ದೇಶದ ಪ್ಲಾಸ್ಟಿಕ್ ಸರ್ಜರಿ ಇತಿಹಾಸಕ್ಕೆ ಸಿಕ್ಕಿತು ಮಾನ್ಯತೆ
Team Udayavani, Jan 14, 2019, 12:45 AM IST
ಹೊಸದಿಲ್ಲಿ: ಪ್ಲಾಸ್ಟಿಕ್ ಸರ್ಜರಿ ಆಧುನಿಕ ವೈದ್ಯ ವಿಜ್ಞಾನದ ಸಂಶೋಧನೆ ಎಂದು ಹೇಳಲಾಗುತ್ತದೆಯಾದರೂ, ಇದು ಭಾರತದಲ್ಲಿ 2,500 ವರ್ಷಗಳ ಹಿಂದೆಯೇ ಪ್ರಸ್ತಾಪವಾಗಿತ್ತು ಎಂದು ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ವಿಜ್ಞಾನಿಗಳು ಉಲ್ಲೇಖೀಸಿದಾಗ ವಿವಾದಕ್ಕೆ ಕಾರಣವಾಗಿತ್ತು. ಅದನ್ನೀಗ ಅಮೆರಿಕದ ಪ್ರತಿಷ್ಠಿತ ಕೊಲಂಬಿಯಾ ವಿವಿಯೂ ಉಲ್ಲೇಖೀಸಿದೆ.
ವಿವಿಯ ಇರ್ವಿಂಗ್ ಮೆಡಿಕಲ್ ಸೆಂಟರ್ ಈ ಬಗ್ಗೆ ವೈದ್ಯಕೀಯ ಇತಿಹಾಸ ಸರಣಿಯಲ್ಲಿ ಪ್ರಸ್ತಾಪಿಸಿದೆ.
ಸುಶ್ರುತ ಸಂಹಿತೆಯಲ್ಲಿ 1,100ಕ್ಕೂ ಹೆಚ್ಚು ರೋಗಗಳನ್ನು ದಾಖಲಿಸಲಾಗಿದೆ. ಇದರಲ್ಲಿ ನೂರಾರು ಔಷಧೀಯ ಸಸ್ಯಗಳನ್ನೂ ಉಲ್ಲೇಖೀಸಲಾಗಿದೆ. ಹಲವು ರೀತಿಯ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ವಿಧಾನಗಳನ್ನೂ ಇದರಲ್ಲಿ ಉಲ್ಲೇಖೀಸಲಾಗಿದೆ. ಮೂರು ವಿಧದ ಚರ್ಮ ಕಸಿ ಹಾಗೂ ಮೂಗನ್ನು ಮರು ರೂಪಿಸುವ ಬಗ್ಗೆ ಸುಶ್ರುತ ಸಂಹಿತೆಯಲ್ಲಿ ಉಲ್ಲೇಖೀಸಲಾಗಿದೆ. ಆ ಕಾಲದಲ್ಲಿ ಕಳ್ಳತನ ಅಥವಾ ಇತರ ಅಪರಾಧಕ್ಕೆ ಮೂಗು ಕತ್ತರಿಸುವ ಶಿಕ್ಷೆ ನೀಡಲಾಗುತ್ತಿತ್ತು. ಇದಕ್ಕಾಗಿ ಮೂಗು ಮರುರೂಪಿಸುವ ಬಗ್ಗೆ ಸುಶ್ರುತ ಸಂಹಿತೆಯಲ್ಲಿ ಉಲ್ಲೇಖೀಸಲಾಗಿದೆ. ಚರ್ಮ ಕಸಿ ತಂತ್ರವನ್ನೇ ಈಗಿನ ವೈದ್ಯರು ಬಳಸುತ್ತಿದ್ದಾರೆ. ಇದನ್ನು 2500 ವರ್ಷಗಳ ಹಿಂದೆಯೇ ವಿವರವಾಗಿ ಸುಶ್ರುತ ಸಂಹಿತೆಯಲ್ಲಿ ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ