ಭಾರತೀಯ ಮೌಲ್ವಿಗಳು ಸ್ವದೇಶಕ್ಕೆ ವಾಪಸ್, ಸುಷ್ಮಾ ಸ್ವರಾಜ್ ಭೇಟಿ
Team Udayavani, Mar 20, 2017, 1:05 PM IST
ನವದೆಹಲಿ: ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ದೆಹಲಿಯ ಸೂಫಿ ಹಜ್ರತ್ ನಿಜಾಮುದ್ದೀನ್ ದರ್ಗಾದ ಇಬ್ಬರು ಧರ್ಮಗುರುಗಳು ಸೋಮವಾರ ಭಾರತಕ್ಕೆ ವಾಪಸ್ ಆಗಿದ್ದಾರೆ.
ಮಧ್ಯಾಹ್ನ ಇಬ್ಬರು ಧರ್ಮಗುರುಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿದ್ದಾರೆ ಮಾಧ್ಯಮದ ವರದಿ ತಿಳಿಸಿದೆ.
ಇಬ್ಬರು ಸುರಕ್ಷಿತವಾಗಿ ಮನೆಯನ್ನು ತಲುಪಿದ್ದಾರೆ. ಭಾರತಕ್ಕೆ ಬಂದಿಳಿದ ಇಬ್ಬರು ಮೌಲ್ವಿಗಳು ಸುದ್ದಿಗಾರರ ಜೊತೆ ಮಾತನಾಡುತ್ತ, ತಮ್ಮ ಸುರಕ್ಷಿತ ವಾಪಸಾತಿಗಾಗಿ ಕೈಗೊಂಡ ಕ್ರಮದ ಬಗ್ಗೆ ವಿದೇಶಾಂಗ ಇಲಾಖೆ, ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸೂಫಿ ಧರ್ಮಗುರುಗಳು ಸೋಮವಾರ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾಹಿತಿ ನೀಡಿದ್ದರು. “ನಾನು ಈಗಷ್ಟೇ ಕರಾಚಿಯ ಸೈಯದ್ ನಾಜಿಮ್ ಅಲಿ ನಿಜಾಮಿ ಅವರೊಂದಿಗೆ ಮಾತನಾಡಿದೆ. ಇಬ್ಬರೂ ಸುರಕ್ಷಿತವಾಗಿದ್ದು, ಸೋಮವಾರ ಮರಳುವುದಾಗಿ ಅವರು ಹೇಳಿದ್ದಾರೆ,’ ಎಂದು ಸುಷ್ಮಾ ಟ್ವೀಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ