ತು ಜಗತ್ತಿನ ಪ್ರಮುಖ ವಿದ್ಯಮಾನಗಳ ಬಗ್ಗೆ ಪ್ರಬಲವಾಗಿಯೇ ಟೀಕೆ, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 

ಅದಕ್ಕೆ ಪೂರಕವಾಗಿ ಅ.15ರಂದು ರಾಹುಲ್‌ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಟ್ವೀಟ್‌ ಒಂದನ್ನು ರೀ ಟ್ವೀಟ್‌ ಮಾಡಲಾಗಿತ್ತು. “ಮೋದಿ ಅವರೇ ತ್ವರಿತರಾಗಿ. ಅಧ್ಯಕ್ಷ ಟ್ರಂಪ್‌ ಇನ್ನೊಂದು ಅಪ್ಪುಗೆ ಬಯಸಿದ್ದಾರೆ’ ಎಂದು ಬರೆದುಕೊಳ್ಳಲಾಗಿತ್ತು. ಕೆಲವೇ ಸೆಕೆಂಡುಗಳಲ್ಲಿ ಅದು 20 ಸಾವಿರ ಮಂದಿಯಿಂದ ರಿಟ್ವೀಟ್‌ ಆಗಿತ್ತು. ನಂತರ ಅದರ ಸಂಖ್ಯೆ  30 ಸಾವಿರಕ್ಕೆ ಏರಿಕೆಯಾಗಿತ್ತು.

ಅನುಮಾನ ಮೂಡಿದ್ದೆಲ್ಲಿ?: ರಾಹುಲ್‌ ಗಾಂಧಿ  ಹಿಂಬಾಲಕರ ಪಟ್ಟಿಯಲ್ಲಿ ರಷ್ಯಾ, ಕಜಕಿಸ್ತಾನ ಮತ್ತು ಇಂಡೋನೇಷ್ಯಾದ ಹೆಸರುಗಳಿಗೆ ಸಾಮ್ಯವಾದ ಒಂದಿಷ್ಟು ಹೆಸರುಗಳು ಕಂಡು ಬರುತ್ತಿವೆ. ಅವರ ವಿವರವೂ ಆಯಾ ದೇಶಗಳ ಪ್ರಜೆ ಎನ್ನುವಂತೆ ಇವೆ. ಕಡಿಮೆ ಸಮಯದಲ್ಲಿ ಸಾಧ್ಯವಾಗಿದ್ದು ಹೇಗೆ, ಸಾಧ್ಯವೇ ಎಂದು ಸುದ್ದಿಸಂಸ್ಥೆಯ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಅದರಲ್ಲೂ ರೀ ಟ್ವೀಟ್‌ ಮಾಡುವಷ್ಟರ ಮಟ್ಟಿಗೆ ಏಕಾಏಕಿ ಹಿಂಬಾಲಕರಾಗಲು ಸಾಧ್ಯವೇ? ಇವರೆಲ್ಲಾ ನಿಜವಾಗಿಯೂ ಖಾತೆದಾರರೇ ಅಥವಾ ನಕಲು ಖಾತೆಗಳನ್ನು ಸೃಷ್ಟಿಸಲಾಗಿದೆಯೇ  ಎನ್ನುವುದು ಅನುಮಾನಗಳಿಗೆ ಕಾರಣವಾಗಿದೆ. 
ಬಿಜೆಪಿ ತಿರುಗೇಟು: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವೆ ಸ್ಮತಿ ಇರಾನಿ ರಾಹುಲ್‌ ಗಾಂಧಿ ರಷ್ಯಾ, ಇಂಡೋನೇಷ್ಯಾ ಮತ್ತು ಕಜಕಿಸ್ತಾನಗಳಲ್ಲಿ ಚುನಾವಣೆಗಳಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳಲು ಸಿದ್ಧತೆ ನಡೆಸಿರಬೇಕು ಎಂದು ಲೇವಡಿ ಮಾಡಿದ್ದಾರೆ. ಕೇಂದ್ರ ಕ್ರೀಡಾ ಖಾತೆ ಸಚಿವ ರಾಜ್ಯವರ್ಧನ ಸಿಂಗ್‌ ರಾಥೋಡ್‌ ಪ್ರತಿಕ್ರಿಯೆ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಅದನ್ನು ಡೋಪಿಂಗ್‌ ಎಂದು ಕರೆಯುತ್ತಾರೆ ಎಂದು ಟ್ವೀಟ್‌ ಮಾಡಿದ್ದಾರೆ. 

ಶುಕ್ಲಾ ಸಮರ್ಥನೆ: ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಗಾಂಧಿ ಕುಟುಂಬದ ನಿಷ್ಠಾವಂತ, ರಾಜ್ಯಸಭಾ ಸದಸ್ಯ ರಾಜೀವ್‌ ಶುಕ್ಲಾ ವಿಶ್ವಾದ್ಯಂತ ಸಾಮಾಜಿಕ ಮಾಧ್ಯಮ ಸಂಪರ್ಕ ಸಾಧಿಸುತ್ತದೆ. ಹೀಗಾಗಿ ಯಾವುದೇ ದೇಶದ ನಾಗರಿಕರು ಅದಕ್ಕೆ ಪ್ರತಿಕ್ರಿಯೆ ನೀಡಬಹುದು ಅಥವಾ ರಿ ಟ್ವೀಟ್‌ ಮಾಡಬಹುದು ಎಂದಿದ್ದಾರೆ. ರಾಹುಲ್‌ ಗಾಂಧಿ ಅವರ ಜನಪ್ರಿಯತೆಯಿಂದ ಬಿಜೆಪಿ ಬೆದರಿದೆ ಎಂದಿದ್ದಾರೆ. ಮತ್ತೂಬ್ಬ ನಾಯಕ ಆರ್‌ಪಿಎನ್‌ ಸಿಂಗ್‌ ಪ್ರತಿಕ್ರಿಯೆ ನೀಡಿ ಟ್ವಿಟರ್‌ನಲ್ಲಿ ಜನಪ್ರಿಯತೆ ಪಡೆಯಲು “ಬೋಟ್‌’ಗಳನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ತಿರಸ್ಕರಿಸಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಪ್ರತಿಕ್ರಿಯೆ ನೀಡಿ “ಹತಾಶೆಯ ಸಂದರ್ಭಗಳು ಹತಾಶೆಯ ಕೆಲಸಗಳನ್ನು ಮಾಡಿಸುತ್ತವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಬೋಟ್‌ ಎಂದರೇನು?
ಇಂಟರ್‌ನೆಟ್‌ನಲ್ಲಿ ಬೋಟ್‌ ಎಂದರೆ ಸ್ವಯಂ ಚಾಲಿತವಾಗಿ ನಿಗದಿತ ಕೆಲಸವನ್ನು ಮಾಡುವಂತೆ ಸೂಚಿಸುವ ಸಾಫ್ಟ್ವೇರ್‌. ಅದನ್ನೇ ರಾಹುಲ್‌ ಗಾಂಧಿಯವರ ಟ್ವಿಟರ್‌ ಖಾತೆಯಲ್ಲಿ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. 

ಟಾಪ್ ನ್ಯೂಸ್

OTT: ಮಾಲಿವುಡ್‌ನಲ್ಲಿ ಸದ್ದು ಮಾಡಿದ ಫಹಾದ್‌ ಫಾಸಿಲ್‌ ʼಆವೇಶಮ್‌ʼ ಈ ದಿನ ಓಟಿಟಿಗೆ ಎಂಟ್ರಿ?

OTT: ಮಾಲಿವುಡ್‌ನಲ್ಲಿ ಸದ್ದು ಮಾಡಿದ ಫಹಾದ್‌ ಫಾಸಿಲ್‌ ʼಆವೇಶಮ್‌ʼ ಈ ದಿನ ಓಟಿಟಿಗೆ ಎಂಟ್ರಿ?

Chennai: ಪಾರ್ಕ್ ನಲ್ಲಿ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳ ದಾಳಿ; ಮಾಲೀಕರ ಬಂಧನ

Chennai: ಪಾರ್ಕ್ ನಲ್ಲಿ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳ ದಾಳಿ; ಮಾಲೀಕರ ಬಂಧನ

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

Tragedy: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಹೃದಯಘಾತದಿಂದ ಮೃತ್ಯು…

Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chennai: ಪಾರ್ಕ್ ನಲ್ಲಿ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳ ದಾಳಿ; ಮಾಲೀಕರ ಬಂಧನ

Chennai: ಪಾರ್ಕ್ ನಲ್ಲಿ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳ ದಾಳಿ; ಮಾಲೀಕರ ಬಂಧನ

Farooq Abdullah

ಪಾಕಿಸ್ತಾನದವರೇನು ಬಳೆ ಧರಿಸಿ ಕುಳಿತಿಲ್ಲ..; ವಿವಾದಾತ್ಮಕ ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲಾ

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…

Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

Delhi Police has busted a fake spice racket at Karawal Nagar

Delhi Police; ಮರದ ಪುಡಿ, ಕೆಮಿಕಲ್ ಬಳಸಿ ಮಸಾಲೆ ಪದಾರ್ಥ ತಯಾರು; ಮೂವರ ಬಂಧನ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

OTT: ಮಾಲಿವುಡ್‌ನಲ್ಲಿ ಸದ್ದು ಮಾಡಿದ ಫಹಾದ್‌ ಫಾಸಿಲ್‌ ʼಆವೇಶಮ್‌ʼ ಈ ದಿನ ಓಟಿಟಿಗೆ ಎಂಟ್ರಿ?

OTT: ಮಾಲಿವುಡ್‌ನಲ್ಲಿ ಸದ್ದು ಮಾಡಿದ ಫಹಾದ್‌ ಫಾಸಿಲ್‌ ʼಆವೇಶಮ್‌ʼ ಈ ದಿನ ಓಟಿಟಿಗೆ ಎಂಟ್ರಿ?

Chennai: ಪಾರ್ಕ್ ನಲ್ಲಿ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳ ದಾಳಿ; ಮಾಲೀಕರ ಬಂಧನ

Chennai: ಪಾರ್ಕ್ ನಲ್ಲಿ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳ ದಾಳಿ; ಮಾಲೀಕರ ಬಂಧನ

ಕನ್ನಡ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಸವಿತಾ ಹಿರೇಮಠ

ಕನ್ನಡ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಸವಿತಾ ಹಿರೇಮಠ

The Safest Online Gaming Sites: Shielding Your Gaming Experience

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.