24 ವರ್ಷ ಬಳಿಕ ವೇದಿಕೆ ಹಂಚಿಕೊಂಡರು

ಮೈನ್‌ಪುರಿಯಲ್ಲಿ ನಡೆದ ಎಸ್ಪಿ-ಬಿಎಸ್ಪಿ ಬೃಹತ್‌ ರ್ಯಾಲಿಯಲ್ಲಿ ಮಾಯಾ-ಮುಲಾಯಂ ಭಾಗಿ

Team Udayavani, Apr 20, 2019, 6:00 AM IST

15

ಹೊಸದಿಲ್ಲಿ: ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಮತ್ತು ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಅವರು ಬರೋಬ್ಬರಿ 24 ವರ್ಷಗಳ ಹಗೆತನ ಮರೆತು ಶುಕ್ರವಾರ ಒಂದೇ ವೇದಿಕೆ ಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹಾವು-ಮುಂಗುಸಿ ಯಂತೆ ಕಚ್ಚಾ ಡಿಕೊಂಡಿದ್ದ ಉಭಯ ನಾಯಕರು ಪರಸ್ಪರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ ಕಾರ್ಯ ಕರ್ತರನ್ನು ಅಚ್ಚರಿಗೆ ನೂಕಿದ್ದಾರೆ.

ಉತ್ತರಪ್ರದೇಶದ ಮೈನ್‌ಪುರಿಯಲ್ಲಿ (ಮುಲಾಯಂ ಸ್ಪರ್ಧಿಸುತ್ತಿರುವ ಕ್ಷೇತ್ರ) ಶುಕ್ರವಾರ ಎಸ್ಪಿ-ಬಿಎಸ್ಪಿ ಮೈತ್ರಿ ಕೂಟದ ರ್ಯಾಲಿ ನಡೆದಿದ್ದು, ಇಲ್ಲಿ ಮಾಯಾ ಹಾಗೂ ಮುಲಾಯಂ ವೇದಿಕೆ ಹಂಚಿ ಕೊಂಡಿ ದ್ದಾರೆ. ಕಾರ್ಯಕ್ರ ಮದಲ್ಲಿ ಮಾತನಾಡಿದ ಮುಲಾಯಂ, ನಾನು ಮತ್ತು ಮಾಯಾವತಿ ದೀರ್ಘ‌ ಕಾಲದ ಬಳಿಕ ವೇದಿಕೆ ಹಂಚಿಕೊಂಡಿದ್ದೇವೆ. ಎಲ್ಲ ಕಾರ್ಯಕರ್ತರೂ ಮಾಯಾ ವತಿ ಅವರನ್ನು ಗೌರವದಿಂದ ಕಾಣಬೇಕು ಎಂದು ಕರೆ ನೀಡುವ ಮೂಲಕ 1995ರ ಘಟನೆ ಮರಕಳಿಸಬಾರದು ಎಂಬಂಥ ಸೂಚನೆ ಯನ್ನು ಪರೋಕ್ಷವಾಗಿ ನೀಡಿದ್ದಾರೆ.

ಎಸ್ಪಿ-ಬಿಎಸ್ಪಿ 2 ವರ್ಷಗಳ ಕಾಲ ಮೈತ್ರಿ ಸರಕಾರ ನಡೆಸಿತ್ತಾದರೂ, 1995 ರಲ್ಲಿ ಲಕ್ನೋದ ವಿವಿಐಪಿ ಅತಿಥಿಗೃಹದಲ್ಲಿ ಮಾಯಾವತಿ ಅವರ ಮೇಲೆ ಎಸ್ಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಅಂದಿನಿಂದ ಇಂದಿನವರೆಗೆ ಮಾಯಾ ಹಾಗೂ ಮುಲಾಯಂ ನಡುವಿನ ದ್ವೇಷ ಎಷ್ಟು ಪ್ರಖರವಾಗಿತ್ತೆಂದರೆ, ಇವರಿ ಬ್ಬರೂ ಎಂದೂ ಮುಖ-ಮುಖ ನೋಡಿರಲಿಲ್ಲ. ಈಗ ಹಳೆಯದೆಲ್ಲವನ್ನೂ ಮರೆತು ಇಬ್ಬರೂ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಒಂದಾಗಿದ್ದಾರೆ. ರ್ಯಾಲಿಯಲ್ಲಿ ಮಾತನಾಡಿದ ಮಾಯಾ ವತಿ, “ಮುಲಾಯಂ ಸಿಂಗ್‌ಜೀ ಸಮಾ ಜದ ಎಲ್ಲ ವರ್ಗಗಳನ್ನೂ ವಿಶೇಷವಾಗಿ ಹಿಂದುಳಿದ ವರ್ಗಗಳನ್ನು ತಮ್ಮೊಂದಿಗೆ ಕರೆದೊಯ್ದವರು. ಅವ ರೊಬ್ಬ ಹಿಂದು ಳಿದ ವರ್ಗಗಳ ನೈಜ ನಾಯಕ. ಅವರು ಪ್ರಧಾನಿ ಮೋದಿಯ ವರಂತೆ ನಕಲಿ ನಾಯಕನಲ್ಲ’ ಎಂದು ಹೇಳಿದ್ದಾರೆ. ಅಲ್ಲದೆ, ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಸರಕಾರ ಯಂತ್ರವನ್ನು ದುರ್ಬಳಕೆ ಮಾಡಿ ಕೊಂಡು, ತಮ್ಮ ಮೇಲ್ವರ್ಗದ ಜಾತಿ ಯನ್ನು ಹಿಂದುಳಿದ ವರ್ಗವೆಂದು ಬದ ಲಾಯಿಸಿಕೊಂಡರು ಎಂದೂ ಆರೋ  ಪಿಸಿ ದ್ದಾರೆ. ಗೆಸ್ಟ್‌ಹೌಸ್‌ ಪ್ರಕರಣ ವನ್ನೂ ಪ್ರಸ್ತಾಪಿಸಿದ ಮಾಯಾವತಿ, “1995ರ ಅತಿಥಿ ಗೃಹ ಪ್ರಕರಣದ ಬಳಿಕವೂ ಇಂದು ಮುಲಾಯಂ ಅವರಿಗಾಗಿ ಮತ ಕೇಳಲು ನಾನು ಯಾಕೆ ಬಂದೆ ಎಂದು ಕೆಲವರು ಯೋಚಿ ಸುತ್ತಿರ ಬಹುದು. ಆದರೆ, ದೇಶದ, ಸಾರ್ವಜ ನಿಕರ ಹಿತಾಸಕ್ತಿ ಯಿಂದ ಕೆಲವೊಮ್ಮೆ ಕಠಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದಿದ್ದಾರೆ.

ಬಿಜೆಪಿ ಲೇವಡಿ
ಎಸ್ಪಿ-ಬಿಎಸ್ಪಿ ರ್ಯಾಲಿ ಬಗ್ಗೆ ಲೇವಡಿ ಮಾಡಿರುವ ಬಿಜೆಪಿ, “ಪ್ರಧಾನಿ ಮೋದಿ ಅವರ ಪರ ಇರುವಂಥ ಬಿರುಗಾಳಿಗೆ ಹೆದರಿ ಈ ಇಬ್ಬರು ನಾಯಕರು ಒಂದಾಗಿದ್ದಾರೆ. ಆದರೆ, ದೇಶದ ಹಾಗೂ ಉತ್ತರ ಪ್ರದೇಶದ ಜನ ಮೋದಿಯವರ ಜತೆಗಿದ್ದಾರೆ’ ಎಂದು ಹೇಳಿದೆ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.