ಸೂರ್ಯನ ಹೊರಕವಚದಲ್ಲಿ ಸ್ಫೋಟ!
ನಾಸಾದ ಸೋಲಾರ್ ಡೈನಾಮಿಕ್ಸ್ ಆಬ್ಸರ್ವೇಟರಿಯಲ್ಲಿ ಫೋಟೋ
Team Udayavani, Aug 2, 2022, 6:50 AM IST
ನವದೆಹಲಿ: ನಮ್ಮ ಸೌರಮಂಡಲದ ಪ್ರಮುಖ ನಕ್ಷತ್ರವೆನಿಸಿರುವ ಸೂರ್ಯನ ಈಶಾನ್ಯ ಪಾರ್ಶ್ವದಲ್ಲಿ ಜು. 31ರಂದು ಸ್ಫೋಟ ಸಂಭವಿಸಿದೆ.
“ಯೂನಿವರ್ಸಲ್ ಟೈಮ್ ಕೊಆರ್ಡಿನೇಷನ್’ (ಯುಟಿಸಿ) ಪ್ರಕಾರ, ಜು. 31ರ 23:09 ಗಂಟೆಗೆ (ಭಾರತೀಯ ಕಾಲಮಾನದ ಆ. 1ರ ಬೆಳಗಿನ ಜಾವ 4:30ರ ಸುಮಾರಿಗೆ) ಈ ಸ್ಫೋಟ ಸಂಭವಿಸಿದ್ದು, ಅದನ್ನು ನಾಸಾದ “ಸೋಲಾರ್ ಡೈನಮಿಕ್ಸ್ ಅಬ್ಸರ್ವೇಟರಿ’ (ಎಸ್ಡಿಒ) ಸೆರೆಹಿಡಿದಿದೆ.
ಆದರೆ, ಭೂಮಿಯ ಕಡೆಯಿಂದ ಸೆರೆಹಿಡಿದಿರುವ ಈ ವಿಡಿಯೋದಲ್ಲಿ ಸ್ಫೋಟದ ಕೆನ್ನಾಲಿಗೆಗಳು ಸೂರ್ಯನ ಮೇಲ್ಮೈ ನಿಂದ ಹೊರಚಾಚಿರುವ ದೃಶ್ಯಗಳಿದ್ದು, ಅವು ಅಸ್ಪಷ್ಟವಾಗಿವೆ. ಇನ್ನು, ಸ್ಫೋಟಕ್ಕೆ ಕಾರಣವೇನು ಎಂಬ ವಿಚಾರವೂ ಸ್ಪಷ್ಟವಾಗಿಲ್ಲ.
ಆದರೆ, ಸ್ಫೋಟದಿಂದ ಹೊರಬಿದ್ದ ಕಿಡಿಗಳು ಬಾಹ್ಯಾಕಾಶದಲ್ಲಿ ಹಾರಿ ಹೋಗುತ್ತಿರುವುದನ್ನು ಅಬ್ಸರ್ವೇಟರಿ ಸೆರೆಹಿಡಿದಿದೆ ಎಂದು ನಾಸಾ ಹೇಳಿದೆ.
ಇತ್ತೀಚೆಗೆ, ಸೂರ್ಯನ ಜ್ವಾಲೆಗಳು ಹೆಚ್ಚೆಚ್ಚು ಉದ್ದುದ್ದವಾಗಿ ಕಾಣಿಸಿಕೊಳ್ಳುತ್ತಿದೆ. ಕಳೆದ 11 ವರ್ಷಗಳಿಂದ ಹೀಗಾಗುತ್ತಿದ್ದು, ಈಗ ಅದರ ಮೇಲ್ಮೈ ಮೇಲೆ ಸ್ಫೋಟವಾಗಿರುವುದು ಅಧ್ಯಯನದ ಬೇರೊಂದು ಆಯಾಮವನ್ನು ವಿಜ್ಞಾನಿಗಳ ಮುಂದೆ ತೆರೆದಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ