ರಾಮ್ಪಾಲ್ಗೆ ಜೀವಾವಧಿ
Team Udayavani, Oct 17, 2018, 7:05 AM IST
ಹಿಸಾರ್ (ಹರಿಯಾಣ): ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ರಾಮ್ಪಾಲ್ಗೆ ಮತ್ತು 14 ಮಂದಿ ಅನುಯಾಯಿಗಳಿಗೆ ಜೀವಾವಧಿ ಶಿಕ್ಷೆ ನೀಡಿದೆ. ಹಿಸಾರ್ನ ಸ್ಥಳೀಯ ಕೋರ್ಟ್ ಮಂಗಳವಾರ ಈ ಆದೇಶ ನೀಡಿ, 1 ಲಕ್ಷ ರೂ. ದಂಡವನ್ನೂ ವಿಧಿಸಿದೆ. ಕ್ರಿಮಿನಲ್ ಸಂಚು ಆರೋಪಕ್ಕೆ ಸಂಬಂಧಿಸಿ 1ಲಕ್ಷ ರೂ.ದಂಡ ವಿಧಿಸಿದೆ. ಎರಡೂ ಶಿಕ್ಷೆಗಳನ್ನು ಒಂದೇ ಹಂತದಲ್ಲಿ ಜಾರಿಯಾಗಲಿವೆ ಎಂದು ಕೋರ್ಟ್ ಹೇಳಿದೆ. 2014ರಲ್ಲಿ ನಡೆದ ಎರಡು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ಪಾಲ್ ಮತ್ತು ಅನುಯಾಯಿಗಳ ವಿರುದ್ಧ ಕೇಸು ದಾಖಲಾಗಿತ್ತು.