ಹತ್ಯೆಗೀಡಾದ ಆಪ್ತನ ಶವಯಾತ್ರೆ;ಹೆಗಲು ಕೊಟ್ಟ ಸಚಿವೆ ಸ್ಮೃತಿ

Team Udayavani, May 26, 2019, 4:19 PM IST

ಅಮೇಥಿ: ಇಲ್ಲಿನ ಬರೌಲಿಯಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ಆಪ್ತಿ ಬಿಜೆಪಿ ನಾಯಕಸುರೇಂದ್ರ ಸಿಂಗ್‌ ಅವರ ಅಂತಿಮ ಯಾತ್ರೆಯಲ್ಲಿ ಕೇಂದ್ರ ಸಚಿವೆ ಸ್‌ಮೃತಿ ಇರಾನಿ ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು. ಶವಯಾತ್ರೆಯಲ್ಲಿಸುರೇಂದ್ರಸಿಂಗ್‌ ಅವರಶವವಕ್ಕೆ ಹೆಗಲುಕೊಟ್ಟವರಲ್ಲಿ ತಾವೂ ಒಬ್ಬರಾಗಿ ತಮ್ಮ ಗೆಲುವಿಗಾಗಿ ಹಗಲಿರುಳು ದುಡಿದ ನಾಯಕನನ್ನು ನೆನೆದು ಕಣ್ಣೀರು ಹಾಕಿದರು.

ಈಗಾಗಲೇ ಪೊಲೀಸರು ಪ್ರಕರಣ ಉನ್ನತ ಮಟ್ಟದ ತನಿಖೆ ಆರಂಭಿಸಿದ್ದು 6 ಮಂದಿ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸ್ಮೃತಿ ಇರಾನಿ ಅವರ ಗೆಲುವಿನ ಸಂಭ್ರಮಾಚರಣೆಗೆ ತೆರಳಿ ಮನೆಗೆ ವಾಪಾಸಾಗಿ ಮನೆಯ ಹೊರಗೆ ಮಲಗಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸುರೇಂದ್ರ ಸಿಂಗ್‌ ಕೊನೆಯುಸಿರೆಳೆದಿದ್ದರು.

ಸುರೇಂದ್ರ ಸಿಂಗ್‌ ಅವರು ಸ್ಮೃತಿ ಇರಾನಿ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದು ತಳಮಟ್ಟದಲ್ಲಿ ಭಾರೀ ಶ್ರಮ ವಹಿಸಿದ್ದರು ಎಂದು ಹೇಳಲಾಗಿದೆ.

ಇದುವರೆಗೆ ಅಮೇಥಿಯಲ್ಲಿ ಶಾಂತಿಯುತ ವಾತಾವರಣವಿದ್ದು,ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

ಅಮೇಥಿ ಕ್ಷೇತ್ರದಲ್ಲಿ ಇರಾನಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ವಿರುದ್ಧ ಭರ್ಜರಿ ಜಯ ಗಳಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ