ಲೈಂಗಿಕ ದೌರ್ಜನ್ಯ ಪರೀಕ್ಷೆ ಕಿಟ್ ರಾಜ್ಯಗಳಿಗೆ ರವಾನೆ
Team Udayavani, Apr 22, 2019, 6:05 AM IST
ಹೊಸದಿಲ್ಲಿ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆಗೆ ಸಹಕಾರವಾಗುವಂತೆ ರಕ್ತ ಮತ್ತು ವೀರ್ಯ ಮಾದರಿಗಳನ್ನು ಸಂಗ್ರಹಿಸುವ ವಿಶೇಷ ಕಿಟ್ಗಳನ್ನು ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಿದೆ.
ಈ ಕಿಟ್ನ ನೆರವಿನಿಂದ ತಕ್ಷಣ ವೈದ್ಯಕೀಯ ಪರೀಕ್ಷೆ ನಡೆಸಲು ಸಹಾಯವಾಗು ತ್ತದೆ ಮತ್ತು ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ತಕ್ಷಣ ಸಲ್ಲಿಸಬಹುದಾಗಿದೆ. ಒಟ್ಟು 3,120 ಕಿಟ್ಗಳನ್ನು ವಿತರಿಸಲಾಗಿದೆ. ಇದು ಪೊಲೀಸರಿಗೆ ಅತ್ಯಂತ ಅನುಕೂಲಕರ ಕಿಟ್ ಆಗಿರಲಿದೆ.