ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್ ಆದ ಸಾನಿಯಾ ಮಿರ್ಜಾ
Team Udayavani, Dec 23, 2022, 8:41 AM IST
ಮಿರ್ಜಾಪುರ: ಉತ್ತರ ಪ್ರದೆಶದ ಮಿರ್ಜಾಪುರ ಜಿಲ್ಲೆಯ ಟಿವಿ ಮೆಕ್ಯಾನಿಕ್ ಒಬ್ಬರ ಪುತ್ರಿ ಇದೀಗ ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಲು ಆಯ್ಕೆಯಾಗಿದ್ದಾರೆ.
ಜಸೋವರ್ ಗ್ರಾಮದ ಸಾನಿಯಾ ಮಿರ್ಜಾ ಅವರೇ ಈ ಸಾಧಕಿ. ಈ ಮೂಲಕ ಅವರು ಫೈಟರ್ ಪೈಲಟ್ ಆದ ದೇಶದ ಮೊದಲ ಮುಸ್ಲಿಂ ಹುಡುಗಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಎನ್ಡಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಅವರು ಈ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯ, ದೇಶಕ್ಕೇ ಕೀರ್ತಿ ತಂದಿದ್ದಾರೆ.
ಹಿಂದಿ ಮಾಧ್ಯಮದ ವಿದ್ಯಾರ್ಥಿಗಳು ಸಹ ದೃಢಸಂಕಲ್ಪ ಮಾಡಿದರೆ ಯಶಸ್ಸು ಗಳಿಸಬಹುದು ಎಂದು ಹಿಂದಿ ಮಾಧ್ಯಮ ಶಾಲೆಯಲ್ಲಿ ಓದಿದ ಸಾನಿಯಾ ಹೇಳಿದ್ದಾರೆ. ಅವರು ಡಿಸೆಂಬರ್ 27 ರಂದು ಪುಣೆಯಲ್ಲಿ ಎನ್ ಡಿಎ ಖಡಕ್ವಾಸ್ಲಾಗೆ ಸೇರಲಿದ್ದಾರೆ.
ಆಕೆಯ ಯಶಸ್ಸಿಗೆ ಪೋಷಕರು ಹಾಗೂ ಗ್ರಾಮಸ್ಥರು ಹೆಮ್ಮೆ ಪಡುತ್ತಿದ್ದಾರೆ. “ಸಾನಿಯಾ ಮಿರ್ಜಾ ದೇಶದ ಮೊದಲ ಫೈಟರ್ ಪೈಲಟ್ ಅವ್ನಿ ಚತುರ್ವೇದಿಯನ್ನು ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾಳೆ. ಮೊದಲಿನಿಂದಲೂ ಅವಳು ಅವ್ನಿಯಂತೆ ಇರಬೇಕೆಂದು ಬಯಸಿದ್ದಳು. ಫೈಟರ್ ಪೈಲಟ್ ಆಗಿ ದೇಶದಲ್ಲಿ ಆಯ್ಕೆಯಾದ ಎರಡನೇ ಹುಡುಗಿ ಸಾನಿಯಾ” ಎಂದು ಅವರ ತಂದೆ ಶಾಹಿದ್ ಅಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ