ಶೋಪಿಯಾನ್ ಫೈರಿಂಗ್: ಸೇನೆಯ ಎಫ್ಐಆರ್
Team Udayavani, Feb 1, 2018, 6:40 AM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಪೊಲೀಸರು ತನ್ನ ವಿರುದ್ಧ ಎಫ್ಐಆರ್ ದಾಖಲಿಸಿದಕ್ಕೆ ಪ್ರತಿಯಾಗಿ ಸೇನೆ ಮತ್ತೂಂದು ಎಫ್ಐಆರ್ ದಾಖಲಿಸಿದೆ.
ಗಲಭೆಕೋರರ ಅನಿಯಂತ್ರಿತ ವರ್ತನೆಯಿಂದಾಗಿ ಸೈನಿಕರಿಗೆ ಅಪಾಯ ಬಂದೊದಗಿದ್ದರಿಂದ, ಸ್ವ ರಕ್ಷಣೆಗಾಗಿ ಗೋಲಿಬಾರ್ ಅನಿವಾರ್ಯವಾಯಿತು ಸೇನೆ ಹೇಳಿಕೊಂಡಿದೆ. ಈ ಬೆಳವಣಿಗೆಯಿಂದಾಗಿ ಸೇನೆ ಮತ್ತು ಪೊಲೀಸ್ ಇಲಾಖೆ ನಡುವೆ ಸಮರ ಶುರುವಾಗಿದೆ.
ಜ. 27ರಂದು ಶೋಪಿಯಾನ್ನ ಗನೋವ್ಪೊರಾ ಪ್ರಾಂತ್ಯದಲ್ಲಿ ಸೇನೆಯ ಗರ್ವಾಲ್ ತುಕಡಿಯ ಮೇಲೆ ಕಲ್ಲು ತೂರಾಟದ ವೇಳೆ, ಪರಿಸ್ಥಿತಿ ನಿಯಂತ್ರಣ ಮೀರಿದ್ದರಿಂದ ಗೋಲಿಬಾರ್ ನಡೆಸಲಾಗಿತ್ತು. ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಸರಕಾರದ ಅಂಗಪಕ್ಷವಾದ ಬಿಜೆಪಿಯ ವಿರೋಧದ ನಡುವೆಯೂ ಸೇನೆಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಜ್ಯದ ಪೊಲೀಸ್ ಇಲಾಖೆಗೆ ಸೂಚಿಸಿದ್ದರು. ಈ ಬೆಳವಣಿಗೆ ಬಿಜೆಪಿ ಮತ್ತು ಪಿಡಿಪಿ ಮೈತ್ರಿಕೂಟದ ನಾಯಕರ ನಡುವೆ ವಾಗ್ವಾದವೂ ನಡೆದಿತ್ತು.
ಮತ್ತೂಬ್ಬ ಸಾವು: ಶೋಪಿಯಾನ್ ಫೈರಿಂಗ್ ವೇಳೆ ಗಾಯಗೊಂಡ ಮತ್ತೂಬ್ಬ ವ್ಯಕ್ತಿ ಅಸುನೀಗಿದ್ದರಿಂದ ಸಾವಿಗೀಡಾದವರ ಸಂಖ್ಯೆ ಮೂರಕ್ಕೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?