ಚರಂಡಿ ಸ್ವಚ್ಛತೆಗೆ ರೋಬೋ

Team Udayavani, Feb 20, 2018, 3:37 PM IST

ತಿರುವನಂತಪುರಂ: ಇದೇ ಮೊದಲ ಬಾರಿಗೆ ಕೇರಳದಲ್ಲಿ ರೊಬೋಟ್‌ಗಳೇ ಚರಂಡಿ ಸ್ವಚ್ಛಗೊಳಿಸಲಿದೆ.  ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ರೊಬೋಗಳ ಸೇವೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮುಂದಿನ ವಾರ ಕಾರ್ಯಾ ರಂಭಗೊಳ್ಳಲಿದೆ ಎಂದು ಜಲ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರಾದ ಎ. ಶೈನಮೋಳ್‌ ತಿಳಿಸಿದ್ದಾರೆ.

ಜೆನ್‌ರೊಬೋಟಿಕ್ಸ್‌ ಎಂಬ ಸ್ಟಾರ್ಟ್‌ಅಪ್‌ ಕಂಪನಿ ಅಭಿವೃದ್ಧಿಪಡಿಸಿರುವ ಈ ರೊಬೋಟ್‌ನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಈ ರೊಬೋಟ್‌ನಲ್ಲಿ ವೈಫೈ, ಬ್ಲೂಟೂಥ್‌ ವ್ಯವಸ್ಥೆಯೂ ಇದ್ದು, ನಿಯಂತ್ರಣಾ ಫ‌ಲಕವನ್ನೂ ಹೊಂದಿದೆ. ರೋಬೋಗೆ ನಾಲ್ಕು ಕೈಗಳು ಮತ್ತು ಬಕೆಟ್‌ ವ್ಯವಸ್ಥೆ ಅಳವಡಿಸಲಾಗಿದ್ದು, ಅದರ ಮೂಲಕ ತ್ಯಾಜ್ಯವನ್ನು ಹೊರತೆಗೆಯುತ್ತದೆ. ಮೊದಲಿಗೆ 5 ಸಾವಿರ ಚರಂಡಿಗಳನ್ನು ಹೊಂದಿರುವ ತಿರುವನಂತಪುರಂನಲ್ಲಿ ಇದನ್ನು ಬಳಸಲಾಗುತ್ತದೆ. ಒಂದು ಗಂಟೆಯಲ್ಲಿ ನಾಲ್ಕು ಮ್ಯಾನ್‌ ಹೋಲ್‌ಗ‌ಳನ್ನು ಸ್ವತ್ಛಗೊಳಿಸುವ ಸಾಮರ್ಥ್ಯ
ಈ ರೊಬೋಟ್‌ಗಳಿಗಿವೆ.

ಈ ರೋಬೋ ಕುರಿತ ಮಾಹಿತಿಯನ್ನು ಈಗಾಗಲೇ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಂಥ ನೆರೆ ರಾಜ್ಯಗಳೂ ಕೇಳಿವೆ. ಕೆನಡಾ, ಯುಕೆಯಂಥ ದೇಶಗಳೂ ನಮ್ಮನ್ನು ಸಂಪರ್ಕಿಸಿವೆ ಎಂದು ಜೆನ್‌ರೊಬೋಟಿಕ್ಸ್‌ ಸಂಸ್ಥೆ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ