ಉಗ್ರರಿಂದ ಮತ್ತೊಬ್ಬ ಪೊಲೀಸ್ ಅಪಹರಣ
Team Udayavani, Jul 29, 2018, 6:00 AM IST
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರು ಮತ್ತೂಬ್ಬ ಪೊಲೀಸ್ ಸಿಬಂದಿಯನ್ನು ಅಪಹರಿಸಿದ್ದಾರೆ. ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಮೂರನೇ ಅಪಹರಣ ಪ್ರಕರಣ ಇದಾಗಿದೆ. ಇದಕ್ಕೂ ಮುನ್ನ ಉಗ್ರರು ಇಬ್ಬರು ಪೊಲೀಸರನ್ನು ಅಪಹರಿಸಿ, ಹತ್ಯೆಗೈದಿದ್ದರು. ಪುಲ್ವಾಮಾ ಜಿಲ್ಲೆಯ ವಿಶೇಷ ಪೊಲೀಸ್ ಅಧಿಕಾರಿ ಮುದಸ್ಸಿರ್ ಅಹಮದ್ ಲೋನ್ ಅವರನ್ನು ಆವಂತಿಪುರದಲ್ಲಿನ ರೆಶಿಪೊರಾ ಪೊಲೀಸ್ ಠಾಣೆಗೆ ನಿಯೋಜಿಸಲಾಗಿತ್ತು. ಶುಕ್ರವಾರ ರಾತ್ರಿಯೇ ಅವರು ನಾಪತ್ತೆಯಾದ ಬಗ್ಗೆ ಕುಟುಂಬ ಸದಸ್ಯರು ದೂರು ನೀಡಿದ್ದರು. ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
50 ಬುಲೆಟ್ಪ್ರೂಫ್ ಬಂಕರ್ಗಳು
ಉಗ್ರರ ದಾಳಿಯಿಂದ ರಕ್ಷಿಸಿಕೊಳ್ಳಲು ಜಮ್ಮು ಕಾಶ್ಮೀರ ಪೊಲೀಸರು 50 ಬುಲೆಟ್ ಪ್ರೂಫ್ ಬಂಕರ್ಗಳನ್ನು ಖರೀದಿಸಿದ್ದಾರೆ. ಎನ್ಐಜೆ 3 ಮಟ್ಟದ ಬಂಕರ್ಗಳು ಇವಾಗಿದ್ದು, ಒಂದರಲ್ಲಿ 10 ಪೊಲೀಸರು ಕುಳಿತುಕೊಳ್ಳಬಹುದಾಗಿದೆ. 10 ಮೀ. ಗಳಷ್ಟು ಸನಿಹದಿಂದ ಗುಂಡು ಹಾರಿಸಿದರೂ ಇದ ರೊಳಗಿರುವವರಿಗೆ ಯಾವುದೇ ಬಾಧೆಯಾಗದು. ಎಕೆ 47 ಹಾಗೂ ಎಸ್ಎಲ್ಆರ್ ಗುಂಡಿಗೂ ತಡೆದು ಕೊಳ್ಳಬಲ್ಲ ಸಾಮರ್ಥ್ಯವನ್ನು ಇವು ಹೊಂದಿರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ