ರೇಮಂಡ್ಸ್ನಲ್ಲಿ 10,000 ನೌಕರರ ಬದಲು ರೋಬೋ
Team Udayavani, May 18, 2017, 2:20 PM IST
ಚೆನ್ನೈ: ರೋಬೋ ತಂತ್ರಜ್ಞಾನಕ್ಕೆ ಭಾರತದಲ್ಲೇ ಮೊದಲ ಬಲಿ! ಹೌದು, ಜವುಳಿ ತಯಾರಿಕಾ ದೈತ್ಯ ರೇಮಂಡ್ಸ್ ಮುಂದಿನ 3 ವರ್ಷಗಳಲ್ಲಿ 10,000 ಉದ್ಯೋಗ ಕಡಿತ ಮಾಡಲಿದೆ. ಈ ಉದ್ಯೋಗಿಗಳ ಜಾಗವನ್ನು ರೋಬೋಟ್ಗಳು ಆಕ್ರಮಿಸಿಕೊಳ್ಳಲಿದೆ. ಘಟಕಗಳಲ್ಲಿ ರೋಬೋ ತಂತ್ರ ಜ್ಞಾನ ಅಳವಡಿಸಿಧಿಕೊಳ್ಳಲಿರುವುದರಿಂದ ಉದ್ಯೋಗ ಕಡಿತ ಅನಿವಾರ್ಯ ಎಂದು ಸಿಇಒ ಸಂಜಯ್ ಬೆಹ್ಲ ತಿಳಿಸಿದ್ದಾರೆ.