ಹೊಸ ದರಕ್ಕೆ ಸ್ನ್ಯಾಪ್‌ಡೀಲ್ ಓಕೆ!
Team Udayavani, Jul 27, 2017, 8:25 AM IST
ಮುಂಬಯಿ: ಆನ್‌ಲೈನ್ ಮಾರಾಟ ತಾಣ ಸ್ನ್ಯಾಪ್ ಡೀಲ್ ಅನ್ನು ಫ್ಲಿಪ್‌ಕಾರ್ಟ್ ಖರೀದಿಸುವ ವಿಚಾರದಲ್ಲಿ ಮತ್ತಷ್ಟು ಬೆಳವಣಿಗೆಗಳಾಗಿದ್ದು, ಫ್ಲಿಪ್‌ಕಾರ್ಟ್‌ನ ಹೊಸ ದರಕ್ಕೆ ಸ್ನ್ಯಾಪ್‌ಡೀಲ್ ಬಹುತೇಕ ಸಮ್ಮತಿ ಸೂಚಿಸಿದೆ ಎಂದು ಮೂಲಗಳು ಹೇಳಿವೆ. ಈ ಮೂಲಕ ಎರಡೂ ಕಂಪೆನಿಗಳು ಭಾರತದಲ್ಲಿ ಜಾಗತಿಕ ದೈತ್ಯ ಅಮೆಜಾನ್ ಅನ್ನು ಎದುರಿಸಲು ಸಿದ್ಧತೆ ನಡೆಸಿಕೊಳ್ಳುತ್ತಿವೆ.
ಮೂಲಗಳ ಪ್ರಕಾರ ಸ್ನ್ಯಾಪ್‌ಡೀಲ್ ಖರೀದಿಗೆ ಅಂದಾಜು 5760 - 608 0 ಕೋಟಿ ರೂ.ಗಳ ಪರಿಷ್ಕೃತ ಬಿಡ್ಡಿಂಗ್ ಮೊತ್ತವನ್ನು ಫ್ಲಿಪ್‌ಕಾರ್ಟ್ ಪ್ರಸ್ತಾವ ಮಾಡಿದೆ. ಈ ಪ್ರಸ್ತಾವನೆಗೆ ಸ್ನ್ಯಾಪ್‌ಡೀಲ್ ಷೇರುದಾರರು ಸಮ್ಮತಿಯನ್ನು ಸೂಚಿಸಬೇಕಿದೆ.
ಆದರೆ ಸದ್ಯ ಖರೀದಿ ಬೆಲೆ ಕುರಿತಂತೆ ಪ್ರತಿಕ್ರಿಯಿಸಲು ಎರಡೂ ಕಂಪೆನಿಗಳು ನಿರಾ ಕರಿಸಿವೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ಸ್ನ್ಯಾಪ್‌ಡೀಲ್ ಅನ್ನು ಫ್ಲಿಪ್
ಕಾರ್ಟ್‌ಗೆ ಮಾರಾಟ ಮಾಡಲು ಸ್ನ್ಯಾಪ್‌ಡೀಲ್‌ನ ಅತಿ ದೊಡ್ಡ ಹೂಡಿಕೆದಾರ ಕಂಪೆನಿ ಜಪಾನ್‌ನ ಸಾಫ್ಟ್ಬ್ಯಾಂಕ್ ಮನಸ್ಸು ಹೊಂದಿದೆ. ಈ ಮೂಲಕ ಫ್ಲಿಪ್‌ಕಾರ್ಟ್‌ನ ಈಕ್ವಿಟಿಯಲ್ಲಿ ಪಾಲು ಹೊಂದುವ ಉದ್ದೇಶ ಹೊಂದಿದೆ. ಈ ಮೊದಲು ಫ್ಲಿಪ್‌ಕಾಟ್ ಸ್ನ್ಯಾಪ್‌ಡೀಲ್ ಖರೀದಿಗೆ ಅಂದಾಜು 4,480 ಕೋಟಿ ರೂ. ಪ್ರಸ್ತಾವನೆ ಇಟ್ಟಿತ್ತು ಎಂದು ಹೇಳಲಾಗಿತ್ತು. ಕಳೆದ ವರ್ಷ ಅರ್ನೆಸ್ಟ್ ಆ್ಯಂಡ್ ಯಂಗ್ ಎಂಬ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಪ್ರಕಟಿಸಿರುವ ವರದಿ ಪ್ರಕಾರ 2020ರ ವೇಳೆಗೆ ಇ-ಕಾಮರ್ಸ್ ಕ್ಷೇತ್ರದ ವಹಿವಾಟು ಭಾರತದಲ್ಲಿ 35 ಬಿಲಿಯನ್ ಡಾಲರ್‌ಗಳಿಗೆ ಏರಲಿದೆ ಎಂದು ಅಂದಾಜಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ