ರಾಜೀವ್ ಹಂತಕಿ ನಳಿನಿಗೆ 30 ದಿನ ಪೆರೋಲ್
Team Udayavani, Jul 6, 2019, 5:00 AM IST
ಚೆನ್ನೈ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ನಳಿನಿ ಶ್ರೀಹರನ್ಗೆ ಮದ್ರಾಸ್ ಹೈಕೋರ್ಟ್ ಒಂದು ತಿಂಗಳ ಮಟ್ಟಿಗೆ ಪೆರೋಲ್ ನೀಡಿದೆ. ನಳಿನಿಯು ತನ್ನ ಮಗಳ ಮದುವೆ ಇದ್ದು, ಅದರ ತಯಾರಿಗಾಗಿ 6 ತಿಂಗಳ ಕಾಲ ಜೈಲಿನಿಂದ ಹೊರಕಳಿಸ ಬೇಕೆಂದು ಅರ್ಜಿ ಸಲ್ಲಿಸಿದ್ದಳು. ಜತೆಗೆ, ನ್ಯಾಯಾಲಯದಲ್ಲಿ ತನ್ನ ಪರವಾಗಿ ತಾನೇ ವಾದ ಮಂಡಿಸಿದ್ದಳು. ಅರ್ಜಿಯನ್ನು ಪುರಸ್ಕರಿಸಿರುವ ನ್ಯಾ. ಎಂ.ಎಂ. ಸುಂದ್ರೇಶ್ ನೇತೃತ್ವದ ಪೀಠ, ನಳಿನಿ ಬಿಡುಗಡೆ ಸಂಬಂಧಿಸಿದ ಪ್ರಕ್ರಿಯೆಯನ್ನು ಇನ್ನು 10 ದಿನಗಳ ಒಳಗಾಗಿ ಮುಗಿಸುವಂತೆ ತಮಿಳುನಾಡು ಸರ್ಕಾರಕ್ಕೆ ಹೇಳಿದೆ. ಜೊತೆಗೆ ನಳಿನಿಗೆ ಯಾವುದೇ ರಾಜಕೀಯ ನಾಯಕರನ್ನು ಭೇಟಿಯಾಗದಂತೆ ಮತ್ತು ಮಾಧ್ಯಮಗಳಿಗೆ ಸಂದರ್ಶನ ನೀಡದಂತೆ ತಾಕೀತು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು