ಪದವಿ ಜತೆಗೆ ಪಿಎಚ್‌.ಡಿ


Team Udayavani, Mar 18, 2022, 7:00 AM IST

Untitled-1

ಹೊಸದಿಲ್ಲಿ: ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಜಾರಿಯಾಗಲಿರುವ ನಾಲ್ಕು ವರ್ಷಗಳ ಪದವಿ ಮುಕ್ತಾಯಗೊಳಿಸಿದರೆ ಪಿಎಚ್‌.ಡಿ. ಪದವಿಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ 7.5 ಕ್ಯುಮುಲೇಟಿವ್‌ ಗ್ರೇಡ್‌ ಪಾಯಿಂಟ್‌ ಎವರೇಜ್‌ (ಸಿಜಿಪಿಎ) ಅಂಕಗಳು ಬೇಕಾಗುತ್ತವೆ. ಇಂಥ ಒಂದು ಸುವರ್ಣಾವಕಾಶ ಕಲ್ಪಿಸಿದೆ ಯುಜಿಸಿ.

ಮತ್ತೂಂದು ಮಹತ್ವದ ಅಂಶ ವೆಂದರೆ, ಪಿಎಚ್‌.ಡಿ.ಗೆ ನ್ಯಾಶನಲ್‌ ಎಲಿಜಿಬಿಲಿಟಿ ಟೆಸ್ಟ್‌ (ಎನ್‌ಇಟಿ) ಮತ್ತು ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ಜತೆಗೆ ಮತ್ತೂಂದು ಪ್ರವೇಶ ಪರೀಕ್ಷೆಯೂ ನಡೆಯಲಿದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಶೇ. 60 ಸೀಟು ಮೀಸಲು. ಉಳಿದ ಶೇ. 40ನ್ನು ಆಯಾ ವಿ.ವಿ. ವ್ಯಾಪ್ತಿಯಲ್ಲಿ ಭರ್ತಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ದೇಶದ ಉನ್ನತ ಶಿಕ್ಷಣದಲ್ಲಿ ಈ ಬದಲಾವಣೆ ಬರುವ ಸಾಧ್ಯತೆ ಇದೆ. ಮಾ. 10ರಂದು ನಡೆದ ಯುಜಿಸಿ ಸಭೆಯಲ್ಲಿ ಕರಡು ನಿಯಮಗಳಿಗೆ ಸಮ್ಮತಿ ಸೂಚಿಸಲಾಗಿದೆ.

ಅದಕ್ಕೆ ಲಿಖೀತ ಪರೀಕ್ಷೆಯಲ್ಲಿ 70 ಅಂಕ ಮತ್ತು ಸಂದರ್ಶನದಲ್ಲಿ 30 ಅಂಕ ಪಡೆಯಬೇಕು. ಎಸ್‌ಸಿ, ಎಸ್‌ಟಿ, ಒಬಿಸಿ, ಬಡ ವರ್ಗಕ್ಕೆ ಶೇ. 5 ಅಂಕ ರಿಯಾಯಿತಿಯೂ ಇದೆ. ಮುಂದಿನ ಶೈಕ್ಷಣಿಕ ವರ್ಷದಿಂದ ದೇಶದ ಉನ್ನತ ಶಿಕ್ಷಣದಲ್ಲಿ ಈ ಬದಲಾವಣೆ ಬರುವ ಸಾಧ್ಯತೆ ಇದೆ. ಮಾ. 10ರಂದು ನಡೆದ ಯುಜಿಸಿ ಸಭೆಯಲ್ಲಿ ಕರಡು ನಿಯಮಗಳಿಗೆ ಸಮ್ಮತಿ ಸೂಚಿಸಲಾಗಿದೆ.

ಪದವಿ ಶಿಕ್ಷಣ ಹೇಗಿರಲಿದೆ? :

ಹೊಸ ವ್ಯವಸ್ಥೆಯಲ್ಲಿ ಪದವಿ ಶಿಕ್ಷಣ ನಾಲ್ಕು ವರ್ಷ ಇರಲಿದೆ. ಏಳನೇ ಸೆಮಿಸ್ಟರ್‌ನಲ್ಲಿ  ಸಂಶೋಧನೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಪ್ರಧಾನ ಅಧ್ಯಯನ ವಿಷಯವಾಗಿ ಆಯ್ಕೆ ಮಾಡಿಕೊಂಡ ವಿಚಾರಗಳಿಗೆ ಪೂರಕವಾಗಿ ಸಂಶೋಧನೆ ನಡೆಸಬೇಕಾಗುತ್ತದೆ. ಎಂಟನೇ ಸೆಮಿಸ್ಟರ್‌ನಲ್ಲಿ ಸಂಶೋಧನಾತ್ಮಕ ಅಧ್ಯಯನಕ್ಕೆ ಹೆಚ್ಚು ಗಮನ ನೀಡಬೇಕಾಗುತ್ತದೆ.  ಕೊನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆನರ್ಸ್‌ ಪದವಿ ನೀಡಲಾಗುತ್ತದೆ.  7.5 ಸಿಜಿಪಿಎ ಆ್ಯವರೇಜ್‌ ಅಂಕಗಳಿದ್ದರೆ, ಪಿಎಚ್‌.ಡಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಮೊದಲ ಮೂರು ಸೆಮಿಸ್ಟರ್‌ಗಳಲ್ಲಿ ವಿಜ್ಞಾನ, ಮಾನವಿಕ ವಿಷಯಗಳು ಮತ್ತು ಸಾಮಾಜಿಕ ವಿಜ್ಞಾನಗಳಲ್ಲಿ ಪರಿಚಯಾತ್ಮಕ ಮತ್ತು ಆರಂಭಿಕ ಅಧ್ಯಯನಗಳು ಇರಲಿವೆ. ಜತೆಗೆ ಇಂಗ್ಲಿಷ್‌, ಕನ್ನಡ ಮತ್ತು “ಭಾರತವನ್ನು ಅರಿತುಕೊಳ್ಳುವಿಕೆ’ ಪರಿಸರ ವಿಜ್ಞಾನ, ಆರೋಗ್ಯ ಮತ್ತು ಕ್ಷೇಮಪಾಲನೆ ಅಥವಾ ಯೋಗ ಮತ್ತು ಕ್ರೀಡೆಗಳು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಬಿಗ್‌ ಡೇಟಾ ಅನಾಲಿಸಿಸ್‌ಗಳನ್ನೂ ಕಲಿಯಬೇಕಾಗುತ್ತದೆ.

ನಾಲ್ಕನೇ ವರ್ಷದಲ್ಲಿ ಅಂತಿಮ ಅಥವಾ 4ನೇ ವರ್ಷದಲ್ಲಿ ಪ್ರಧಾನ ಆಯ್ಕೆಯ ವಿಷಯದ ಅಧ್ಯಯನ.  ವಿದ್ಯಾರ್ಥಿಗಳು ಎರಡು ಪ್ರಧಾನ ವಿಷಯಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಬಹುದು. ಜತೆಗೆ 2 ವಿಭಿನ್ನ ವಿಷಯಗಳನ್ನು “ಮೈನರ್‌ ಸಬೆjಕ್ಟ್’ ಆಗಿ ಕಲಿಯಬಹುದು. ಉದಾಹರಣೆಗೆ ವಿಜ್ಞಾನ ವಿಷಯ ತೆಗೆದುಕೊಂಡ ವಿದ್ಯಾರ್ಥಿಗೆ ಮಾನವಿಕ ಅಥವಾ ಸಾಮಾಜಿಕ ವಿಜ್ಞಾನದ ವಿಷಯಗಳನ್ನು ಆಯ್ಕೆ ಮಾಡಬಹುದು.

ಹೊಸ ನಿಯಮ ಏನು? :

  1. ಸಂಶೋಧನೆಯ ಆಯ್ಕೆಯ ವಿಷಯ ಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
  2. ಸಾಮಾಜಿಕವಾಗಿ, ಸ್ಥಳೀಯವಾಗಿ ಅಗತ್ಯವಿರುವ, ರಾಷ್ಟ್ರೀಯ, ಅಂತಾ ರಾಷ್ಟ್ರೀಯ ಮಹತ್ವ ಪಡೆದಿರುವ ಮತ್ತು ಅದರಿಂದ ಸಮಾಜಕ್ಕೆ ಹೆಚ್ಚು ಮೌಲ್ಯ ನೀಡುವ ವಿಷಯಗಳನ್ನು ಆಯ್ಕೆ ಮಾಡಿದರೆ ಪ್ರೋತ್ಸಾಹ ನೀಡ ಲಾಗುತ್ತದೆ.
  3. ಸಂಶೋಧನಾ ವಿದ್ಯಾರ್ಥಿ ಮತ್ತು ಗೈಡ್‌ ಉತ್ತಮ ಕಲಿಕಾ ಬಾಂಧವ್ಯ ಕಲ್ಪಿಸಲು ಪರಸ್ಪರ ಒಪ್ಪಂದಕ್ಕೆ ಬರಲೂ ಅವಕಾಶ ಕಲ್ಪಿಸ ಲಾಗಿದೆ.
  4. ಸಂಶೋಧನಾ ವಿದ್ಯಾರ್ಥಿಗೆ ಹೆಚ್ಚು ಅನುಕೂಲವಾಗುವಂತೆ ಗೈಡ್‌ ಕೋರ್ಸ್‌ನಲ್ಲಿ ಹೆಚ್ಚಿನ ರೀತಿಯ ಮಾರ್ಗದರ್ಶನಗಳನ್ನೂ ನೀಡಬೇಕು.

160 ಕ್ರೆಡಿಟ್ಗಳು :  ನಾಲ್ಕು ವರ್ಷಗಳ ಪದವಿ ಕೋರ್ಸ್‌ಗಳಲ್ಲಿರುವುದು.

90 ದಿನ : ಪ್ರತೀ ಶೈಕ್ಷಣಿಕ ವರ್ಷದಲ್ಲಿನ ಕೆಲಸದ ದಿನಗಳು

02 : ಪ್ರತೀ ಶೈಕ್ಷಣಿಕ ವರ್ಷ ದಲ್ಲಿನ ಸೆಮಿಸ್ಟರ್‌ಗಳು

01 ಕ್ರೆಡಿಟ್ : 15 ಗಂಟೆಗಳ ತರಗತಿ ಅಧ್ಯಯನ

40 ಗಂಟೆ :ಪ್ರತೀ ವಾರಕ್ಕೆ ಇರುವ ಕಲಿಕೆಯ ಅವಧಿ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.