Udayavni Special

ಬಿಜೆಪಿ ಅಧಿಕಾರಕ್ಕೆ ಬಂದರೆ ಕೇರಳದ ಮುಖ್ಯಮಂತ್ರಿಯಾಗಲು ಸಿದ್ಧ : ‘ಮೆಟ್ರೋ ಮ್ಯಾನ್’ ಶ್ರೀಧರನ್

ಕೇರಳದ ಜನರು ಸರ್ಕಾರದ ಭ್ರಷ್ಟಾಚಾರ, ಹಗರಣ, ಸ್ವಜನಪಕ್ಷಪಾತದ ಧೊರಣೆಯಿಂದ ಬೇಸತ್ತು ಹೋಗಿದ್ದಾರೆ : ಶ್ರೀಧರನ್

Team Udayavani, Mar 1, 2021, 1:39 PM IST

Revealed: ‘Metro Man’ E Sreedharan’s real reason behind joining BJP

ನವ ದೆಹಲಿ : ಮೆಟ್ರೋ ಮ್ಯಾನ್ ಎಂದು ಗುರುತಿಸಲ್ಪಡುವ ಎಲಟ್ಟುವಲಪಿಲ್ ಶ್ರೀಧರನ್ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡಿರುವ ಬಗ್ಗೆ  ನಿಜವಾದ ಕಾರಣವನ್ನು ಹೇಳಿಕೊಂಡಿದ್ದಾರೆ.

ಕಳೆದ ಗುರುವಾರ(ಫೆ.25)ದಂದು ಅವರು ಅಧಿಕೃತವಾಗಿ ಮಲಪುರಂ ನಲ್ಲಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಅದಿತಿ ತ್ಯಾಗಿ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಮೆಟ್ರೋ ಮ್ಯಾನ್ ತಾವು ಬಿಜೆಪಿಗೆ ಸೇರುವುದರ ಹಿನ್ನಲೆಯ ಬಗ್ಗೆ ವಿವರಿಸಿದ್ದಾರೆ. ಕೇರಳದ ಜನರು ಸರ್ಕಾರದ ಭ್ರಷ್ಟಾಚಾರ, ಹಗರಣ, ಸ್ವಜನಪಕ್ಷಪಾತದ ಧೊರಣೆಯಿಂದ ಬೇಸತ್ತು ಹೋಗಿದ್ದಾರೆ. ಇವೆಲ್ಲವುಗಳಿಂದ ರಾಜ್ಯವನ್ನು ಬಿಜೆಪಿ ತೊಡೆದು ಹಾಕಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಓದಿ : ‘ಹೀರೋ’ ಶೂಟಿಂಗ್ ವೇಳೆ ಅವಘಡ…ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಭ್ ಶೆಟ್ಟಿಗೆ ಗಾಯ   

ಕಳೆದ ಎರಡು ದಶಕಗಳಿಂದ ಕೇರಳ ಎರಡು ಪಕ್ಷಗಳ ಆಡಳಿತವನ್ನು ಕಂಡಿದೆ. ಒಂದು ಲೆಫ್ಟ್ ಡೆಮೊಕ್ರೆಟಿಕ್ ಫ್ರಂಟ್ (ಎಲ್ ಡಿ ಎಫ್) ಹಾಗೂ ಇನ್ನೊಂದು ಯೂನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ . ಒಂದ ಸಿಪಿಐ ಅಡಿಯಲ್ಲಿ ಇನ್ನೊಂದು ಕಾಂಗ್ರೆಸ್ ನ ಅಡಿಯಲ್ಲಿದೆ. ಈ ಎರಡು ಪಕ್ಷಗಳ ಆಡಳಿತದಲ್ಲಿ ಕೇರಳ ಮುಖ್ಯವಾಗಿ ಕಾಣಲೇಬೇಕಾದ ಅಭಿವೃದ್ಧಿಯನ್ನು ಹೊಂದಿದೆ ಎಂದು ಭಾವಿಸುವುದಿಲ್ಲ. ಕೈಗಾರಿಕೋದ್ಯಮಗಳ ಕ್ಷೇತ್ರದಲ್ಲಿ ಅಭಿವೃದ್ದಿ ಬಹಳ ಕಡಿಮೆಯಾಗಿದೆ. ಕೇರಳದ ಜನರು ಭ್ರಷ್ಟಾಚಾರ, ಹಗರಣ, ಸ್ವಜನಪಕ್ಷಪಾತಗಳಿಂದ ಬೇಸತ್ತು ಹೋಗಿದ್ದಾರೆ. ಬಿಜೆಪಿ ಇವುಗಳಿಂದ ಕೇರಳವನ್ನು ಮುಕ್ತಗೊಳಿಸಲಿದೆ ಎಂದು ಶ್ರೀಧರನ್ ಅಭಿಪ್ರಾಯ ಪಟ್ಟಿದ್ದಾರೆ.

ಶ್ರೀದರನ್ ತಮ್ಮ ಕೆಲಸಕ್ಕಾಗಿ ಇಡೀ ಭಾರತದಲ್ಲಿಯೇ ಖ್ಯಾತಿ ಗಳಿಸಿದವರು. ರಾಜಕೀಯ ಪ್ರಮುಖ ನಾಯಕರಿಂದಲೂ ಕೂಡ ಗೌರವವನ್ನು ಅವರು ಪಡೆದಿದ್ದಾರೆ.

ಓದಿ : ರೈತ ವಿರೋಧಿ ಕಾಯ್ದೆ ಖಂಡಿಸಿ ಮಾ. 5ರಿಂದ ಬಸವ ಕಲ್ಯಾಣದಿಂದ ಬಳ್ಳಾರಿ ಪಾದಯಾತ್ರೆ

ದೆಹಲಿ ಮೆಟ್ರೋ ರೈಲ್ ಕಾರ್ಪೋರೇಷನ್ ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾಗ ಸಾರಿಗೆ ವ್ಯವಸ್ಥೆಯಲ್ಲಿ ಅವರ ನಾಯಕತ್ವದಲ್ಲಿ ತಂದ ಅಪಾರವಾದ ಬದಲಾವಣೆಗೆ ಅವರು ಭಾರತದಲ್ಲಿ ಖ್ಯಾತಿಗಳಿಸಿದ್ದಾರೆ. ಕೊಂಕಣ ರೈಲ್ವೆ ಹಾಗೂ ಮೆಟ್ರೋ ರೈಲುಗಳನ್ನು ಅನುಷ್ಠಾನಕ್ಕೆ ತರುವುದರ ಮೂಲಕ ಭಾರತೀಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮುಖವನ್ನೇ ಬದಲಾಯಿಸಿದ ಕೀರ್ತಿ ಶ್ರೀಧರನ್ ಅವರಿಗೆ ಸಲ್ಲುತ್ತದೆ. ತದನಂತರದ ದಿನಗಳಲ್ಲಿ ಅನೇಕ ಮೆಟ್ರೋ ನಗರಗಳಲ್ಲಿ ಮೆಟ್ರೋ ರೈಲು ಯೋಜನೆಗಳನ್ನು ಅನುಷ್ಟಾನಗೊಳಿಸಿದರು.

ಕೇರಳ ವಿಧಾನ ಸಭಾ ಚುನಾವಣೆಗೆ ಕೆಲವು ವಾರಗಳು ಇರುವ ಮುನ್ನ ಮಾಜಿ ದೆಹಲಿ ಮೆಟ್ರೋ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಧರನ್ ಫೆ. 18 ರಂದು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದರು. ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರ ಸಭೆ “ವಿಜಯ ಯಾತ್ರಾ”ದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

“ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ನಾನು ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆ. ಪಕ್ಷ ಇದುವರೆಗೆ ನನ್ನನ್ನು ಆ ಬಗ್ಗೆ ಕೇಳಿಲ್ಲ. ಕೇಳುವುದಕ್ಕೆ ಇದು ಸೂಕ್ತವಾದ ಕಾಲವೂ ಅಲ್ಲ. ಆದರೇ, ಪಕ್ಷ ನನ್ನನ್ನು ಕೇಳಿದರೆ, ನಾನು ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆ. ಒಂದು ರಾಜ್ಯದ ಅಧಿಕಾರ ಹೇಗೆ ನಡೆಸಬೇಕು ಎನ್ನುವುದನ್ನು ತೋರಿಸಿಕೊಡುತ್ತೇನೆ” ಎಂದು ಶ್ರೀಧರನ್ ಎಎನ್ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಕೇರಳದ ವಿಧಾನ ಸಭಾ ಚುನಾವಣೆ ಬರುವ ಎಪ್ರಿಲ್ 6 ರಂದು ನಡೆಯಲಿದೆ. ಮತ ಎಣಿಕೆಯು ಮೇ 2 ರಂದು ನಡೆಯಲಿಕ್ಕಿದೆ.

ಭಾರತೀಯ ಚುನಾವಣಾ ಆಯೋಗ ಇತ್ತೀಚೆಗಷ್ಟೇ ವಿಧಾನ ಸಭಾ ಚುನಾವಣೆಯನ್ನು ಎದುರಿಸುತ್ತಿರುವ ನಾಲ್ಕು ರಾಜ್ಯಗಳಾದ  ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಪುದುಚೆರಿಗೆ ಚುನಾವಣಾ ದಿನಾಂಕವನ್ನು ನಿಗದಿ ಮಾಡಿದೆ.

ಓದಿ : ಕೋವಿಡ್ 19-ಲಸಿಕೆ ಪಡೆದ ನಂತರ ಪ್ರಧಾನಿ ಮೋದಿ… ಸಿಸ್ಟರ್ ನಿವೇದಾಗೆ ಹೇಳಿದ್ದೇನು?

ಟಾಪ್ ನ್ಯೂಸ್

nasa-released-milky-way-galaxy-images-taken-from-international-space-station

ಕ್ಷೀರಪಥದ ಅಮೋಘ ಚಿತ್ರ ಬಿಡುಗಡೆಗೊಳಿಸಿದೆ ನಾಸಾ..!

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಜನರೂ ಸಹಕಾರ ಬೇಕು: ಸಚಿವ ಬಿ.ಸಿ. ಪಾಟೀಲ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಜನರ ಸಹಕಾರ ಬೇಕು: ಸಚಿವ ಬಿ.ಸಿ. ಪಾಟೀಲ್

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ‌ಅಬ್ದುಲ್ ನಝೀರ್ ಗೆ ಮಾತೃ ವಿಯೋಗ

ಮೂಡುಬಿದಿರೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ‌ಅಬ್ದುಲ್ ನಝೀರ್ ಗೆ ಮಾತೃ ವಿಯೋಗ

suresh-kumar

ಒಂದೆರಡು ದಿನದಲ್ಲಿ 1 ರಿಂದ 9 ತರಗತಿ ಪರೀಕ್ಷೆ ಬಗ್ಗೆ ನಿರ್ಧಾರ: ಸುರೇಶ್ ಕುಮಾರ್

Online Fraud , Dehali police has introdused new help line Number to public

ಬ್ಯಾಂಕ್ ಆನ್ ಲೈನ್ ವಂಚನೆಗೆ ಬ್ರೇಕ್ ಹಾಕಲು ದೆಹಲಿ ಪೊಲೀಸರ ಹೊಸ ಕ್ರಮ..! ಇಲ್ಲಿದೆ ಮಾಹಿತಿ.

ಜಿಲ್ಲಾ ಕೇಂದ್ರಗಳಲ್ಲಿ ರಾತ್ರಿ ಕರ್ಫ್ಯೂ ಮುಂದುವರಿಕೆ, ಎ.20ರಂದು ಮುಂದಿನ ತೀರ್ಮಾನ: ಬಿಎಸ್ ವೈ

ಜಿಲ್ಲಾ ಕೇಂದ್ರಗಳಲ್ಲಿ ರಾತ್ರಿ ಕರ್ಫ್ಯೂ ಮುಂದುವರಿಕೆ, ಎ.20ರಂದು ಮುಂದಿನ ತೀರ್ಮಾನ:ಬಿಎಸ್ ವೈ

ಬಂಟ್ವಾಳ: ಮನೆಮಂದಿ ನಾಟಕ ನೋಡಲು ಹೋಗಿದ್ದಾಗ ನಾಲ್ಕು ಮನೆಗೆ ನುಗ್ಗಿದ ಕಳ್ಳರು!

ಬಂಟ್ವಾಳ: ಮನೆಮಂದಿ ನಾಟಕ ನೋಡಲು ಹೋಗಿದ್ದಾಗ ನಾಲ್ಕು ಮನೆಗೆ ನುಗ್ಗಿದ ಕಳ್ಳರು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬೈಯಲ್ಲಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ತಯಾರಿಕೆಗೆ ಕೇಂದ್ರದ ಗ್ರೀನ್ ಸಿಗ್ನಲ್

ಮುಂಬೈಯಲ್ಲಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ತಯಾರಿಕೆಗೆ ಕೇಂದ್ರದ ಗ್ರೀನ್ ಸಿಗ್ನಲ್

ಪ್ರವಾಸಿಗರೆ ಗಮನಿಸಿ: ಮೇ 15ರವರೆಗೆ ಎಲ್ಲ ಸ್ಮಾರಕಗಳೂ ಬಂದ್‌

ಪ್ರವಾಸಿಗರೆ ಗಮನಿಸಿ: ಮೇ 15ರವರೆಗೆ ಎಲ್ಲ ಸ್ಮಾರಕಗಳೂ ಬಂದ್‌

ಅಂಚೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತಕ್ಕೆ ವಿಧಿಸುವ ದಂಡ ಪ್ರಮಾಣ ಇಳಿಕೆ

ಅಂಚೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತಕ್ಕೆ ವಿಧಿಸುವ ದಂಡ ಪ್ರಮಾಣ ಇಳಿಕೆ

ಉದ್ಯೋಗ ಕ್ಷೇತ್ರದ ಮೇಲೆ ಮತ್ತೆ ಕೋವಿಡ್‌ ಪರಿಣಾಮ : ನಿರುದ್ಯೋಗ ಪ್ರಮಾಣ ಶೇ.8 ಏರಿಕೆ

ಉದ್ಯೋಗ ಕ್ಷೇತ್ರದ ಮೇಲೆ ಮತ್ತೆ ಕೋವಿಡ್‌ ಪರಿಣಾಮ : ನಿರುದ್ಯೋಗ ಪ್ರಮಾಣ ಶೇ.8 ಏರಿಕೆ

ಕೇಂದ್ರದ ಲಸಿಕಾ ಉತ್ಸವಕ್ಕೆ ಹಿನ್ನಡೆ! ಗೊಂದಲ ಸೃಷ್ಟಿಸುವ ಆರೋಗ್ಯ ಇಲಾಖೆಯ ಎರಡು ವರದಿಗಳು

ಕೇಂದ್ರದ ಲಸಿಕಾ ಉತ್ಸವಕ್ಕೆ ಹಿನ್ನಡೆ! ಗೊಂದಲ ಸೃಷ್ಟಿಸುವ ಆರೋಗ್ಯ ಇಲಾಖೆಯ ಎರಡು ವರದಿಗಳು

MUST WATCH

udayavani youtube

ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತುರ್ತು ಸಭೆ

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

udayavani youtube

ಭಾರತದಲ್ಲಿ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳ

ಹೊಸ ಸೇರ್ಪಡೆ

The funeral of the deceased is free

ಸೋಂಕಿನಿಂದ ಮೃತ ಪಟ್ಟವರ ಶವ ಸಂಸ್ಕಾರ ಉಚಿತ

gowrav guptha talk about karaga

ಕರಗ ಮಹೋತ್ಸವ ದೇವಸ್ಥಾನಕ್ಕೆ ಸೀಮಿತ

HC directs to fill doctors’ posts in prisons

ಕಾರಾಗೃಹಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆ ಭರ್ತಿಗೆ ಹೈಕೋರ್ಟ್‌ ನಿರ್ದೇಶನ

incedent held at bangalore

ಹನಿಟ್ರ್ಯಾಪ್‌: ಇಬ್ಬರು ವಂಚಕರ ಬಂಧನ

nasa-released-milky-way-galaxy-images-taken-from-international-space-station

ಕ್ಷೀರಪಥದ ಅಮೋಘ ಚಿತ್ರ ಬಿಡುಗಡೆಗೊಳಿಸಿದೆ ನಾಸಾ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.