IRCTCಯಿಂದ ಬಂಪರ್ ಆಫರ್ : 990 ರೂ.ಪಾವತಿಸಿ ಒಂದೇ ದಿನದಲ್ಲಿ ತಿಮ್ಮಪ್ಪನ ದರ್ಶನ ಪಡೆಯಿರಿ!
Team Udayavani, Apr 14, 2023, 7:22 AM IST
ನವದೆಹಲಿ: ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ಹೋಗಬೇಕೆಂದುಕೊಂಡರೂ ಒಂದೇ ದಿನಕ್ಕೆ ದರ್ಶನ ಸಾಧ್ಯವಿಲ್ಲವೆಂದು ಭಾವಿಸಿ, ಸಮಯದ ಅಭಾವದಿಂದ ಪ್ರಯಾಣ ಕೈಗೊಳ್ಳದ ಎಷ್ಟೋ ಮಂದಿ ಇದ್ದಾರೆ. ಅಂಥವರಿಗಾಗಿಯೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಬಂಪರ್ ಅಫರ್ ನೀಡಿದೆ. ಅದೇ ಒಂದೇ ದಿನದಲ್ಲಿ ಕೇವಲ 990 ರೂ.ಗಳಲ್ಲಿ ತಿರುಪತಿ ದರ್ಶನ! ಸದ್ಯ ಏ.15ಕ್ಕೆ ಈ ಅವಕಾಶ ಪ್ರಯಾಣಿಕರಿಗಿದೆ.
ಹೌದು, ಬಾಲಾಜಿ ದರ್ಶನಕ್ಕೆಂದು ತಿರುಪತಿಗೆ ಹೋಗುತ್ತಿರುವವರು ಐಆರ್ಸಿಟಿಸಿ ಮೂಲಕ ಬಾಲಾಜಿ ದರ್ಶನ್ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಟಿಕೆಟ್ ಬುಕ್ ಮಾಡಿಕೊಂಡವರನ್ನು ತಿರುಪತಿ ರೈಲ್ವೆ ನಿಲ್ದಾಣದಿಂದ ಐಆರ್ಸಿಟಿಸಿ ರಸ್ತೆಸಾರಿಗೆ ಕರೆದೊಯ್ಯಲಿದೆ. ಪ್ಯಾಕೇಜ್ನ ನಿಯಮದಂತೆ ಎಸಿ ಬಸ್ನಲ್ಲಿ ಪ್ರಯಾಣಿಕರನ್ನು ಕರೆದೊಯ್ದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲದೇ, ಬಾಲಾಜಿ ದರ್ಶನದ ಜತೆಗೆ ತಿರುಚಾನೂರು ಪದ್ಮಾವತಿ ದರ್ಶನವನ್ನೂ ಮಾಡಿಸಲಾಗುತ್ತದೆ. ದರ್ಶನದ ಬಳಿಕ ಪ್ರಯಾಣಿಕರನ್ನು ಮತ್ತೆ ರೈಲ್ವೆ ನಿಲ್ದಾಣಕ್ಕೆ ಕರೆತರಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ