Udayavni Special

ಬಾಬರಿ ಪ್ರಕರಣದಲ್ಲಿ ಕೇಂದ್ರ ಸರಕಾರಗಳ ಪಾತ್ರ

Team Udayavani, Oct 1, 2020, 6:25 AM IST

ಬಾಬರಿ ಪ್ರಕರಣದಲ್ಲಿ ಕೇಂದ್ರ ಸರಕಾರಗಳ ಪಾತ್ರ

ಬಾಬರಿ ಮಸೀದಿ ವಿವಾದದ ಉಗಮ ಸ್ಥಾನ ಉತ್ತರ ಪ್ರದೇಶದ ಫೈಜಾಬಾದ್‌ ಜಿಲ್ಲೆಯ ಅಯೋಧ್ಯೆ. 1980-90ರ ದಶಕದಲ್ಲಿ ಅಲ್ಲಿ ವಿವಾದವಾಗಿದ್ದಾಗ ಅಂದಿನ ರಾಜಕೀಯ ಪರಿಸ್ಥಿತಿ ಹೇಗಿತ್ತು. ಈ ರಾಮಮಂದಿರ ಗಲಾಟೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲು ಆ ಅವಧಿಯಲ್ಲಿದ್ದ ರಾಜೀವ್‌ ಗಾಂಧಿ, ವಿ.ಪಿ. ಸಿಂಗ್‌, ಪಿ.ವಿ. ನರಸಿಂಹ ರಾವ್‌ ಸರಕಾರಗಳು ಹೇಗೆ ಪ್ರಯತ್ನಿಸಿದವು. ಅದರಿಂದ ಅವು ಯಶಸ್ವಿಯಾದವೇ, ವೈಫ‌ಲ್ಯವಾದವೇ ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ರಾಜೀವ್‌ ಗಾಂಧಿ
1980ರ ದಶಕದಲ್ಲಿ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯ ಜಾಗದಲ್ಲಿ ಪುನಃ ರಾಮಮಂದಿರ ತಲೆ ಎತ್ತಬೇಕು ಎಂಬ ಬಗ್ಗೆ ರಾಷ್ಟ್ರವ್ಯಾಪಿ ಅಭಿಯಾನ ನಡೆಸುವ ಸಲುವಾಗಿ ರಥಯಾತ್ರೆ ಕೈಗೊಳ್ಳಲು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಆಲೋಚಿಸಿತು. ಅದನ್ನು 1990ರಲ್ಲಿ ಸಮರ್ಥವಾಗಿ ಅನುಷ್ಠಾನಗೊಳಿಸಿದ್ದು ವಿಎಚ್‌ಪಿಯ ರಾಜಕೀಯ ಧ್ವನಿಯೆನಿಸಿದ್ದ ಬಿಜೆಪಿ. ಅಷ್ಟರಲ್ಲಿ, ಫೈಜಾಬಾದ್‌ ಜಿಲ್ಲಾ ನ್ಯಾಯಾಲಯ 1986ರಲ್ಲಿ ತೀರ್ಪೊಂದನ್ನು ನೀಡಿ, ವಿವಾದಿತ ಬಾಬರಿ ಮಸೀದಿಯಲ್ಲಿ ಹಿಂದೂಗಳು ಕೂಡ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿತು. ಶಾ ಬಾನೋ ಪ್ರಕರಣದಲ್ಲಿ ಹಿಂದೂಗಳ ವಿವಾದ ಕಟ್ಟಿಕೊಂಡಿದ್ದ ರಾಜೀವ್‌ ಗಾಂಧಿ ಸರಕಾರ, ಫೈಜಾಬಾದ್‌ ನ್ಯಾಯಾಲಯದ ತೀರ್ಪನ್ನು ಹಿಂದೂಗಳ ಮೆಚ್ಚುಗೆ ಗಳಿಸಲು ಬಳಸಿಕೊಂಡಿತು. ಆದರೆ, ಅದು ಫ‌ಲ ನೀಡಲಿಲ್ಲ. 1989ರ ಮಹಾಚುನಾವಣೆಯಲ್ಲಿ ರಾಜೀವ್‌ ಗಾಂಧಿ ಸರಕಾರ ಸೋಲೊಪ್ಪಿಕೊಂಡಿತು.

ವಿ.ಪಿ. ಸಿಂಗ್‌
ಮತ್ತೂಂದೆಡೆ, 1984ರಲ್ಲಿ ಲೋಕಸಭೆಯಲ್ಲಿ ಕೇವಲ 2 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ, 1989ರ ಹೊತ್ತಿಗೆ 85 ಸ್ಥಾನಗಳನ್ನು ಪಡೆದಿತ್ತು. ಆಗ ಅದು, ನ್ಯಾಷನಲ್‌ ಫ್ರಂಟ್‌ ಒಕ್ಕೂಟಕ್ಕೆ ಬಾಹ್ಯ ಬೆಂಬಲ ನೀಡಿದ್ದರಿಂದ ಕೇಂದ್ರದಲ್ಲಿ ವಿಶ್ವನಾಥ್‌ ಪ್ರತಾಪ್‌ ಸಿಂಗ್‌ ನೇತೃತ್ವದಲ್ಲಿ ಸರಕಾರ ರಚನೆಯಾಯಿತು. 1990ರಲ್ಲಿ ಲಾಲ್‌ಕೃಷ್ಣ ಆಡ್ವಾಣಿಯವರ ಸಾರಥ್ಯದಲ್ಲಿ ರಥಯಾತ್ರೆ ಪ್ರಾರಂಭವಾಯಿತು. ಬಿಹಾರಕ್ಕೆ ಈ ರಥಯಾತ್ರೆ ಆಗಮಿಸಿದಾಗ ಆಡ್ವಾಣಿ ಬಂಧನಕ್ಕೊಳಗಾದರು. ಆಗ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂಪ್ರಸಾದ್‌ ಯಾದವ್‌, ಆಡ್ವಾಣಿಯವರನ್ನು ಗೃಹಬಂಧನದಲ್ಲಿ ಇಟ್ಟಿದ್ದರು. ಇದು ರಾಷ್ಟ್ರವ್ಯಾಪಿ ವಿವಾದವಾಯಿತು. ಅದರ ಬಿಸಿ ಕೇಂದ್ರಕ್ಕೂ ತಟ್ಟಿತು. ಕೂಡಲೇ ವಾಜಪೇಯಿ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ ಕೇಂದ್ರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದರು. ಪರಿಣಾಮವಾಗಿ ವಿ.ಪಿ.ಸಿಂಗ್‌ ನೇತೃ ತ್ವದ ಸರಕಾರ ಪತನಗೊಂಡಿತು.

ಪಿ.ವಿ. ನರಸಿಂಹ ರಾವ್‌
1991ರಿಂದ 1996ರವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಿ.ವಿ. ನರಸಿಂಹ ರಾವ್‌ ನೇತೃತ್ವದ ಸರಕಾರ, ಉತ್ತರ ಪ್ರದೇಶದಲ್ಲಿ ಬಾಬರಿ ಮಸೀದಿ ವಿವಾದ ತಾರಕಕ್ಕೇರಿದ್ದರೂ, ನಿರ್ಲಿಪ್ತವಾಗಿದ್ದದ್ದೇ ಮುಂದಿನ ಬೆಳವಣಿಗೆಗೆ ಕಾರಣ ಎಂಬ ಆರೋಪವಿದೆ. ಬಾಬರಿ ಮಸೀದಿ ಕೆಡವಿದ ಮೇಲೆ, ಉತ್ತರ ಪ್ರದೇಶದಲ್ಲಿದ್ದ ಕಲ್ಯಾಣ್‌ ಸಿಂಗ್‌ ಸರಕಾರವನ್ನು ನರಸಿಂಹರಾವ್‌ ಸರಕಾರ ವಜಾ ಮಾಡಿತ್ತು. ಇದರ ಪರಿಣಾಮವಾಗಿ ರಾವ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಮುಂದಿನ ಚುನಾವಣೆಯಲ್ಲಿ ಪುನಃ ಅಧಿಕಾರಕ್ಕೆ ಬರುವಲ್ಲಿ ವಿಫ‌ಲವಾಯಿತು.

ಮೋದಿಯಿಂದ ಸೌಹಾರ್ದಯುತ ವೇದಿಕೆ
ಕೇಂದ್ರದಲ್ಲಿ ನರೇಂದ್ರ ಮೋದಿಯವರ ಮೊದಲ ಅವಧಿಯ ಸರಕಾರ ಅಧಿಕಾರಕ್ಕೆ ಬಂದಾಗ, ಅಷ್ಟರಲ್ಲಾಗಲೇ ರಾಮಜನ್ಮಭೂಮಿ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. 2019ರಲ್ಲಿ ಆ ಪ್ರಕರಣದ ತೀರ್ಪು ಹೊರಬೀಳುವಷ್ಟರಲ್ಲಿ ಯಾವುದೇ ಗಲಭೆಗಳಾಗದಂತೆ, ಯಾವುದೇ ಸಂಘರ್ಷಗಳು ಉಂಟಾಗದಂತೆ ಒಂದು ಸೌಹಾರ್ದಯುತ ವೇದಿಕೆಯನ್ನು ಸಜ್ಜುಗೊಳಿಸಿದ ಹೆಗ್ಗಳಿಕೆ ಮೋದಿ ಸರಕಾರಕ್ಕೆ ಸಲ್ಲುತ್ತದೆ. ಅದರ ಪರಿಣಾಮ, ಆ. 5ರಂದು ಅಯೋಧ್ಯೆಯಲ್ಲಿ ಮೋದಿಯವರೇ ಖುದ್ದಾಗಿ ಶ್ರೀರಾಮಮಂದಿರದ ಭೂಮಿ ಪೂಜೆ ನೆರವೇರಿಸಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ

ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ

ಸಿದ್ದರಾಮಯ್ಯ ಸಿಎಂ ಆಗಲಿ ಎಂಬುದು ವೈಯಕ್ತಿಕ ಅಭಿಪ್ರಾಯ ನೋಟಿಸ್‌ ಕೊಟ್ರೆ ಉತ್ತರಿಸುತ್ತೇನೆ

ಸಿದ್ದರಾಮಯ್ಯ CM ಆಗಲಿ ಎಂಬುದು ವೈಯಕ್ತಿಕ ಅಭಿಪ್ರಾಯ; ನೊಟೀಸ್‌ ಕೊಟ್ರೆ ಉತ್ತರಿಸುತ್ತೇನೆ !

chennai

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ KKR: ಟಾಸ್ ಗೆದ್ದ ಧೋನಿ ಪಡೆ

ಉಡುಪಿ: ಕೋವಿಡ್‌ ಲಸಿಕೆಗಾಗಿ ಡೇಟಾ ಬೇಸ್‌ ಸಿದ್ಧಪಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಉಡುಪಿ: ಕೋವಿಡ್‌ ಲಸಿಕೆಗಾಗಿ ಡೇಟಾ ಬೇಸ್‌ ಸಿದ್ಧಪಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 1 ಸಾವು, 62 ಮಂದಿಗೆ ಸೋಂಕು ದೃಢ

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 1 ಸಾವು, 62 ಮಂದಿಗೆ ಸೋಂಕು ದೃಢ

ಜಮ್ಮು-ಕಾಶ್ಮೀರ ಭೂಮಿ ಖರೀದಿ ಕಾನೂನು: ಪಿಡಿಪಿ ಪ್ರತಿಭಟನೆ, ಹಲವರ ಬಂಧನ

ಜಮ್ಮು-ಕಾಶ್ಮೀರ ಭೂಮಿ ಖರೀದಿ ಕಾನೂನು: ಪಿಡಿಪಿ ಪ್ರತಿಭಟನೆ, ಹಲವರ ಬಂಧನ

ನ. 1ರಂದು ಮತ್ತೂಂದು ಸೆಂಟಿಮೆಂಟ್‌ ಸಿನಿಮಾ ರಿಲೀಸ್ ಆಗಲಿದೆ : ಮುನಿರತ್ನ

ನ. 1ರಂದು ಮತ್ತೊಂದು ಸೆಂಟಿಮೆಂಟ್‌ ಸಿನಿಮಾ ರಿಲೀಸ್ ಆಗಲಿದೆ : ಮುನಿರತ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ

ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ

ಜಮ್ಮು-ಕಾಶ್ಮೀರ ಭೂಮಿ ಖರೀದಿ ಕಾನೂನು: ಪಿಡಿಪಿ ಪ್ರತಿಭಟನೆ, ಹಲವರ ಬಂಧನ

ಜಮ್ಮು-ಕಾಶ್ಮೀರ ಭೂಮಿ ಖರೀದಿ ಕಾನೂನು: ಪಿಡಿಪಿ ಪ್ರತಿಭಟನೆ, ಹಲವರ ಬಂಧನ

ಕಾಶ್ಮೀರದಲ್ಲಿ ಭೂಮಿ ಖರೀದಿಗೆ ಅವಕಾಶ; ಕೇಂದ್ರದ ನಿರ್ಧಾರ ಸ್ವಾಗತಿಸಿದ ಕಾಶ್ಮೀರಿ ಪಂಡಿತರು

ಕಾಶ್ಮೀರದಲ್ಲಿ ಭೂಮಿ ಖರೀದಿಗೆ ಅವಕಾಶ; ಕೇಂದ್ರದ ನಿರ್ಧಾರ ಸ್ವಾಗತಿಸಿದ ಕಾಶ್ಮೀರಿ ಪಂಡಿತರು

ಕೇರಳದಲ್ಲಿ ವೆಡ್ಡಿಂಗ್‌ ಫೋಟೋ ಶೂಟ್‌ಗಳಿಗೆ ಬಾಡಿಗೆಗೆ ಸಿಗಲಿವೆಯಂತೆ ಕೆಎಸ್‌ಆರ್‌ಟಿಸಿ ಬಸ್‌

ಕೇರಳದಲ್ಲಿ ವೆಡ್ಡಿಂಗ್‌ ಫೋಟೋ ಶೂಟ್‌ಗಳಿಗೆ ಬಾಡಿಗೆಗೆ ಸಿಗಲಿವೆಯಂತೆ ಕೆಎಸ್‌ಆರ್‌ಟಿಸಿ ಬಸ್‌

ಪರಿಸರ ಸ್ನೇಹಿ ಪಟಾಕಿ ಬಳಸಿ, ಆದೇಶ ಉಲ್ಲಂಘಿಸಿದ್ರೆ ಒಂದು ಲಕ್ಷ ರೂ.ದಂಡ: ದೆಹಲಿ ಸರ್ಕಾರ

ಪರಿಸರ ಸ್ನೇಹಿ ಪಟಾಕಿ ಬಳಸಿ, ಆದೇಶ ಉಲ್ಲಂಘಿಸಿದ್ರೆ ಒಂದು ಲಕ್ಷ ರೂ.ದಂಡ: ದೆಹಲಿ ಸರ್ಕಾರ

MUST WATCH

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

ಹೊಸ ಸೇರ್ಪಡೆ

ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ

ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ

ಸಿದ್ದರಾಮಯ್ಯ ಸಿಎಂ ಆಗಲಿ ಎಂಬುದು ವೈಯಕ್ತಿಕ ಅಭಿಪ್ರಾಯ ನೋಟಿಸ್‌ ಕೊಟ್ರೆ ಉತ್ತರಿಸುತ್ತೇನೆ

ಸಿದ್ದರಾಮಯ್ಯ CM ಆಗಲಿ ಎಂಬುದು ವೈಯಕ್ತಿಕ ಅಭಿಪ್ರಾಯ; ನೊಟೀಸ್‌ ಕೊಟ್ರೆ ಉತ್ತರಿಸುತ್ತೇನೆ !

chennai

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ KKR: ಟಾಸ್ ಗೆದ್ದ ಧೋನಿ ಪಡೆ

ಉಡುಪಿ: ಕೋವಿಡ್‌ ಲಸಿಕೆಗಾಗಿ ಡೇಟಾ ಬೇಸ್‌ ಸಿದ್ಧಪಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಉಡುಪಿ: ಕೋವಿಡ್‌ ಲಸಿಕೆಗಾಗಿ ಡೇಟಾ ಬೇಸ್‌ ಸಿದ್ಧಪಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 1 ಸಾವು, 62 ಮಂದಿಗೆ ಸೋಂಕು ದೃಢ

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 1 ಸಾವು, 62 ಮಂದಿಗೆ ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.