ಸೇನಾಧಿಕಾರಿಗಳ ಸೋಗಿನಲ್ಲಿ ಬಂದು ಸೇನಾ ಶಿಬಿರದಿಂದಲೇ ಶಸ್ತ್ರಾಸ್ತ್ರ ಕದ್ದರು!

Team Udayavani, Dec 7, 2019, 11:15 AM IST

ಭೋಪಾಲ್: ಇಬ್ಬರು ಅಪರಿಚತರು ಸೇನಾಧಿಕಾರಿಗಳ ಸೋಗಿನಲ್ಲಿ ಬಂದು ಸೇನಾ ಶಿಬಿರದಿಂದ ರೈಫಲ್ ಗಳು ಮತ್ತು ಸಿಡಿಗುಂಡುಗಳನ್ನು ದೋಚಿದ ಘಟನೆ ಗುರುವಾರ ರಾತ್ರಿ ಪಚಮಾರಿ ಶಿಬಿರದಲ್ಲಿ ನಡೆದಿದೆ.

ಭೋಪಾಲ್ ನಿಂದ 200 ಕಿ.ಮೀ ದೂರದಲ್ಲಿರುವ ಪಚಮಾರಿ ಸೇನಾ ಶಿಬಿರಕ್ಕೆ ಗುರುವಾರ ರಾತ್ರಿ ಇಬ್ಬರು ಆಗಮಿಸಿದ್ದರು. ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಂದಿಗೆ ಮಾತನಾಡುತ್ತಾ ಅಲ್ಲಿಂದ ಒಂದು ಐಎನ್ಎಸ್ಎಎಸ್ ರೈಫಲ್ ಮತ್ತು 20 ಸಜೀವ ಸಿಡಿಗುಂಡುಗಳನ್ನು ಆ ಅಪರಿಚಿತರು ಎಗರಿಸಿದ್ದಾರೆ. ಅವರಿಬ್ಬರೂ ಟ್ಯಾಕ್ಸಿಯಲ್ಲಿ ಅಲ್ಲಿಂದ ಹೋದ ನಂತರವೇ ಶಸ್ತ್ರಾಸ್ತ್ರ ಕಳುವಿನ ಮಾಹಿತಿ ಸಿಬ್ಬಂದಿಗೆ ತಿಳಿದಿದೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಅಪರಿಚತರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಎಲ್ಲಾ ಕಡೆ ಎಚ್ಚರಿಕೆ ವಹಿಸಲಾದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ