ವಿದ್ಯಾರ್ಥಿ ವೇತನ ಹೆಚ್ಚಳ
Team Udayavani, Jul 23, 2018, 11:15 AM IST
ಹೊಸದಿಲ್ಲಿ: ಅಲ್ಪಸಂಖಾಕ ಸಮುದಾಯದ ಹೆಣ್ಣುಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿವೇತನದ ಪ್ರಮಾಣವನ್ನು ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ. ಕೇಂದ್ರ ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವಾಲಯದ ಅಡಿ ಬರುವ ಮೌಲಾನಾ ಆಜಾದ್ ಶಿಕ್ಷಣ ಪ್ರತಿಷ್ಠಾನ ಈ ನಿರ್ಧಾರ ಕೈಗೊಂಡಿದ್ದು, ಬೇಗಂ ಹಜ್ರತ್ ಮಹಲ್ ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಮೀಸಲಿಡುವ ಮೊತ್ತವನ್ನು ಹೆಚ್ಚಳ ಮಾಡಲು ತೀರ್ಮಾನಿಸಿದೆ. 2017-18ರಲ್ಲಿ 1.15 ಲಕ್ಷ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರಿಜ್ವನೂರ್ ರೆಹಮಾನ್ ಹೇಳಿದ್ದಾರೆ.