ಅಂಚೆ ಕಚೇರಿಯಲ್ಲಿ ಪಾಸ್ಪೋರ್ಟ್ ಅರ್ಜಿ
Team Udayavani, Feb 20, 2017, 3:45 AM IST
ನವದೆಹಲಿ: ಇನ್ನು ಪಾಸ್ಪೋರ್ಟ್ ಅರ್ಜಿ ಸಲ್ಲಿಕೆ ಬಲು ಸುಲಭ! ಅಂಚೆ ಕಚೇರಿಯಲ್ಲಿಯೇ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವ ದಿನಗಳು ಸನಿಹವಾಗಿವೆ.
ಮಾರ್ಚ್ ಮೊದಲ ವಾರದಿಂದ ದೇಶದ ಆಯ್ದ ನಗರಗಳ, ಪ್ರಮುಖ ಅಂಚೆಕಚೇರಿಗಳಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಆರಂಭಿಕ ಹಂತದಲ್ಲಿ ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ ಮತ್ತು ಜಾರ್ಖಂಡ್ನ ಪ್ರಮುಖ ಅಂಚೆಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈಗ 38 ಪಾಸ್ಪೋರ್ಟ್ ಕೇಂದ್ರಗಳಡಿಯಲ್ಲಿ 89 ಸೇವಾಕೇಂದ್ರಗಳು ಅರ್ಜಿಯನ್ನು ಸ್ವೀಕರಿಸುತ್ತಿವೆ. ಹೀಗಿದ್ದರೂ ದೇಶದಲ್ಲಿನ ಪಾಸ್ಪೋರ್ಟ್ ಅರ್ಜಿ ಸಲ್ಲಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು.