ಟ್ರೈನ್18 ಮೇಲೆ ಕಲ್ಲೆಸೆತ
Team Udayavani, Dec 21, 2018, 6:25 AM IST
ಹೊಸದಿಲ್ಲಿ: ಭಾರತೀಯ ರೈಲ್ವೆಯ ಅತಿ ವೇಗದ ರೈಲು ಎಂದು ಹೆಗ್ಗಳಿಕೆ ಪಡೆದಿರುವ “ಟ್ರೈನ್ 18’ಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಹೊಸದಿಲ್ಲಿ ಮತ್ತು ಆಗ್ರಾ ನಡುವೆ ಪರೀಕ್ಷಾರ್ಥ ಸಂಚಾರ ನಡೆಯುತ್ತಿರುವ ವೇಳೆ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯ ಮುಖ್ಯ ವಿನ್ಯಾಸಕ ಶ್ರೀನಿವಾಸ್ ತಿಳಿಸಿದ್ದಾರೆ.
ಘಟನೆ ಸಂದರ್ಭದಲ್ಲಿ “ಟ್ರೈನ್ 18′ ಗಂಟೆಗೆ 180 ಕಿಮೀ ವೇಗದಲ್ಲಿ ಸಂಚರಿಸುತ್ತಿತ್ತು. ದೇಶದ ಮೊದಲ ಎಂಜಿನ್ ರಹಿತ ಟ್ರೈನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅದನ್ನು ಡಿ.29ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.