ಸಿಹಿ ಕ್ರಾಂತಿಯತ್ತ ಹೆಜ್ಜೆ ಇಡಿ:ಪ್ರಧಾನಿ ನರೇಂದ್ರ ಮೋದಿ ಸಲಹೆ

Team Udayavani, Sep 18, 2017, 7:25 AM IST

modi.jpg

ಅಮ್ರೇಲಿ/ಹೊಸದಿಲ್ಲಿ: “ಜೇನು ಕೃಷಿಯ ಮೂಲಕ ರೈತರು “ಸಿಹಿ ಕ್ರಾಂತಿ’ಗೆ ಮುನ್ನುಡಿ ಬರೆಯಬೇಕು. ಜತೆಗೆ, ಸಾಗಣೆಗೆ ಜಲಮಾರ್ಗವನ್ನೇ ನೆಚ್ಚುವ ಮೂಲಕ “ನೀಲಿ ಕ್ರಾಂತಿ’ಗೆ ಕಾರಣವಾಗಬೇಕು.’

ಹೀಗೆಂದು ದೇಶದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ರವಿವಾರ 67ನೇ ವಸಂತಕ್ಕೆ ಕಾಲಿಟ್ಟ 
ಮೋದಿ ಅವರು ಗುಜರಾತ್‌ನ ಅಮ್ರೇಲಿಯಲ್ಲಿ ಸಹಕಾರ ಸಂಘಗಳ ಸಮ್ಮೇಳನದಲ್ಲಿ ಮಾತನಾಡುತ್ತಾ, ರೈತರ ಆದಾಯವನ್ನು ಹೆಚ್ಚಿಸಿಕೊಳ್ಳುವ ಅನೇಕ ದಾರಿಗಳ ಬಗ್ಗೆ ಮಾಹಿತಿ ನೀಡಿದರು.

ಹೊಸದಾಗಿ ನಿರ್ಮಿಸಲಾದ ಅಮ್ರೇಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, “ಹಸಿರು ಮತ್ತು ಶ್ವೇತ ಕ್ರಾಂತಿಯ ಬಳಿಕ ಇದೀಗ ನೀಲಿ ಮತ್ತು ಸಿಹಿ ಕ್ರಾಂತಿಯ ಸಮಯ ಬಂದಿದೆ. ಈ ಎರಡೂ ಕ್ರಾಂತಿಗಳಿಗೆ ಸೌರಾಷ್ಟ್ರದ ಜನತೆಯ ಬದುಕನ್ನೇ ಬದಲಿಸುವ ಶಕ್ತಿಯಿದೆ. ರೈತರು ಜೇನು ಕೃಷಿಯಲ್ಲಿ ತೊಡಗಲಿ. ಅಂತೆಯೇ ಹಾಲು ಸಹಕಾರ ಒಕ್ಕೂಟಗಳು ರೈತರಿಂದ ಜೇನನ್ನು ಖರೀದಿಸಿ, ಮಾರಾಟ ಮಾಡಬೇಕು. ಆಗ ಕೃಷಿಕರ ಆದಾಯವೂ ಹೆಚ್ಚುತ್ತದೆ’ ಎಂದರು. ಜತೆಗೆ, ಜಲಮಾರ್ಗದ ಮೂಲಕ ಸರಕು ಸಾಗಣೆ, ತಮ್ಮ ತಮ್ಮ ಹೊಲಗಳ ಬದಿಗಳಲ್ಲಿ ಟಿಂಬರ್‌ ಬೆಳೆಯುವುದು, ಅಂತರ್ಜಲಕ್ಕಾಗಿ ಹನಿ ನೀರಾವರಿ ಬಳಕೆ, ಸೌರಶಕ್ತಿಯ ಬಳಕೆಗೆ ಆದ್ಯತೆ ನೀಡುವಂತೆಯೂ ಅವರು ಕರೆ ನೀಡಿದರು.

ಅಮ್ಮನ ಆಶೀರ್ವಾದ ಪಡೆದ ಮೋದಿ: ಗುಜರಾತ್‌ನಲ್ಲಿ ಸರ್ದಾರ್‌ ಸರೋವರ ಡ್ಯಾಂ ಲೋಕಾರ್ಪಣೆಗೂ ಮುನ್ನ ಪ್ರಧಾನಿ ಮೋದಿ ಅವರು ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹುಟ್ಟೂರಿಗೆ ತೆರಳಿ ತಾಯಿ ಹೀರಾಬೆನ್‌ ಅವರ ಆಶೀರ್ವಾದವನ್ನು ಪಡೆದರು. ಇದೇ ವೇಳೆ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಪಕ್ಷದ ನಾಯಕ ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಅನೇಕ ಗಣ್ಯರು ಮೋದಿ ಅವರಿಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ.

ಪ್ರಧಾನಿ ಮೋದಿಯಿಂದ ಆರ್ಥಿಕ ಏಕೀಕರಣ:  ಪ್ರಧಾನಿ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಮತ್ತು ಡಾ| ಬಿ.ಆರ್‌.ಅಂಬೇಡ್ಕರ್‌ರಿಗೆ ಹೋಲಿಕೆ ಮಾಡಿದ್ದಾರೆ. ಭಾರತವು ಸರ್ದಾರ್‌ ಪಟೇಲ್‌ರನ್ನು ಪ್ರಾದೇಶಿಕ ಏಕೀಕರಣಕ್ಕೆ ನೀಡಿದ ಕೊಡುಗೆಗಾಗಿ ಸ್ಮರಿಸಿದರೆ, ಅಂಬೇಡ್ಕರ್‌ರನ್ನು ಸಾಮಾಜಿಕ ಏಕೀಕರಣಕ್ಕೆ ನೀಡಿದ ಕೊಡುಗೆಗಾಗಿ ಸ್ಮರಿಸುತ್ತದೆ. ಇದೀಗ ಪ್ರಧಾನಿ ಮೋದಿ ಅವರು ದೇಶದ ಆರ್ಥಿಕ ಏಕೀಕರಣದ ಸಾಧನೆ ಮಾಡುತ್ತಿದ್ದಾರೆ ಎಂದು ಶಾ  ಬ್ಲಾಗ್‌ನಲ್ಲಿ ಬರೆದಿದ್ದಾರೆ. ಬಡವರ ಬಗ್ಗೆ ಅವರಿಗಿರುವ ಕಾಳಜಿಯಿಂದಾಗಿ ಭಾರತದ ಇತಿಹಾಸದಲ್ಲೇ ಯಾರೂ ಕೇಳಿರದ ರೀತಿ ಬಡತನ ನಿರ್ಮೂಲನೆ ಯೋಜನೆಗಳು ರೂಪ ತಾಳುತ್ತಿವೆ. ಮೋದಿ ಸರಕಾರದಡಿ ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನ ನೀಡಲಾಗುತ್ತಿದೆ. ಮೋದಿ ಹೃದಯ ಎಂದಿಗೂ ಬಡವರು, ರೈತರಿಗಾಗಿ ಮಿಡಿಯುತ್ತದೆ ಎಂದಿದ್ದಾರೆ.

ದೇಶಾದ್ಯಂತ “ಸ್ವತ್ಛತೆಯೇ ಸೇವೆ’ ಅಭಿಯಾನ
ಪ್ರಧಾನಿ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ ರವಿವಾರ “ಸ್ವತ್ಛತಾ ಹೀ ಸೇವಾ'(ಸ್ವತ್ಛತೆಯೇ ಸೇವೆ) ಅಭಿಯಾನ ನಡೆಯಿತು. ಕೇಂದ್ರ ಸರಕಾರದ ಸ್ವತ್ಛ, ಆರೋಗ್ಯಕರ ಮತ್ತು ಬಲಿಷ್ಠ ಭಾರತ ನಿರ್ಮಾಣದ ಬದ್ಧತೆಯಂತೆಯೇ ಸಚಿವರಾದ ನಿರ್ಮಲಾ ಸೀತಾರಾಮನ್‌, ಮುಖಾ¤ರ್‌ ಅಬ್ಟಾಸ್‌ ನಕ್ವಿ, ಮಹೇಶ್‌ ಶರ್ಮಾ, ಹದೀìಪ್‌ ಸಿಂಗ್‌ ಪುರಿ, ಆಲೊ#àನ್ಸ್‌ ಕಣ್ಣಂಥಾನಮ್‌ ಸೇರಿದಂತೆ ಅನೇಕರು ದೇಶದ ವಿವಿಧ ಭಾಗಗಳಲ್ಲಿ ಸ್ವತ್ಛತಾ ಅಭಿಯಾನ ನಡೆಸಿದರು. ದಿಲ್ಲಿ  ಕಂಟೋನ್ಮೆಂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವೆ ನಿರ್ಮಲಾ ಮತ್ತವರ ತಂಡ, ಅತಿ ಎತ್ತರದ ಪ್ರದೇಶಗಳು ಮತ್ತು ಹಿಮಗಲ್ಲಿನ ವಲಯಗಳಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡುವ ನಿರ್ಧಾರ ಕೈಗೊಂಡರು. ರಾಷ್ಟ್ರಪತಿ ಕೋವಿಂದ್‌ ಅವರು ಈ ಅಭಿಯಾನಕ್ಕೆ ಸೆ.15ರಂದು ಕಾನ್ಪುರದಲ್ಲಿ ಚಾಲನೆ ನೀಡಿದ್ದರು. 
ಗಾಂಧಿ ಜಯಂತಿಯಂದು ಅಂದರೆ ಅ.2ರವರೆಗೆ ಇದು ನಡೆಯಲಿದೆ.

ಟಾಪ್ ನ್ಯೂಸ್

Yadgiri ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ದುರ್ಮರಣ

Yadgiri ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ದುರ್ಮರಣ

Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್‌ ಕ್ಲಾಸ್‌

Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್‌ ಕ್ಲಾಸ್‌

1

Horoscope: ಹಿತಶತ್ರುಗಳು ಮತ್ತು ಸ್ವಾರ್ಥಿಗಳ ಬಗ್ಗೆ ಎಚ್ಚರವಿರಲಿ

Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ

Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ

Election Result: ಟ್ರೆಂಡ್‌ ಗೊತ್ತಾದರೂ ಫ‌ಲಿತಾಂಶ ಘೋಷಣೆ ವಿಳಂಬ ಸಾಧ್ಯತೆ

Election Result: ಟ್ರೆಂಡ್‌ ಗೊತ್ತಾದರೂ ಫ‌ಲಿತಾಂಶ ಘೋಷಣೆ ವಿಳಂಬ ಸಾಧ್ಯತೆ

ಮೇಲ್ಮನೆ: ಶಿಕ್ಷಕ, ಪದವೀಧರ ಕ್ಷೇತ್ರಕ್ಕಿಂದು ಮತದಾನ… 78 ಅಭ್ಯರ್ಥಿಗಳು ಕಣದಲ್ಲಿ

ಮೇಲ್ಮನೆ: ಶಿಕ್ಷಕ, ಪದವೀಧರ ಕ್ಷೇತ್ರಕ್ಕಿಂದು ಮತದಾನ… 78 ಅಭ್ಯರ್ಥಿಗಳು ಕಣದಲ್ಲಿ

1-wqeewqewqewq

Highway toll ಹೆಚ್ಚಳ; ಲೋಕಸಭೆ ಚುನಾವಣೆ ಹಿನ್ನೆಲೆ ಮುಂದೂಡಿಕೆಯಾಗಿದ್ದ ದರ ಏರಿಕೆ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeewqewqewq

Highway toll ಹೆಚ್ಚಳ; ಲೋಕಸಭೆ ಚುನಾವಣೆ ಹಿನ್ನೆಲೆ ಮುಂದೂಡಿಕೆಯಾಗಿದ್ದ ದರ ಏರಿಕೆ 

sens-2

Exit poll ವರದಿಗಳ ಬೆನ್ನಲ್ಲೇ ಷೇರು ಮಾರುಕಟ್ಟೆ ಏರಿಕೆ ನಿರೀಕ್ಷೆ!

Vimana 2

Again ವಿಮಾನಕ್ಕೆ ಬಾಂಬ್‌ ಬೆದರಿಕೆ: ವಾರದಲ್ಲಿ 4ನೇ ಘಟನೆ

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

Yadgiri ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ದುರ್ಮರಣ

Yadgiri ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ದುರ್ಮರಣ

Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್‌ ಕ್ಲಾಸ್‌

Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್‌ ಕ್ಲಾಸ್‌

1

Horoscope: ಹಿತಶತ್ರುಗಳು ಮತ್ತು ಸ್ವಾರ್ಥಿಗಳ ಬಗ್ಗೆ ಎಚ್ಚರವಿರಲಿ

Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ

Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ

Election Result: ಟ್ರೆಂಡ್‌ ಗೊತ್ತಾದರೂ ಫ‌ಲಿತಾಂಶ ಘೋಷಣೆ ವಿಳಂಬ ಸಾಧ್ಯತೆ

Election Result: ಟ್ರೆಂಡ್‌ ಗೊತ್ತಾದರೂ ಫ‌ಲಿತಾಂಶ ಘೋಷಣೆ ವಿಳಂಬ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.