ಹೊರನಾಡಿನಲ್ಲೂ ಕನ್ನಡ ಮಾಧ್ಯಮಕ್ಕೆ ಹಿನ್ನಡೆ 

Team Udayavani, Feb 13, 2018, 8:15 AM IST

a-23.jpg

ಮುಂಬೈ: ಕರ್ನಾಟಕದಲ್ಲಿ ಇಂಗ್ಲಿಷ್‌ ಪ್ರಭಾವದಿಂದ ಕನ್ನಡ ಮಾಧ್ಯಮ ಶಾಲೆಗಳು ಬಾಗಿಲು ಮುಚ್ಚುತ್ತಿರುವಂತೆ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿಯೂ ಕನ್ನಡ ಶಾಲೆಗಳ ಸ್ಥಿತಿ ಭಿನ್ನವಾಗಿಲ್ಲ. ಬೃಹನ್‌ ಮುಂಬೈ ಮಹಾನಗರದಲ್ಲಿ ನೂರಕ್ಕೂ ಹೆಚ್ಚಿಗೆ ಇದ್ದ ಕನ್ನಡ ಶಾಲೆಗಳ ಸಂಖ್ಯೆ ಈಗ ಇಪ್ಪತ್ತೆಂಟಕ್ಕೆ ಇಳಿದಿದೆ. ಅದಕ್ಕೆ ತದ್ವಿರುದ್ಧವಾಗಿ ಮುಂಬೈನಲ್ಲಿ ನೂರಕ್ಕೂ ಹೆಚ್ಚು ಕನ್ನಡ ಸಂಘಗಳು ಹುಟ್ಟಿಕೊಂಡಿವೆ. ಜಾತಿ, ಪ್ರಾದೇಶಿಕತೆ, ಸಮುದಾಯದ ಹೆಸರಿನಲ್ಲಿ ಸಂಘಗಳು ಸಕ್ರಿಯವಾಗಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿವೆ.

ಪಾಲಿಕೆಯಿಂದಲೇ ಕನ್ನಡ ಶಾಲೆ: ಮುಂಬೈ ಮಹಾನಗರದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 20 ಲಕ್ಷಕ್ಕೂ ಹೆಚ್ಚು 
ಕನ್ನಡಿಗರು ನೆಲೆಸಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿಯೇ 1939 ರಲ್ಲಿ ವಡಾಲಾದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮೂಲಕ ಕನ್ನಡ
ಶಾಲೆಯನ್ನು ಆರಂಭಿಸಲಾಗಿತ್ತು. ನಂತರ ಮುಂಬೈ ಮಹಾನಗರ ಪಾಲಿಕೆಯೇ 92 ಕನ್ನಡ ಶಾಲೆಗಳನ್ನು ಆರಂಭಿಸಿ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ಪೋತ್ಸಾಹ ನೀಡುತ್ತಿತ್ತು. ಅದಲ್ಲದೇ 12 ಕನ್ನಡ ಶಾಲೆಗಳನ್ನು ಖಾಸಗಿಯವರು ಆರಂಭಿಸಿದ್ದರು. ಪಾಲಿಕೆ ಅನುದಾನದಿಂದ ಬಂಟರ ಸಂಘದವರು 18ಕ್ಕೂ ಹೆಚ್ಚು ಕನ್ನಡದ ರಾತ್ರಿ ಶಾಲೆಗಳನ್ನೂ ಆರಂಭಿಸಿದರು. ಮುಂಬೈ ಮಹಾನಗರ ಪಾಲಿಕೆ ಇದಕ್ಕೆ ಅನುದಾನವನ್ನೂ ನೀಡುತ್ತಿತ್ತು. ಒಂದು ಕಾಲದಲ್ಲಿ ಒಂದೇ ಕ್ಲಾಸಿಗೆ 6 ವಿಭಾಗಗಳು
ನಡೆಯುತ್ತಿದ್ದವು, ಕನ್ನಡೇತರರ ಮಕ್ಕಳು. ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡುತ್ತಿದ್ದರು.

ಪೋಷಕರ ನಿರಾಸಕ್ತಿ: ಪೋಷಕರು ಕನ್ನಡ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ನಿರಾಸಕ್ತಿ
ತೋರಿಸುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಒಂದೊಂದೆ ಶಾಲೆಗಳನ್ನು ಮುಂಬೈ ಮಹಾನಗರ ಪಾಲಿಕೆ ಬಾಗಿಲು ಮುಚ್ಚಿಸುತ್ತಿದೆ. ಶಿವಸೇನೆಯ ವಿರೋಧದ ನಡುವೆಯೂ ಕನ್ನಡ ಶಾಲೆಗಳನ್ನು ಜೀವಂತ ಇಡುವಲ್ಲಿ ಕನ್ನಡ ಸಂಘಗಳು ಪ್ರಯತ್ನ ನಡೆಸಿವೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕನ್ನಡ ಮಾಧ್ಯಮವನ್ನು ಜೀವಂತವಾಗಿಡಲು ಈ ಶಾಲೆಗೆ ಸೇರುವ ಯಾವುದೇ ಭಾಷೆಯ ವಿದ್ಯಾರ್ಥಿಗಳಿಗೂ ಕನ್ನಡ ಒಂದು ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿದೆ. ಸುಮಾರು 2000 ಮಕ್ಕಳಿರುವ ಈ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಓದುವ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಎಲ್ಲ ಮಕ್ಕಳಿಗೂ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಸುತ್ತಿದ್ದಾರೆ.

ಸಂಸ್ಕೃತಿ ಜೀವಂತಕ್ಕೆ ಕಸರತ್ತು: ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಲು ಇಷ್ಟ ಪಡದ ಪೋಷಕರು, ಕನ್ನಡ ಬಾಷೆ ಮತ್ತು ಸಂಸ್ಕೃತಿ ಜೀವಂತವಾಗಿಡುವಲ್ಲಿ ಮಾತ್ರ ಶ್ರಮಿಸುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆ, ಚಂಬೂರು ಕನ್ನಡ ಸಂಘ, ಕೋರ್ಟ್‌ ಕನ್ನಡ ಸಂಘ, ಚಿನ್ನರ ಬಿಂಬ, ಬಿಲ್ಲವ, ಮೊಗವೀರ, ಬಂಟರ ಸಂಘಟನೆಗಳು ಮಕ್ಕಳಿಗೆ ಕನ್ನಡ ಭಾಷೆ, ಜಾನಪದ, ಕರಾವಳಿ ಸಂಸ್ಕೃತಿ ಕಲಿಸುವ, ಕನ್ನಡ ನೃತ್ಯಗಳ ಮೂಲಕ ಹಾಗೂ ನಾಟಕಗಳನ್ನು ಆಡಿಸುವ ಮೂಲಕ ಮಕ್ಕಳಿಗೆ ಮನಸಲ್ಲಿ ಕನ್ನಡ ನಾಡಿನಬಗ್ಗೆ ಹೆಮ್ಮೆ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಕಾರ್ಮಿಕರ ಸಂಖ್ಯೆ ಕಡಿಮೆ: ಶಾಲೆಗಳಿಗೆ ಕನ್ನಡದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಪ್ರಮುಖ ಕಾರಣ ಗಾರೆ ಕೆಲಸ, ಹೋಟೆಲ… ಉದ್ಯಮದ ಕೂಲಿ ಕೆಲಸಕ್ಕೆ ಆಗಮಿಸುವವರ ಸಂಖ್ಯೆ ಕಡಿಮೆಯಾಗಿದೆ. ಮುಂಬೈ ಕನ್ನಡಿಗರ ಜೀವನ ಮಟ್ಟವೂ ಏರಿಕೆಯಾಗಿರುವುದರಿಂದ ಅವರೂ ಇಂಗ್ಲಿಷ್‌ ಮಾಧ್ಯಮದ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಕನ್ನಡ ಮಾಧ್ಯಮಕ್ಕೆ ವಿದ್ಯಾರ್ಥಿಗಳ ಕೊರತೆಯಾಗುತ್ತಿದೆ ಎಂದು ಬೃಹನ್‌ ಮುಂಬೈ ಕಸಾಪ ಅಧ್ಯಕ್ಷ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಯೂ
ಆಗಿರುವ ಶಂಕರಲಿಂಗ ಅವರು ಅಭಿಪ್ರಾಯಪಡುತ್ತಾರೆ. 

ತಂದೆ, ತಾಯಿಗಳಿಗೆ ಇಂಗ್ಲಿಷ್‌ ವ್ಯಾಮೋಹ ಹೆಚ್ಚಾಗಿದೆ. ಕನ್ನಡ ಶಾಲೆಗಳು ಮುಚ್ಚಲು ಪೋಷಕರೇ ಕಾರಣ. ಇಲ್ಲಿಯೇ ಕನ್ನಡ ಶಾಲೆಯಲ್ಲಿ ಓದಿ ದೊಡ್ಡ ಉದ್ಯಮಿಗಳಾಗಿದ್ದಾರೆ. ಈಗ ಅವರು ತಮ್ಮ ಮಕ್ಕಳನ್ನು ಕನ್ನಡ ಬದಲಿಗೆ ಇಂಗ್ಲಿಷ್‌ ಶಾಲೆಗೆ ಸೇರಿಸುತ್ತಾರೆ. ಹೀಗಾಗಿ ಕನ್ನಡಕ್ಕೆ ಈ ಸ್ಥಿತಿ ಬಂದಿದೆ. ಪಾಲಿಕೆ ಶಾಲೆ ಇಟ್ಟುಕೊಂಡು ಏನು ಮಾಡುತ್ತದೆ.
● ಡಾ. ಮಂಜುನಾಥ, ಮೈಸೂರು ಅಸೋಸಿಯೇಷನ್‌ನ ಹಿರಿಯ ಕನ್ನಡಿಗ

ಶಂಕರ ಪಾಗೋಜಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.