ಇಬ್ಬರು ಯೋಧರು ಹುತಾತ್ಮ
Team Udayavani, Apr 11, 2018, 9:55 AM IST
ಜಮ್ಮು: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಪಡೆ ನಡೆಸಿದ ಭಾರಿ ಶೆಲ್ ದಾಳಿಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕ್ ಪಡೆ ಸುಂದರ್ ಬನಿ ಸೇನಾನೆಲೆಯ ಗಡಿ ರೇಖೆಯುದ್ದಕ್ಕೂ ಅಪ್ರಚೋದಿತ ದಾಳಿ ನಡೆಸಿದ್ದು, ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದೆ. ಈ ವೇಳೆ ಯೋಧರಾದ ವಿನೋದ್ ಸಿಂಗ್(24) ಮತ್ತು ಜಾಕಿ ಶರ್ಮಾ(30) ಹುತಾತ್ಮರಾದರು ಎಂದು ಸೇನೆ ತಿಳಿಸಿದೆ.