ಪ್ಯಾನ್‌ಕಾರ್ಡ್‌ಗೆ ತಂದೆ ಹೆಸರು ಕಡ್ಡಾಯವಲ್ಲ
Team Udayavani, Nov 21, 2018, 10:47 AM IST
ಹೊಸದಿಲ್ಲಿ: ತಾಯಿಯೇ ತಂದೆಯ ಸ್ಥಾನದಲ್ಲಿದ್ದರೆ (ಸಿಂಗಲ್ ಪೇರೆಂಟ್) ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ವೇಳೆ ತಂದೆಯ ಹೆಸರು ನಮೂದಿಸಬೇಕಾದ ಅಗತ್ಯವಿಲ್ಲ. ಹೀಗೆಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮಂಗಳವಾರ ತಿಳಿಸಿದೆ. ಈ ಬಗ್ಗೆ ಅರ್ಜಿ ಸಲ್ಲಿಕೆ ವೇಳೆ ಆಯ್ಕೆ ನೀಡಲಾಗುತ್ತದೆ ಎಂದು ಮಂಡಳಿ ಹೇಳಿದೆ. ಡಿ.5ರಿಂದ ಹೊಸ ನಿಯಮ ಜಾರಿಯಾಗಲಿದೆ. ಅರ್ಜಿದಾರರು ಬಯಸಿದರೆ ತಾಯಿಯ ಹೆಸರು ನಮೂದಿಸಬಹುದು. ಹಾಲಿ ಇರುವ ವ್ಯವಸ್ಥೆಯಲ್ಲಿ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ವೇಳೆ ತಂದೆಯ ಹೆಸರು ನಮೂದಿಸುವುದು ಕಡ್ಡಾಯವಾಗಿದೆ.
ಇಷ್ಟು ಮಾತ್ರವಲ್ಲದೆ ನಿಗದಿತ ವಿತ್ತೀಯ ವರ್ಷದಲ್ಲಿ 2.5 ಲಕ್ಷ ರೂ.ಅಥವಾ ಅದಕ್ಕಿಂತ ಹೆಚ್ಚು ವಹಿವಾಟು ನಡೆಸುವ ಸಂಸ್ಥೆಗಳು ಪ್ಯಾನ್ ಕಾರ್ಡ್ ಪಡೆದುಕೊಳ್ಳಬೇಕು ಎಂದು ಮಂಡಳಿ ತಿಳಿಸಿದೆ.